ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ; ಕೋವಿಡ್ ಲಸಿಕೆ ಪಡೆಯುವಂತೆ ಅಜ್ಜನ ಡಂಗುರ

|
Google Oneindia Kannada News

ಗದಗ, ಮಾರ್ಚ್ 14; ಕೋವಿಡ್ ಲಸಿಕೆ ಪಡೆಯುವಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಗಣ್ಯರು ತಾವು ಲಸಿಕೆ ಪಡೆದು, ಲಸಿಕೆ ಸುರಕ್ಷಿತವಾಗಿದೆ ನೀವು ಪಡೆಯಿರಿ ಎಂದು ಜನರಿಗೆ ಕರೆ ನೀಡುತ್ತಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ವೀರಪ್ಪ ಎನ್ನುವ ವೃದ್ಧ ಡಂಗುರ ಬಾರಿಸುವ ಮೂಲಕ ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಏಷ್ಯಾದಲ್ಲಿ 2022ರ ಅಂತ್ಯಕ್ಕೆ 1 ಬಿಲಿಯನ್ ಲಸಿಕೆ ಪೂರೈಕೆ: 'ಕ್ವಾಡ್' ದೇಶಗಳ ಒಪ್ಪಿಗೆಏಷ್ಯಾದಲ್ಲಿ 2022ರ ಅಂತ್ಯಕ್ಕೆ 1 ಬಿಲಿಯನ್ ಲಸಿಕೆ ಪೂರೈಕೆ: 'ಕ್ವಾಡ್' ದೇಶಗಳ ಒಪ್ಪಿಗೆ

ವೀರಪ್ಪ ಡಂಗುರ ಸಾರಿ ಲಸಿಕೆ ಪಡೆಯುವಂತೆ ಕರೆ ನೀಡುವ ವಿಡಿಯೋವನ್ನು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಹಾಕಿಸಿಕೊಂಡ ಸಿಎಂ ಯಡಿಯೂರಪ್ಪ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಹಾಕಿಸಿಕೊಂಡ ಸಿಎಂ ಯಡಿಯೂರಪ್ಪ

Dangura To Raise Awareness On Covid-19 Vaccination

"ಗದಗ ಜಿಲ್ಲೆಯ ಜಕ್ಕಲಿ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಕೊರೊನಾ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ದೃಶ್ಯ ಪ್ರೇರಣಾದಾಯಕವಾಗಿದೆ" ಎಂದು ಸಚಿವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಡೆನ್ಮಾರ್ಕ್, ಇಟಲಿಯಲ್ಲಿ ಆಸ್ಟ್ರಾಜೆನಿಕಾ ಕೊರೊನಾ ಲಸಿಕೆ ವಿತರಣೆ ಸ್ಥಗಿತ!ಡೆನ್ಮಾರ್ಕ್, ಇಟಲಿಯಲ್ಲಿ ಆಸ್ಟ್ರಾಜೆನಿಕಾ ಕೊರೊನಾ ಲಸಿಕೆ ವಿತರಣೆ ಸ್ಥಗಿತ!

"ಕೋವಿಡ್ ವ್ಯಾಕ್ಸಿನ್ ಅಭಿಯಾನ ಜನಾಂದೋಲನವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಂಪ್ರದಾಯಿಕ ವಿಧಾನದ ಮೂಲಕ ಲಸಿಕೆ ಬಗ್ಗೆ ಅರಿವು ಮೂಡಿಸುತ್ತಿರುವುದು ಸ್ಪೂರ್ತಿ ದಾಯಕವಾಗಿದೆ" ಎಂದು ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

English summary
Dangura at Gadag to raise awareness on Covid-19 vaccination drive. Health minister Dr. Sudhakar tweeted traditional method with video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X