ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗದಲ್ಲಿ ತಾಯಿ ಜೊತೆ ನವಜಾತ ಶಿಶುವಿನಲ್ಲೂ ಕೊರೊನಾವೈರಸ್!

|
Google Oneindia Kannada News

ಗದಗ, ಜನವರಿ 19: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ತಾಯಿಯೊಂದಿಗೆ ನವಜಾತ ಶಿಶುವಿಗೂ ಕೊವಿಡ್-19 ಸೋಂಕು ತಗುಲಿರುವ ಘಟನೆ ಗದಗ ಜಿಲ್ಲೆಯಲ್ಲಿ ವರದಿಯಾಗಿದೆ.

ಗದಗದಲ್ಲಿ ನವಜಾತ ಶಿಶುವಿಗೆ ಪಾಸಿಟಿವ್ ಬಂದಿರುವ ಮೊದಲ ಪ್ರಕರಣ ಇದಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಲಾಗಿದ್ದು, ಈಗ ತಾಯಿ ಮತ್ತು ಮಗು ಇಬ್ಬರೂ ಮನೆಯಲ್ಲಿಯೇ ಐಸೋಲೇಷನ್‌ನಲ್ಲಿದ್ದಾರೆ. ತಾಯಿ ಮತ್ತು ಮಗ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮಗುವಿಗೆ ಕೊವಿಡ್-19 ಸೋಂಕು ತಗುಲಿದೆ ಎಂಬ ಬಗ್ಗೆ ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದರೆ ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯರು ಕುಟುಂಬ ಸದಸ್ಯರ ಮನವೊಲಿಸಿದ್ದಾರೆ. ಸೂಕ್ತ ಕ್ರಮಗಳೊಂದಿಗೆ ತಾಯಿ ಮತ್ತು ಮಗುವನ್ನು ಹೋಮ್ ಐಸೋಲೇಶನ್‌ಗಾಗಿ ಅವರ ಮನೆಗೆ ಸ್ಥಳಾಂತರಿಸಲಾಗಿದೆ.

3 Days Newborn Kid tests positive for Covid-19 in Gadag; Health Department monitors treatment

ವಿಶೇಷ ಪ್ರಕರಣ ಎಂದು ಪರಿಗಣನೆ:

ನವಜಾತ ಶಿಶುವಿಗೆ ಕೊವಿಡ್-19 ಸೋಂಕು ತಗುಲಿರುವುದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ದಿನಕ್ಕೆ ಎರಡು ಬಾರಿ ಮಗುವಿನ ಆರೋಗ್ಯ ತಪಾಸಣೆಗೆ ಆರೋಗ್ಯಾಧಿಕಾರಿಗಳನ್ನು ಕಳುಹಿಸುವಂತೆ ಗದಗ ಜಿಲ್ಲಾಡಳಿತ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೀಗ ಆರೋಗ್ಯಾಧಿಕಾರಿಗಳು ಪ್ಯಾರಸಿಟಮಾಲ್ ಸೇರಿದಂತೆ ಎಲ್ಲಾ ಕಿಟ್‌ಗಳನ್ನು ಒದಗಿಸಿದ್ದು, ಬುಧವಾರದಂದು ಮಗುವಿಗೆ ಜ್ವರ ಮತ್ತು ಶೀತವಿಲ್ಲ ಎಂದು ತಿಳಿಸಿದ್ದಾರೆ.

ಮಗುವಿಗೆ ಕೇವಲ ಮೂರು ದಿನ ಆಗಿರುವುದರಿಂದ ಆರೋಗ್ಯ ಅಧಿಕಾರಿಗಳು ಸೌಮ್ಯ ಪ್ರಭಾವದ ಮಾತ್ರೆಗಳನ್ನು ನೀಡುತ್ತಿದ್ದಾರೆ. ಅವರ ಜೀನೋಮ್ ಸೀಕ್ವೆನ್ಸಿಂಗ್ ಅನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷಾ ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ. ಮಂಗಳವಾರ ಬೆಳಗ್ಗೆ ಮಗುವಿಗೆ ಗಂಟಲು ನೋವು ಮತ್ತು ಸೌಮ್ಯ ಜ್ವರವಿತ್ತು, ಆದರೆ ಈಗ ಶೀತ, ಕೆಮ್ಮು ಅಥವಾ ಜ್ವರದ ಲಕ್ಷಣಗಳಿಲ್ಲದೆ ಚೇತರಿಸಿಕೊಂಡಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮಗುವಿನ ಆರೋಗ್ಯದ ಮೇಲೆ ವೈದ್ಯರ ನಿಗಾ:

Recommended Video

Union Budget 2022-23ಈ ಬಾರಿಯ Budgetನಲ್ಲಿ ದೇಶ ನಿರೀಕ್ಷಿಸುತ್ತಿರುವುದೇನು | Oneindia Kannada

"ನವಜಾತ ಶಿಶುವಿಗೆ ಪಾಸಿಟಿವ್ ಬಂದಿರುವ ಕೊವಿಡ್-19 ಪ್ರಕರಣಕ್ಕೆ ಗದಗ ಜಿಲ್ಲೆಯು ಸಾಕ್ಷಿಯಾಗಿದೆ. ಈಗ ಮಗು ಆರೋಗ್ಯವಾಗಿದೆ, ವೈದ್ಯರು ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ, ವಾರದ ನಂತರ ಮತ್ತೊಮ್ಮೆ ಪರೀಕ್ಷೆ ನಡೆಸುತ್ತೇವೆ," ಎಂದು ಗದಗ ಜಿಲ್ಲಾ ಆರೋಗ್ಯಾಧಿಕಾರಿ ಜಗದೀಶ ನುಚ್ಚಿನ ಹೇಳಿದ್ದಾರೆ.

English summary
3 Days Newborn Kid tests positive for Covid-19 in Gadag; Health Department monitors treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X