ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು

|
Google Oneindia Kannada News

ಗದಗ, ಫೆಬ್ರವರಿ 4; ಈ ಬಾರಿಯ ಬಜೆಟ್‌ನಲ್ಲಿ ಗದಗ-ವಾಡಿ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 100 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಸುಮಾರು 257 ಕಿ. ಮೀ. ಮಾರ್ಗದ ನಿರ್ಮಾಣ 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೈಲ್ವೆ ಇಲಾಖೆಗೆ ನಿಗದಿ ಮಾಡಿರುವ ಅನುದಾನದ ವಿವರಗಳಿರುವ ಪಿಂಕ್ ಬುಕ್ ಅನ್ನು ಇಲಾಖೆ ಬಿಡುಗಡೆ ಮಾಡಿದೆ. ಇದರಲ್ಲಿ ಬಹು ನಿರೀಕ್ಷಿತ ರೈಲು ಮಾರ್ಗಕ್ಕೆ 100 ಕೋಟಿ ಮೀಸಲಿಡಲಾಗಿದೆ.

ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಪ್ರತಿಭಟನೆ ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಪ್ರತಿಭಟನೆ

ಗದಗ-ವಾಡಿ ರೈಲು ಮಾರ್ಗಕ್ಕೆ ಈಗಾಗಲೇ ಶಂಕು ಸ್ಥಾಪನೆ ಮಾಡಲಾಗಿದೆ. 257 ಕಿ. ಮೀ. ಮಾರ್ಗದ ನಿರ್ಮಾಣದ ವೆಚ್ಚ ಸುಮಾರು 2841 ಕೋಟಿ ರೂ. ಆಗಿದೆ. ಈ ರೈಲು ಮಾರ್ಗ ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳನ್ನು ಸಂಪರ್ಕಿಸಲಿದೆ.

ಬೆಂಗಳೂರು ಹಾಗೂ ಬಂಗಾರಪೇಟೆ ನಡುವೆ ಮೆಮು ರೈಲು ಸಂಚಾರ ಬೆಂಗಳೂರು ಹಾಗೂ ಬಂಗಾರಪೇಟೆ ನಡುವೆ ಮೆಮು ರೈಲು ಸಂಚಾರ

Budget 100 Crore For Gadag Wadi Railway Line

ಉಳಿದಂತೆ ರಾಯದುರ್ಗ-ತುಮಕೂರು ನೂತನ ಮಾರ್ಗಕ್ಕೆ 250 ಕೋಟಿ, ಹೊಸಪೇಟೆ-ವಾಸ್ಕೋ ಜೋಡಿ ಮಾರ್ಗ ನಿರ್ಮಾಣಕ್ಕೆ 137 ಕೋಟಿ, ಯಲಹಂಕ-ಪೆನುಗೊಂಡ ಜೋಡಿ ಮಾರ್ಗಕ್ಕೆ 150 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ.

ಕಾಚಿಗುಡದಿಂದ ಯಲಹಂಕಕ್ಕೆ ವಿಶೇಷ ರೈಲು ಸೇವೆ ಕಾಚಿಗುಡದಿಂದ ಯಲಹಂಕಕ್ಕೆ ವಿಶೇಷ ರೈಲು ಸೇವೆ

ಬೀದರ್-ನಾಂದೇಡ್ ಜೋಡಿ ಮಾರ್ಗಕ್ಕೆ 100 ಕೋಟಿ, ದೌಂಡ್-ಕಲಬುರಗಿ-ಗುಂತಕಲ್ ಜೋಡಿ ಮಾರ್ಗ, ವಿದ್ಯುದೀಕರಣಕ್ಕೆ 100 ಕೋಟಿ, ಮುನಿರಾಬಾದ್-ಮೆಹಬೂಬ್ ನಗರ ಜೋಡಿ ಮಾರ್ಗಕ್ಕೆ 79 ಕೋಟಿ, ಗುತ್ತಿ-ಧರ್ಮಾವರಂ ಜೋಡಿ ಮಾರ್ಗಕ್ಕೆ 225 ಕೋಟಿ ಅನುದಾನ ಘೋಷಿಸಲಾಗಿದೆ.

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada

ಕಲಬುರಗಿ ರೈಲು ನಿಲ್ದಾಣದ ನಿರ್ವಹಣೆಗಾಗಿ 1 ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಕಲಬುರಗಿಯಲ್ಲಿ ವಿಭಾಗೀಯ ಕಚೇರಿ ಸ್ಥಾಪನೆ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ.

English summary
Finance minister Nirmala Sitharaman in a budget 2021 announced 100 crore for 257 km new railway line between Gadag and Wadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X