ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ 6ನೇ ಸಾವು

|
Google Oneindia Kannada News

ಗದಗ್, ಏಪ್ರಿಲ್ 9: ಕೊರೊನಾ ಸೋಂಕಿಗೆ ಕರ್ನಾಟಕದಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಗದಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6ಕ್ಕೆ ಏರಿದೆ. ರಂಗನವಾಡಿ ಗಲ್ಲಿಯ 80 ವರ್ಷ ವಯಸ್ಸಿನ ವೃದ್ಧೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಹಿನ್ನೆಲೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Exclusive: ಕೋವಿಡ್ ಹಾಟ್‌ಸ್ಪಾಟ್‌ ಆಗಲಿದೆಯಾ ವಿಕ್ಟೋರಿಯಾ ಆಸ್ಪತ್ರೆ? ಪ್ರತ್ಯಕ್ಷ ವರದಿ!Exclusive: ಕೋವಿಡ್ ಹಾಟ್‌ಸ್ಪಾಟ್‌ ಆಗಲಿದೆಯಾ ವಿಕ್ಟೋರಿಯಾ ಆಸ್ಪತ್ರೆ? ಪ್ರತ್ಯಕ್ಷ ವರದಿ!

ಗದಗ್‌ನಲ್ಲಿ ಇದುವರೆಗೂ ಕೇಳಲ ಒಂದು ಕೊವಿಡ್ ಕೇಸ್ ಮಾತ್ರ ಪತ್ತೆಯಾಗಿತ್ತು. ಇದೀಗ, ಮೊದಲ ಸಾವು ಕೂಡ ವರದಿಯಾಗಿದೆ. ಹಾಗಾಗಿ, ಜಿಲ್ಲೆಯಲ್ಲಿ ಈಗ ಆತಂಕ ಹೆಚ್ಚಾಗಿದೆ.

6th Coronavirus Death Reported In Karnataka

ಇಲ್ಲಿಯವರೆಗೂ ಕರ್ನಾಟಕದಲ್ಲಿ ಒಟ್ಟು 181 ಜನರಲ್ಲಿ ಕೊವಿಡ್ ಸೋಂಕು ದೃಢವಾಗಿದೆ. ಅದರಲ್ಲಿ 5 ಜನರು ಮೃತಪಟ್ಟಿದ್ದರು. ಈಗ ಸಾವಿನ ಸಂಖ್ಯೆ 6ಕ್ಕೆ ಏರಿದೆ. ನಿನ್ನೆ ಕಲಬುರಗಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. ಇದು ರಾಜ್ಯದಲ್ಲಿ ಐದನೇ ಸಾವು ಆಗಿತ್ತು.

ಕೊರೊನಾ ಐಸೋಲೇಶನ್ ವಾರ್ಡ್‌ನಲ್ಲಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ?ಕೊರೊನಾ ಐಸೋಲೇಶನ್ ವಾರ್ಡ್‌ನಲ್ಲಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ?

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಕಾರಣ ಲಾಕ್‌ಡೌನ್‌ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಕರ್ನಾಟಕದಂತೆ ಇತರೆ ರಾಜ್ಯಗಳು ಕೂಡ ಲಾಕ್‌ಡೌನ್‌ ಮುಂದುವರಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.

English summary
COVID19 outbreak: 80-yr-old woman dies due to COVID-19 in Gadag. Death toll in Karnataka due to COVID-19 rises to 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X