ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾದ ಬಗ್ಗೆ ಆತಂಕ, ಭಯ ಬೇಡ...

By ಎಚ್.ವಿ.ಶ್ಯಾನಭೋಗರ
|
Google Oneindia Kannada News

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ನಮ್ಮ ತಾಯ್ನಾಡು ಸ್ವರ್ಗಕ್ಕೆ ಸಮಾನ. ಇಲ್ಲಿ ಹರಿದಾಡುವ ಪಾವನ ನದಿಗಳು, ಸಸ್ಯಶಾಮಲೆಯಂಥ ಹಸಿರು ನಾಡು, ಕಾಡು, ತುಂಗೆ, ಭದ್ರೆ, ಕಾವೇರಿ, ಕೃಷ್ಣೆ, ಗೋದಾವರಿ, ಭೀಮೆ, ಸಿಂಧು, ಗಂಗಾ, ಯಮುನೆಯರಂತಹ ಪವಿತ್ರ ಪಾವನ ನದಿಗಳು ನಮಗೆ ಬದುಕು ಕಟ್ಟಿಕೊಟ್ಟಿವೆ.

Recommended Video

Kalaburagi marks one more corona case but Sriramulu urges not to worry

ಜಮ್ಮು, ಕಾಶ್ಮೀರ, ಹಿಮಾಚಲ ಪ್ರದೇಶಗಳಂತೂ ಸ್ವರ್ಗಕ್ಕೆ ಸಮಾನ. ಇದು ಋಷಿಮುನಿಗಳ ಬೀಡು, ತಪಸ್ಸಿನ ನಾಡು. ಇಲ್ಲಿ ದೊರೆಯುವ ಹಣ್ಣು ಹಂಪಲ ಔಷಧಿಗಳ ಫಲ, ಅನೇಕ ಬಗೆಯ ಸಸ್ಯಗಳು ನಮ್ಮ ಬದುಕಿಗೆ ದಾರಿ ದೀಪಗಳಾಗಿವೆ.

ಕೊರನಾ ವೈರಸ್ ಔಷಧಿ ತಯಾರಿಕೆಯಲ್ಲಿ ಭಾರತಕ್ಕೆ 5ನೇ ಸ್ಥಾನಕೊರನಾ ವೈರಸ್ ಔಷಧಿ ತಯಾರಿಕೆಯಲ್ಲಿ ಭಾರತಕ್ಕೆ 5ನೇ ಸ್ಥಾನ

ಕಪ್ಪತ್ತಗಿರಿಯಲ್ಲೊಂದು ಸಸ್ಯ ಸಂಜೀವಿನಿ ಉಂಟು. ಆದರೆ ಈ ಕಾಡಿಗೆ ಪ್ರತಿ ವರ್ಷವು ಬೆಂಕಿ ಇಡುತ್ತಾರೆ. ಆದರೆ ಮತ್ತೆ ಮಳೆಗಾಲಕ್ಕೆ ಚಿಗೊರೆಡೆದು ಪ್ರಾಣಿ ಪಕ್ಷಿ ಸಂಕುಲಕ್ಕೆ ಆಸರೆಯಾಗುತ್ತಿದೆ. ಇಲ್ಲಿ ಚಿನ್ನ ಕೂಡ ದೊರೆಯುತ್ತಿದೆ. ಇಂತಹ ಎಷ್ಟೋ ಗುಡ್ಡ ಬೆಟ್ಟಗಳಲ್ಲಿ ಔಷಧೀಯ ಸಸ್ಯಗಳು ಬೆಳೆಯುತ್ತವೆ. ಪಂಜಾಬ್, ಸಿಂಧ್, ಗುಜರಾತ್, ಮರಾಠ, ದ್ರಾವಿಡ ಉತ್ಕಲ ವಂಗ ವಿಂಧ್ಯ ಹಿಮಾಚಲ ಯಮುನಾ ಗಂಗಾ- ನೋಡಿ ಈ ಸಾಲುಗಳಲ್ಲಿ ದೇಶದ ಬಗೆಗೆ ಎಷ್ಟು ಸುಂದರವಾಗಿ ವರ್ಣಿಸಲಾಗಿದೆ.

Coronavirus Fear All Over India

ವೇದ, ಉಪನಿಷತ್ತು, ಮಹಾಭಾರತ, ರಾಮಾಯಣದಂಥ ಮಹಾಕಾವ್ಯಗಳು ನಮ್ಮ ದೇಶಕ್ಕೆ, ನಮ್ಮ ಜನತೆಗೆ ಮಾರ್ಗದರ್ಶಿಯಾಗಿವೆ. ಈ ಮಹಾ ಕಾವ್ಯಗಳಲ್ಲಿ ಮನುಷ್ಯನಿಗೆ ಹುಟ್ಟಿದಾಗಿನಿಂದ ಸಾಯುವವರೆಗೆ ಮಾರ್ಗದರ್ಶನವಿದೆ. ಇವುಗಳಲ್ಲಿ ಧರ್ಮವಿದೆ, ನ್ಯಾಯವಿದೆ. ತ್ಯಾಗ ಮತ್ತು ಶಾಂತಿಯ ಗುಣಗಳಿವೆ. ಭವ್ಯಭಾರತದ ಬದುಕಿನ ಮುನ್ಸೂಚನೆಗಳಿವೆ. ಇವುಗಳಲ್ಲಿ ಗಣಿತ ಲೆಕ್ಕಾಚಾರವಿದೆ...

ಕೋವಿಡ್19ಗೆ ಲಸಿಕೆ: ಯುರೋಪ್ ವಿಜ್ಞಾನಿಗಳ ತಂಡದಲ್ಲಿ ಕನ್ನಡಿಗಕೋವಿಡ್19ಗೆ ಲಸಿಕೆ: ಯುರೋಪ್ ವಿಜ್ಞಾನಿಗಳ ತಂಡದಲ್ಲಿ ಕನ್ನಡಿಗ

ಹೀಗಿರುವಾಗ ಈ ದೇಶಕ್ಕೆ ಅದಾವ ರೋಗ ಬರಲುಂಟು...? ನಮ್ಮಲ್ಲಿ ಸಾಮಾನ್ಯವಾಗಿ ಕ್ಷಯ, ಮಾರಿ ರೋಗಗಳು, ನೆಗಡಿ, ಕೆಮ್ಮು, ಸಾಮಾನ್ಯ ರೋಗಗಳು. ಇವುಗಳಿಗೆ ನಮ್ಮ ಮನೆಯ ಹಿರಿಯರು ಮದ್ದು ಅರೆದು ಕುಡಿಸುತ್ತಿದ್ದರು. ಪ್ಲೇಗ್, ಕಾಲರಾಗಳಿಂದ ಒಮ್ಮೊಮ್ಮೆ ಬದುಕು ಜರ್ಜರಿತವಾಗುತ್ತಿತ್ತು. ಅದಕ್ಕೂ ನಮ್ಮ ಹಿರಿಯರು ಮದ್ದು ಅರೆದು ಕುಡಿಸುತ್ತಿದ್ದರು. ಜೀವನವನ್ನೇ ಕುರೂಪಗೊಳಿಸುವ ಕುಷ್ಠರೋಗವಿತ್ತು. ಅದನ್ನು ಕೂಡ ಭಾರತ ಸರ್ಕಾರ ನಿಯಂತ್ರಣಕ್ಕೆ ತಂದಿದೆ.

Coronavirus Fear All Over India

ಈಗ ಪತ್ತೆಯಾಗಿರುವ ನಿಫಾ, ಏಡ್ಸ್, ಕೊರೊನಾ ಹೀಗೆ ಹಲವಾರು ರೋಗಗಳು ಪ್ರತಿ ವರ್ಷ ದಾಂಗುಡಿ ಇಡುತ್ತಲೇ ಇವೆ. ಜಗತ್ತನ್ನೇ ನಡುಗಿಸಿಬಿಡುತ್ತವೆ. ಆದರೆ ಈ ಮೇಲಿನ ಯಾವ ರೋಗಗಳೂ ನಮ್ಮ ದೇಶದಿಂದ ಬಂದಿದ್ದಲ್ಲ. ಭಾರತದಲ್ಲಿ ಯಾವ ಮಾರಕ ರೋಗಗಳೂ ಹುಟ್ಟಿಕೊಂಡಿಲ್ಲ. ಈ ನಾಡಿನ ಜೀವನಶೈಲಿ, ಆಹಾರ, ವಿಹಾರ ಇದಾವ ರೋಗಕ್ಕೂ ಆಸ್ಪದ ನೀಡಿಲ್ಲ, ನೀಡುವುದಿಲ್ಲ.

ನಮ್ಮಲ್ಲಿ ಲಕ್ಷ ಲಕ್ಷ ಜನಜಾತ್ರೆಗೆ ಸೇರುತ್ತಾರೆ. ಕೋಟಿ ಕೋಟಿ ಜನ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಒಂದೇ ನದಿಯಲ್ಲಿ ಒಂದೇ ಸಮಯದಲ್ಲಿ ಮುಳುಗಿ ಏಳುತ್ತಾರೆ. ಇಲ್ಲಿ ಒಂದೇ ಒಂದು ವೈರಸ್ ಬಂದಿದ್ದು ಗೊತ್ತಿಲ್ಲ, ಹುಟ್ಟಿದ್ದು ಗೊತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಚೀನಾದ ಈ ವೈರಸ್ ನಮಗೇನು ಅಂತಹ ಪರಿಣಾಮ ಬೀರಿಲ್ಲ. ಆದರೆ ಜನರಿಗೆ ಆತಂಕ ಹೆಚ್ಚುತ್ತಿದೆ. ಮಾಧ್ಯಮಗಳೂ ಜನರನ್ನು ಗಾಬರಿಗೊಳಿಸುವಂತಾಗಿದೆ.

ಎರಡು ತಿಂಗಳಿನಲ್ಲಿ ಜಾಗತಿಕವಾಗಿ ಕೊರೊನಾಗೆ ಮರಣ ಹೊಂದಿದವರ ಸಂಖ್ಯೆ 3,800. ವಿಶ್ವಾದ್ಯಂತ ಕೊರೊನಾದಿಂದ ಆದ ಸಾವು ನೋವಿಗಿಂತ ಇದರ ಪ್ರಚಾರ ರಾಕ್ಷಸಿ ರೂಪ ತಾಳಿದೆ ಎನಿಸುತ್ತದೆ.

English summary
There is a fear of coronavirus all over india. This fear is getting more day by day. And this fear is fueld by unnecessary information about coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X