ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಸಿ. ಸಿ. ಪಾಟೀಲ್ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಧರಣಿ

|
Google Oneindia Kannada News

ಗದಗ, ಏಪ್ರಿಲ್ 27; ಶಿರಹಟ್ಟಿಯ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್‌ ನಿವಾಸದ ಮುಂದೆ ಮಂಗಳವಾರ ಧರಣಿ ನಡೆಸಲಿದ್ದಾರೆ.

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿರುವ ಸಚಿವರ ನಿವಾಸದ ಮುಂದೆ ದಿಂಗಾಲೇಶ್ವರ ಸ್ವಾಮೀಜಿ ಧರಣಿ ನಡೆಸಲಿದ್ದು, ಸಚಿವರು ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಮಾಡುವಂತೆ ಆಗ್ರಹಿಸಲಿದ್ದಾರೆ.

Breaking; ಅನುದಾನ ಪಡೆಯಲು ಕಮೀಷನ್ ಆರೋಪ; ತನಿಖೆಗೆ ಸಿದ್ಧ ಸಿಎಂBreaking; ಅನುದಾನ ಪಡೆಯಲು ಕಮೀಷನ್ ಆರೋಪ; ತನಿಖೆಗೆ ಸಿದ್ಧ ಸಿಎಂ

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಚಿವ ಸಿ. ಸಿ. ಪಾಟೀಲ್ ಮಠಗಳಿಗೆ ಅನುದಾನ ಬಿಡುಗಡೆ ಮಾಡಲು 30 ಪರ್ಸೆಂಟ್ ಕಮೀಷನ್ ಕೇಳಲಾಗುತ್ತಿದೆ ಎಂದು ಆರೋಪ ಮಾಡಿದ್ದ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಟೀಕೆಗಳನ್ನು ಮಾಡಿದ್ದರು.

'ಬಿಬಿಎಂಪಿಯಲ್ಲಿ 50 ಪರ್ಸೆಂಟ್ ಕಮೀಷನ್, 6 ಗುತ್ತಿಗೆದಾರರು ಆತ್ಮಹತ್ಯೆ: ತನಿಖೆ ಮಾಡಿದರೆ ದಾಖಲೆ ನೀಡುತ್ತೇವೆ''ಬಿಬಿಎಂಪಿಯಲ್ಲಿ 50 ಪರ್ಸೆಂಟ್ ಕಮೀಷನ್, 6 ಗುತ್ತಿಗೆದಾರರು ಆತ್ಮಹತ್ಯೆ: ತನಿಖೆ ಮಾಡಿದರೆ ದಾಖಲೆ ನೀಡುತ್ತೇವೆ'

Dingaleshwar Swamiji To Protest In Front Of Minister CC Patil House

"ದಿಂಗಾಲೇಶ್ವರ ಸ್ವಾಮೀಜಿ ಬಳಿ ಯಾರಾದರೂ ಕಮೀಷನ್ ಕೇಳಿದ್ದರೆ ದಾಖಲೆಗಳನ್ನು ಕೊಡಲಿ. ಮುಖ್ಯಮಂತ್ರಿಗಳು ತನಿಖೆ ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ಕೇವಲ ಆರೋಪ ಮಾಡುವುದು ಬೇಡ. ಸ್ವಾಮೀಜಿಗಳು ರಾಜಕಾರಣಿಗಳಾಗಿ ಮಾತನಾಡಬಾರದು" ಎಂದು ಸಚಿವರು ಹೇಳಿದ್ದರು.

ಸರ್ಕಾರದಲ್ಲಿ ಹೇಗೆ ನಡೆಯುತ್ತೆ 40 ಪರ್ಸೆಂಟ್ ಕಮೀಷನ್ ವ್ಯವಹಾರ?: ಸಂತೋಷ್ ಆರೋಪದ ಸುತ್ತಮುತ್ತ ಸರ್ಕಾರದಲ್ಲಿ ಹೇಗೆ ನಡೆಯುತ್ತೆ 40 ಪರ್ಸೆಂಟ್ ಕಮೀಷನ್ ವ್ಯವಹಾರ?: ಸಂತೋಷ್ ಆರೋಪದ ಸುತ್ತಮುತ್ತ

"ಸ್ವಾಮೀಜಿಗಳು ಮೂರು ಸಾವಿರ ಮಠದ ಪೀಠಕ್ಕಾಗಿ ಎಂತಹ ರೌಡಿಸಂ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ತೋಂಟದಾರ್ಯ ಸ್ವಾಮೀಜಿಗಳ ಮಠಕ್ಕೆ ಅನುದಾನ ಕೊಟ್ಟಿರುವುದಕ್ಕೆ ಅಸಮಾಧಾನವನ್ನು ಬೇರೆ ರೂಪದಲ್ಲಿ ಹೊರಹಾಕಿ, ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಬೇಡಿ" ಎಂದು ಸಚಿವ ಸಿ. ಸಿ. ಪಾಟೀಲ್ ಸ್ವಾಮೀಜಿ ವಿರುದ್ಧ ಆರೋಪ ಮಾಡಿದ್ದರು.

ಮೂರು ಸಾವಿರ ಮಠದ ಪೀಠಕ್ಕಾಗಿ ಎಂತಹ ರೌಡಿಸಂ ಮಾಡಿದ್ದಾರೆ ಎಂಬ ಸಚಿವರ ಹೇಳಿಕೆಗೆ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರು ತಮ್ಮ ಆರೋಪ ಸಾಬೀತು ಮಾಡಬೇಕು ಎಂದು ಒತ್ತಾಯಿಸಿ ದಿಂಗಾಲೇಶ್ವರ ಸ್ವಾಮೀಜಿ ಧರಣಿ ನಡೆಸಲಿದ್ದಾರೆ.

ಕಮೀಷನ್ ಆರೋಪ; "ಮಠಗಳಿಗೆ ಮಂಜೂರಾದ ಅನುದಾನ ಪಡೆಯಲು ಶೇ 30ರಷ್ಟು ಕಮೀಷನ್ ನೀಡಬೇಕು" ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಕೊಟ್ಟಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಸ್ವಾಮೀಜಿಗಳು ಯಾರಿಗೆ, ಯಾವ ಉದ್ದೇಶಕ್ಕೆ, ಎಷ್ಟು ಮೊತ್ತದ ಲಂಚ ನೀಡಿದ್ದಾರೆ? ಎಂಬುದರ ವಿವರ ನೀಡಲಿ. ಇದರ ಸಂಪೂರ್ಣ ತನಿಖೆ ನಡೆಸಲಾಗುತ್ತದೆ" ಎಂದು ಹೇಳಿದ್ದರು.

English summary
Dingaleshwar swamiji to protest in front of PWD minister C. C. Patil house for his comment against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X