ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗದಲ್ಲಿ ಪ್ಲಾಸ್ಟಿಕ್ ಸರ್ಜರಿ ಕ್ಯಾಂಪ್ ಬಗ್ಗೆ ಜಾಗೃತಿ ಅಭಿಯಾನ

|
Google Oneindia Kannada News

ಗದಗ, ಡಿಸೆಂಬರ್ 20: ಬೆಂಗಳೂರಿನಲ್ಲಿ ಫೆಬ್ರವರಿ 2, 2020 ರಂದು ಆಯೋಜಿಸಲಾಗಿರುವ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರದ ಬಗ್ಗೆ ಜಾಗೃತಿ ಅಭಿಯಾನವನ್ನು ಗದಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಫ್ರೆಂಡ್ಸ್ ವೆಲ್ ಫೇರ್ ಆರ್ಗನೈಸೇಶನ್ ಹೈಟೆನ್ ಫಾಸ್ಟನರ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ನಗರದಲ್ಲಿ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಬಾರಿ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು 2020 ರ ಫೆಬ್ರವರಿ 2 ರಂದು ಬೆಂಗಳೂರಿನ ನಾರಾಯಣ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ನಡೆಸಲಾಗುತ್ತದೆ. ಈ ಶಿಬಿರದಲ್ಲಿ ಸುಟ್ಟ ಗಾಯಗಳು, ಸೀಳುದುಟಿ, ಮತ್ತು ಮೈಕ್ರೋ ಸರ್ಜರಿಯನ್ನು ನೆರವೇರಿಸಲಾಗುತ್ತದೆ. ಬೆಂಗಳೂರಿನಲ್ಲಿ ನಡೆಯಲಿರುವ ಈ ಶಿಬಿರದಲ್ಲಿ 6 ತಿಂಗಳಿಂದ 65 ವರ್ಷದವರೆಗಿನ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ಗದಗ ಪೊಲೀಸರ ಪರಿಸರ ಪ್ರೇಮಕ್ಕೆ ಹೇಳಿ ಸಲಾಂ ಗದಗ ಪೊಲೀಸರ ಪರಿಸರ ಪ್ರೇಮಕ್ಕೆ ಹೇಳಿ ಸಲಾಂ

ಫ್ರೆಂಡ್ಸ್ ವೆಲ್ ಫೇರ್ ಆರ್ಗನೈಸೇಶನ್ (ಎಫ್ ಡಬ್ಲ್ಯೂಒ) ಒಂದು ಲಾಭರಹಿತವಾದ ಸಂಘವಾಗಿದ್ದು, 1995 ರಲ್ಲಿ ಸ್ಥಾಪನೆಯಾಗಿದೆ. ಕಳೆದ 25 ವರ್ಷಗಳಿಂದ ಸತತವಾಗಿ ಪ್ರತಿ ವರ್ಷ ಇಂತಹ ಶಿಬಿರವನ್ನು ಆಯೋಜಿಸುತ್ತಾ ಬರುತ್ತಿದೆ. ಇದುವರೆಗೆ ನಡೆದಿರುವ ಶಿಬಿರಗಳಲ್ಲಿ 4000 ಕ್ಕೂ ಅಧಿಕ ರೋಗಿಗಳಿಗೆ ಪ್ಲಾಸ್ಟಿಕ್ ಸರ್ಜರಿಯನ್ನು ಉಚಿತವಾಗಿ ಯಶಸ್ವಿಯಾಗಿ ನೆರವೇರಿಸಲಾಗಿದೆ.

Awareness activity for Free Plastic Surgery Camp At Gadag

ಈ ವರ್ಷ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಬೆಂಗಳೂರಿನ ನಾರಾಯಣ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ನಡೆಸಲಾಗುತ್ತಿದೆ, ಮ್ಯಾಕ್ಸಿಲೋ-ಫೇಶಿಯಲ್ ಮತ್ತು ಪ್ಲಾಸ್ಟಿಕ್ ಸರ್ಜನ್ ಗಳನ್ನೊಳಗೊಂಡ ಇಂಟರ್ ಪ್ಲಾಸ್ಟ್ ಜರ್ಮನಿಯ ತಜ್ಞ ವೈದ್ಯರ ತಂಡವು ಈ ಸರ್ಜರಿಗಳನ್ನು ನಡೆಸಲಿದೆ.

ವಾಡಿ-ಗದಗ ರೈಲು ಯೋಜನೆ, ರೈತರ ಜಮೀನಿಗೆ 17 ಲಕ್ಷ ಪರಿಹಾರವಾಡಿ-ಗದಗ ರೈಲು ಯೋಜನೆ, ರೈತರ ಜಮೀನಿಗೆ 17 ಲಕ್ಷ ಪರಿಹಾರ

ಹೈಟೆನ್ ಫಾಸ್ಟನರ್ಸ್ ಗದಗದಲ್ಲಿ ಸ್ಟೀಲ್ ಫಾಸ್ಟನರ್ಸ್ ಅನ್ನು ತಯಾರಿಸುವ ಕಂಪನಿಯಾಗಿದ್ದು, ಎಫ್ ಡಬ್ಲ್ಯೂ ಒ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರದ ಬಗ್ಗೆ ಕೈಗೊಂಡಿರುವ ಜಾಗೃತಿ ಅಭಿಯಾನಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈ ಶಿಬಿರದಿಂದ ಆಗುವ ಪ್ರಯೋಜನಗಳ ಬಗ್ಗೆ ಸ್ಥಳೀಯ ವೈದ್ಯಕೀಯ ವೃತ್ತಿಪರರು ಮತ್ತು ಚಾರಿಟೇಬಲ್ ಸಂಘಸಂಸ್ಥೆಗಳಿಗೆ ಈ ಅಭಿಯಾನದ ಮೂಲಕ ಜಾಗೃತಿ ಮೂಡಿಸುತ್ತಿದೆ. ಈ ಶಿಬಿರದಲ್ಲಿ ಪ್ಲಾಸ್ಟಿಕ್ ಸರ್ಜರಿ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೆರವೇರಿಸಲಾಗುತ್ತದೆ.

Awareness activity for Free Plastic Surgery Camp At Gadag

ಹೈಟೆನ್ ಫಾಸ್ಟನರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಸಾಯಿಕುಮಾರ್ ಅವರು ಎಫ್ ಡಬ್ಲ್ಯೂಒ ಪ್ರತಿನಿಧಿಗಳೊಂದಿಗೆ ಸೇರಿ ಹಲವಾರು ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರೊಂದಿಗೆ ಸಂವಾದ ನಡೆಸಿ ಶಿಬಿರದ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಇದೇ ವೇಳೆ, ಗದಗ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಸಿಎಸ್ಐ ಹಾಸ್ಪಿಟಲ್, ಚಿರಾಯು ಕ್ರಿಟಿಕಲ್ ಕೇರ್ ಸೇರಿದಂತೆ ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿ ಶಿಬಿರದ ಬಗ್ಗೆ ಜಾಗೃತಿ ಮೂಡಿಸಲಾಯಿತು.

English summary
riends Welfare Organisation in association with Hiten Fasteners Pvt Ltd conducted an awareness campaign for their Free Plastic Surgery Camp in Gadag. The camp will be conducted from 2nd February 2020 at Narayana Super Specialty Hospital in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X