ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ

|
Google Oneindia Kannada News

ಗದಗ, ಏಪ್ರಿಲ್ 16 : ಗದಗ-ವಾಡಿ ನಡುವಿನ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಇದ್ದ ಅಡೆ-ತಡೆಗಳು ನಿವಾರಣೆಯಾಗಿವೆ. ಮಾರ್ಗ ನಿರ್ಮಾಣಕ್ಕೆ 40 ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಿಗೆ ಸಿಕ್ಕಿದೆ.

Recommended Video

ಏಪ್ರಿಲ್ ಫೂಲ್ ಆದ ಕುಡುಕರು | April Fool | Liquor Shop | Oneindia kannada

ಏಳು ವರ್ಷಗಳ ಹಿಂದೆ ರೈಲ್ವೆ ಇಲಾಖೆ ಗದಗ-ವಾಡಿ ನಡುವಿನ 257 ಕಿ. ಮೀ. ಮಾರ್ಗ ನಿರ್ಮಾಣದ ಪ್ರಸ್ತಾವನೆ ಮಂಡಿಸಿತ್ತು. ಹಲವಾರು ಅಡೆ-ತಡೆ ದಾಟಿ ನೂತನ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಇದರಿಂದಾಗಿ ಉತ್ತರ ಕರ್ನಾಟಕದ 4 ಜಿಲ್ಲೆಗಳಿಗೆ ಅನುಕೂಲವಾಗಲಿದೆ.

ಮುಂಬೈನಲ್ಲಿ ಹೈಡ್ರಾಮ; ರೈಲು ನಿಲ್ದಾಣದಲ್ಲಿ ಸೇರಿದ ನೂರಾರು ಜನ ಮುಂಬೈನಲ್ಲಿ ಹೈಡ್ರಾಮ; ರೈಲು ನಿಲ್ದಾಣದಲ್ಲಿ ಸೇರಿದ ನೂರಾರು ಜನ

ಬೆಂಗಳೂರಿನಲ್ಲಿ ನಡೆದ ನೈಋತ್ಯ ರೈಲ್ವೆ ವಲಯದ ಸಭೆಯಲ್ಲಿ ಅರಣ್ಯ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ರೈಲ್ವೆ ಅರಣ್ಯ ಭೂಮಿಗೆ ಪರ್ಯಾಯವಾಗಿ ರೈಲು ಮಾರ್ಗ ಸಾಗುವಲ್ಲಿ ಎಲ್ಲೆಲ್ಲೆ ಗಿಡಗಳನ್ನು ನೆಡಬೇಕು ಎಂದು ವರದಿ ಕೇಳಿದೆ.

ಲಾಕ್‌ಡೌನ್‌ ವಿಸ್ತರಣೆ: ಮೇ 3ರ ತನಕ ರೈಲ್ವೆ, ವಿಮಾನ ಪ್ರಯಾಣ ರದ್ದುಲಾಕ್‌ಡೌನ್‌ ವಿಸ್ತರಣೆ: ಮೇ 3ರ ತನಕ ರೈಲ್ವೆ, ವಿಮಾನ ಪ್ರಯಾಣ ರದ್ದು

All Hurdles Cleared For Gadag And Wadi New Railway Line

ಗದಗ-ವಾಡಿ ರೈಲು ಮಾರ್ಗಕ್ಕೆ 1922 ಕೋಟಿ ವೆಚ್ಚವಾಗಲಿದೆ ಎಂದು 2014-15ರಲ್ಲಿ ಅಂದಾಜಿಸಲಾಗಿತ್ತು. ಈ ಮಾರ್ಗ ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳನ್ನು ಸಂಪರ್ಕಿಸಲಿದೆ. ಯಲಬುರ್ಗಾ, ಕುಷ್ಟಗಿ, ಲಿಂಗಸಗೂರು, ಸೊಲ್ಹಾಪುರ ಮೂಲಕ ಈ ಮಾರ್ಗ ಹಾದು ಹೋಗಲಿದೆ.

ಲಾಕ್ ಡೌನ್; ಬೆಂಗಳೂರಿನಿಂದ ವಿಶೇಷ ಪಾರ್ಸೆಲ್ ರೈಲು ಸೇವೆ ಲಾಕ್ ಡೌನ್; ಬೆಂಗಳೂರಿನಿಂದ ವಿಶೇಷ ಪಾರ್ಸೆಲ್ ರೈಲು ಸೇವೆ

"ಯೋಜನೆಗೆ ಅರಣ್ಯ ಭೂಮಿ ಸ್ವಾಧೀನವೇ ದೊಡ್ಡ ತೊಡಕಾಗಿತ್ತು. ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿ ಅಡೆ-ತಡೆಗಳನ್ನು ನಿವಾರಣೆ ಮಾಡಿದ್ದಾರೆ" ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ಹೇಳಿದ್ದಾರೆ.

ಗದಗ-ವಾಡಿ ಯೋಜನೆ ಮೊದಲ ಹಂತದಲ್ಲಿ 57 ಕಿ. ಮೀ. ಮಾರ್ಗದ ಕಾಮಗಾರಿ ಕೊಪ್ಪಳದಿಂದ ಆರಂಭವಾಗುತ್ತದೆ. 2ನೇ ಹಂತದಲ್ಲಿ 47 ಕಿ. ಮೀ. ಮಾರ್ಗ ವಾಡಿಯಿಂದ ಆರಂಭವಾಗಲಿದೆ. ಕೆಲವು ಪ್ರದೇಶದಲ್ಲಿ ರೈತರಿಗೆ ಇನ್ನೂ ಪರಿಹಾರವನ್ನು ವಿತರಣೆ ಮಾಡಬೇಕಿದೆ.

English summary
All hurdles cleared for the 257 km new railway line between Gadag and Wadi. 40 acres of forest land will acquire for construction of new line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X