ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ; ನಮಗೆ ಲಸಿಕೆ ಬೇಡ, ದೇವರು ಕಾಪಾಡುತ್ತೇನೆ

|
Google Oneindia Kannada News

ಗದಗ, ಜೂನ್ 11; ಕೋವಿಡ್ 2ನೇ ಅಲೆಯಿಂದಾಗಿ ಸಾವಿರಾರು ಜನರು ಇದುವರೆಗೂ ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕಿನ ವಿರುದ್ಧದ ಲಸಿಕೆಗೆ ಈಗ ಭಾರೀ ಬೇಡಿಕೆ ಇದೆ. ಆದರೆ ಇಲ್ಲೊಂದು ಪ್ರದೇಶದಲ್ಲಿ ಲಸಿಕೆ ಬೇಡ ಎಂದು ಜನರು ಹೇಳುತ್ತಿದ್ದಾರೆ.

ಇದು ಗದಗ ಜಿಲ್ಲೆಯ ಮುಳಗುಂದದ ಬಳಿ ಇರುವ ದಾವಲ್ ಮಲ್ಲಿಕ್ ಪ್ರದೇಶ. ಇಲ್ಲಿ ಸುಮಾರು 500 ಜನರು ವಾಸವಾಗಿದ್ದಾರೆ. ಬಹುತೇಕ ಜನರು ಬಟ್ಟೆ ವ್ಯಾಪಾರಿಗಳು. ಈ ಪ್ರದೇಶದ ಜನರು ನಮಗೆ ಕೋವಿಡ್ ಲಸಿಕೆ ಬೇಡ ಎಂದು ಪಟ್ಟು ಹಿಡಿದಿದ್ದಾರೆ.

ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು

ಮೂರು ಬಾರಿ ಅಧಿಕಾರಿಗಳು ಈ ಪ್ರದೇಶಕ್ಕೆ ಹೋಗಿ ಜನರ ಮನವೊಲಿಸಲು ಸಾಧ್ಯವಾಗದೇ ವಾಪಸ್ ಬಂದಿದ್ದಾರೆ. ಇಲ್ಲಿಯ ತನಕ ಯಾವುದೇ ಕೋವಿಡ್ ಪ್ರಕರಣಗಳು ಇಲ್ಲಿ ಪತ್ತೆಯಾಗಿಲ್ಲ. ಜನರು "ನಮಗೆ ಲಸಿಕೆ ಬೇಡ, ದೇವರಿದ್ದಾನೆ" ಎಂದು ಅಧಿಕಾರಿಗಳನ್ನು ವಾಪಸ್ ಕಳಿಸಿದ್ದಾರೆ.

ಎಲ್ಲರಿಗೂ ಲಸಿಕೆ ನೀಡುತ್ತಿರುವುದೇ ಅಪಾಯಕಾರಿ; ಆರೋಗ್ಯ ತಜ್ಞರ ಎಚ್ಚರಿಕೆಎಲ್ಲರಿಗೂ ಲಸಿಕೆ ನೀಡುತ್ತಿರುವುದೇ ಅಪಾಯಕಾರಿ; ಆರೋಗ್ಯ ತಜ್ಞರ ಎಚ್ಚರಿಕೆ

Gadag: Dawal Malik Villagers Says We Have God, Dont Need Covid Vaccine

ಗ್ರಾಮ ಪಂಚಾಯಿತಿಯ ಸದಸ್ಯರು ಸಹ ಜನರನ್ನು ಭೇಟಿ ಮಾಡಿ ಮನವೊಲಿಸುವ ಕಾರ್ಯ ಮಾಡಿದ್ದಾರೆ. ಆದರೆ ಜನರು ಮಾತ್ರ ಲಸಿಕೆ ಪಡೆಯಲು ತಯಾರಿಲ್ಲ. ಹೆಚ್ಚು ಒತ್ತಾಯ ಮಾಡಿದಾಗ ಲಸಿಕೆ ಹಾಕಿಸಿಕೊಂಡರೆ ಏನೂ ಆಗುವುದಿಲ್ಲ ಎಂದು 25 ಸಾವಿರ ರೂ. ಬಾಂಡ್ ನೀಡಿ ಆಗ ಹಾಕಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಡಿಸೆಂಬರ್ ವೇಳೆಗೆ 200 ಕೋಟಿ ಲಸಿಕೆ ಬಳಕೆಗೆ ಸಿದ್ಧ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾಡಿಸೆಂಬರ್ ವೇಳೆಗೆ 200 ಕೋಟಿ ಲಸಿಕೆ ಬಳಕೆಗೆ ಸಿದ್ಧ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ

ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಮೂರು ಬಾರಿ ಹೋದರೂ ಜನರು ಬೇರೆ-ಬೇರೆ ನೆಪ ಹೇಳಿ ಲಸಿಕೆ ಹಾಕಿಸಿಕೊಳ್ಳದೇ ವಾಪಸ್ ಕಳಿಸಿದ್ದಾರೆ. ಜನರ ಮನವೊಲಿಕೆ ಅಧಿಕಾರಿಗಳಿಗೆ ತಲೆನೋವಾಗಿದೆ.

ಲಸಿಕೆ ಪಡೆದರೆ ಸಾವನ್ನಪ್ಪುತ್ತಾರೆ ಎಂಬ ಭಯವಿದೆ. ನಮ್ಮೊಂದಿಗೆ ದೇವರು ಇದ್ದಾನೆ. ನಮಗೆ ಏನೂ ಆಗೋಲ್ಲ. ಇಲ್ಲಿಗೆ ಕೋವಿಡ್ ಬಂದರೂ ನಮ್ಮನ್ನು ಸಾಯಿಸಲು ಆಗಲ್ಲ. ಸಾವಿರಾರು ಜನರ ನಂಬಿಕೆಗಳಿಸಿದ ದೇವರ ಸ್ಥಳದಲ್ಲಿ ನಾವಿದ್ದೇವೆ. ದೇವರು ನಮ್ಮನ್ನು ರಕ್ಷಣೆ ಮಾಡುತ್ತಾನೆ ಎಂದು ಜನರು ಹೇಳುತ್ತಿದ್ದಾರೆ.

ಮುಳಗುಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಈ ಪ್ರದೇಶ ಬರುತ್ತದೆ. ಕೇಂದ್ರದ ವೈದ್ಯಕೀಯ ಅಧಿಕಾರಿ ಮಾತನಾಡಿದ್ದು, "ನಾವು ಜನರ ಮನವೊಲಿಕೆ ಮಾಡಲು ಪ್ರಯತ್ನ ನಡೆಸುತ್ತಿದ್ದೇವೆ. ಲಸಿಕೆ ಕುರಿತು ಅವರಲ್ಲಿ ತಪ್ಪು ಕಲ್ಪನೆಗಳಿವೆ" ಎಂದು ಹೇಳಿದ್ದಾರೆ.

Recommended Video

ಯಾವ್ಯಾವ ಜಿಲ್ಲೆಗಳು Unlock: ಹೊಸ ಮಾರ್ಗಸೂಚಿಯಲ್ಲೇನಿದೆ? | CM Yediyurappa | Oneindia Kannada

English summary
Gadag district Dawal Malik villagers not ready to take Corona vaccine. People said that we blessed by saint Dawal Malik we don't want vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X