• search
  • Live TV
ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 112 ಕೋಟಿ ಅನುದಾನ

|
Google Oneindia Kannada News

ಗದಗ, ಫೆಬ್ರವರಿ 03; ನಿರ್ಮಲಾ ಸೀತಾರಾಮನ್ 2022-23ನೇ ಬಜೆಟ್ ಮಂಡನೆ ಮಾಡಿದ್ದಾರೆ. ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್‌ನಲ್ಲಿ ವಿಲೀಗೊಂಡ ಬಳಿಕ 6ನೇ ಬಜೆಟ್ ಮಂಡನೆಯಾಗಿದೆ. ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಒಟ್ಟು 1.40 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ.

ಬಜೆಟ್‌ ಬಳಿಕ ಪಿಂಕ್ ಬುಕ್‌ನಲ್ಲಿ ವಿವಿಧ ರೈಲು ಯೋಜನೆಗಳಿಗೆ ಎಷ್ಟು ಅನುದಾನ ಸಿಕ್ಕಿದೆ ಎಂಬ ವಿವರ ನೀಡಲಾಗಿದೆ. ಗದಗ-ವಾಡಿ ರೈಲು ಮಾರ್ಗಕ್ಕೆ ಬಜೆಟ್‌ನಲ್ಲಿ 112 ಕೋಟಿ ರೂ. ಅನುದಾನ ಕೊಡಲಾಗಿದೆ.

Budget 2022; 400 ವಂದೇ ಭಾರತ್ ರೈಲುಗಳ ನಿರ್ಮಾಣ Budget 2022; 400 ವಂದೇ ಭಾರತ್ ರೈಲುಗಳ ನಿರ್ಮಾಣ

ಕೊಟ್ಟೂರು-ಹರಿಹರ ನೂತನ ಮಾರ್ಗಕ್ಕೆ 68 ಕೋಟಿ, ರಾಯದುರ್ಗ-ತುಮಕೂರು ಯೋಜನೆಗೆ 50 ಕೋಟಿ, ಮುನಿರಾಬಾದ್-ಮೆಹಬೂಬ್ ನಗರ ಮಾರ್ಗಕ್ಕೆ 210 ಕೋಟಿ ರೂ. ಬಜೆಟ್‌ನಲ್ಲಿ ಘೋಷಣೆಯಾಗಿದೆ.

Railway Budget 2022; ರೈಲ್ವೆ ಇಲಾಖೆಯ ಪ್ರಮುಖ ಘೋಷಣೆಗಳು Railway Budget 2022; ರೈಲ್ವೆ ಇಲಾಖೆಯ ಪ್ರಮುಖ ಘೋಷಣೆಗಳು

ಜೋಡಿ ರೈಲು ಮಾರ್ಗ; ಹೊಸಪೇಟೆ-ಲೋಂಡಾ-ವಾಸ್ಕೋ ಜೋಡಿ ಹಳಿ ನಿರ್ಮಾಣಕ್ಕೆ 100 ಕೋಟಿ, ಯಲಹಂಕ-ಪೆನುಕೊಂಡ ಮಾರ್ಗಕ್ಕೆ 54 ಕೋಟಿ, ಪೆನುಕೊಂಡ-ಧರ್ಮಾವರಂ ಮಾರ್ಗಕ್ಕೆ 50 ಕೋಟಿ, ಪುಣೆ-ದೌಂಡ್-ಕಲಬುರಗಿ-ಗುಂತಕಲ್‌ ಜೋಡಿ ಹಳಿ ವಿದ್ಯುದೀಕರಣಕ್ಕೆ 100 ಕೋಟಿ, ಗೂಟಿ-ಧರ್ಮಾವರಂ ಜೋಡಿ ಮಾರ್ಗಕ್ಕೆ 20 ಕೋಟಿ ಹಾಗೂ ಕಲ್ಲೂರು-ಗುಂತಕಲ್ ಮಾರ್ಗಕ್ಕೆ 13 ಕೋಟಿ ಒದಗಿಸಲಾಗಿದೆ.

ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು

ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ 43 ಎಕರೆ ಭೂಮಿಯನ್ನು ಮೀಸಲಿಟ್ಟಿದ್ದರು. ಸಾಂಕೇತಿಕವಾಗಿ ಕಲಬುರಗಿ ಕಚೇರಿಗೆ 1 ಸಾವಿರ ಕೊಟ್ಟಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಸಚಿವರಾಗಿದ್ದಾಗ ಬಜೆಟ್‌ನಲ್ಲಿ ಕಲಬುರಗಿ ರೈಲ್ವೆ ವಿಭಾಗ ಘೋಷಣೆ ಮಾಡಿದ್ದರು. ಅಗತ್ಯ ಅನುದಾನವನ್ನು ಮೀಸಲಾಗಿಟ್ಟಿದ್ದರು. ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಲು 3.5 ಕೋಟಿ ನಿಗದಿ ಮಾಡಿದ್ದರು.

2014ರ ಫೆಬ್ರವರಿಯಲ್ಲಿ ರೈಲ್ವೆ ವಿಭಾಗ ಸ್ಥಾಪನೆಗೆ ಶಂಕು ಸ್ಥಾಪನೆ ಮಾಡಲಾಗಿತ್ತು. ಕಚೇರಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 42 ಎಕರೆ ಜಮೀನು ನೀಡಿತ್ತು. ಆದರೆ ಬಳಿಕ ಯೋಜನೆ ವೇಗ ಪಡೆಯಲೇ ಇಲ್ಲ. ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಈ ಭಾಗದ ಜನರು ದೂರುತ್ತಿದ್ದಾರೆ.

ಹೆಚ್ಚಿನ ಅನುದಾನ; ಈ ವರ್ಷದ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ 1.40 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದೆ. ಕಳೆದ ಬಜೆಟ್‌ಗಿಂತಲೂ 20,311 ಕೋಟಿ ಹೆಚ್ಚಿನ ಅನುದಾನ ಸಿಕ್ಕಿದಂತಾಗಿದೆ. ಇವುಗಳಲ್ಲಿ ಹಳಿ ನವೀಕರಣಕ್ಕೆ 13,335.74 ಕೋಟಿ, ಗೇಜ್ ಪರಿವರ್ತನೆಗೆ 2,850 ಕೋಟಿ, ಜೋಡಿ ಹಳಿ ಯೋಜನೆಗೆ 12,108 ಕೋಟಿ, ಹೊಸ ರೈಲು ಮಾರ್ಗ ನಿರ್ಮಾಣಕ್ಕೆ 25,243 ಕೋಟಿ ಹಣ ಹಂಚಿಕೆ ಮಾಡಲಾಗಿದೆ.

ಗದಗ-ವಾಡಿ ರೈಲು ಮಾರ್ಗ; ಗದಗ-ವಾಡಿ ರೈಲು ಮಾರ್ಗಕ್ಕೆ ಈ ಬಾರಿ ಬಜೆಟ್‌ನಲ್ಲಿ 112 ಕೋಟಿ ರೂ. ಘೋಷಣೆ ಮಾಡಲಾಗಿದೆ. ಕಳೆದ ಬಾರಿಯ ಬಜೆಟ್‌ನಲ್ಲಿ 100 ಕೋಟಿ ನೀಡಲಾಗಿತ್ತು. 257 ಕಿ. ಮೀ. ಮಾರ್ಗದ ಕಾಮಗಾರಿ 2025ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈ ರೈಲು ಮಾರ್ಗದ ಯೋಜನಾ ವೆಚ್ಚ ಸುಮಾರು 2841 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳನ್ನು ಈ ರೈಲು ಮಾರ್ಗ ಸಂಪರ್ಕಿಸುತ್ತದೆ.

1910ರಲ್ಲಿ ಗದಗ-ಕಣಗಿನಹಾಳ-ಕೋಟುಮಚಗಿ-ನರೇಗಲ್ಲ-ಗಜೇಂದ್ರಗ-ಹನುಮಸಾಗರ-ಇಳಕಲ್ಲ-ಮುದಗಲ್ಲ ಮಾರ್ಗವಾಗಿ ವಾಡಿ ಸಂಪರ್ಕಿಸುವ ಯೋಜನೆ ಸಮೀಕ್ಷೆ ಕೈಗೊಂಡಿದ್ದರು. ಬಳಿಕ ಯೋಜನೆ ನೆನೆಗುದಿಗೆ ಬಿದ್ದಿತ್ತು. 1954ರಲ್ಲಿ ಅಂದಿನ ರೈಲ್ವೆ ಸಚಿವ ಲಾಲ್ ಬಹದ್ಧೂರ ಶಾಸ್ತ್ರಿ ಯೋಜನೆಗೆ ಅಡಿಗಲ್ಲು ಹಾಕಿಸಿದ್ದರು. ಆದರೆ ಯೋಜನೆ ಜಾರಿಗೆ ಬರಲಿಲ್ಲ.

2013-14ರಲ್ಲಿ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಯೋಜನೆಗೆ ಒಪ್ಪಿಗೆ ದೊರೆಯಿತು. ಮೂಲ ಯೋಜನೆ ತಿದ್ದುಪಡಿ ಮಾಡಿ ಗದಗ-ವಾಡಿ ಮಾರ್ಗವನ್ನು ತಳಕಲ್ಲ-ಕುಕನೂರ-ಯಲಬುರ್ಗ-ಕುಷ್ಟಗಿ-ಲಿಂಗಸಗೂರ-ಗುರಗುಂಟ-ದೇವಪುರ- ಸೋಂಪುರ ಮಾರ್ಗವಾಗಿ ಬದಲಾವಣೆ ಮಾಡಲಾಯಿತು.

English summary
Budget 2022: In a 2022-23 budget speech fiance minister Nirmala Sitharaman announced 112 crore for Gadag Wadi railway line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X