ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

SSLC ಪರೀಕ್ಷೆ‌ ಮುಗಿಸಿ ಹೊರಟಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿ: ಒಬ್ಬ ಸಾವು, ಇಬ್ಬರ ಸ್ಥಿತಿ‌ ಗಂಭೀರ

|
Google Oneindia Kannada News

ಗದಗ, ಜೂನ್ 25: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿ‌ ಬೈಕ್ ನಲ್ಲಿ ತಮ್ಮೂರಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿಯಾಗಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಸಮೀಪ ನಡೆದಿದೆ.

Recommended Video

ಸುಶಾಂತ್ ಸಿಂಗ್ ಲವ್ವರ್ ವಿರುದ್ಧ ದಾಖಲಾಯಿತು ಕೇಸ್ | Complaint against Sushant singh Ex girlfriend Rhea

ಸಿದ್ದಪ್ಪ ತಳವಾರ ಸಾವನ್ನಪ್ಪಿದ ವಿದ್ಯಾರ್ಥಿ. ಈರಣ್ಣ ಬಡಿಗೇರ ಹಾಗೂ ಮೈಲಾರಿ ಯಳವತ್ತಿ ಅನ್ನುವ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದೆ.

.ಬೆಳಗಾವಿ: ಪರೀಕ್ಷೆಗೂ ಮೊದಲೇ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಆತ್ಮಹತ್ಯೆ.ಬೆಳಗಾವಿ: ಪರೀಕ್ಷೆಗೂ ಮೊದಲೇ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿಮಿತ್ತ ಪಕ್ಕದ ಕಲಕೇರಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮುಗಿಸಿದ ಮೂವರು ವಿದ್ಯಾರ್ಥಿಗಳು, ಬೈಕಿನಲ್ಲಿ ತಮ್ಮೂರಿಗೆ ತೆರಳುವ ವೇಳೆ ಈ ಅಪಘಾತ ನಡೆದಿದೆ. ಮುಂಡರಗಿ ಮಾರ್ಗವಾಗಿ ಬರುತ್ತಿದ್ದ ಲಾರಿ ಹಾಗೂ ಟಿಪ್ಪರ್ ಓವರಟೆಕ್ ಮಾಡಲು ಹೋಗಿ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ವೈದ್ಯರ ವಾಹನಕ್ಕೂ ಲಾರಿ ಡಿಕ್ಕಿ ಹೊಡೆದಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Lorry Accident To Students After SSLC Exam In Gadaga

ಮೂವರು ವಿದ್ಯಾರ್ಥಿಗಳನ್ನು ಮುಂಡರಗಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ‌ ಬಳಿಕ ಗದಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಒಬ್ಬ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

English summary
The incident of a lorry colliding with students who were riding on a bike after completing the SSLC exam took place near the village of Baghevadi in Mundaragi Taluk in Gadag district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X