ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ರೂಪದಲ್ಲಿ ಬರಲಿದೆ ಫೇಸ್ಬುಕ್! ಏನಿದು ಮೇಟಾ?

|
Google Oneindia Kannada News

'ಬದಲಾವಣೆ ಜಗದ ನಿಯಮ'. ಹೀಗಾಗಿ ಸದ್ಯದಲ್ಲೇ ಹೊಸ ರೂಪದಲ್ಲಿ 'ಫೇಸ್‌ಬುಕ್' ಬಳಕೆದಾರರ ಮುಂದೆ ಬರಲಿದೆ. ಸಾಮಾಜಿಕ ಮಾಧ್ಯಮದ ದೈತ್ಯ ಎಂದು ಹೆಸರುವಾಸಿಯಾಗಿರುವ 'ಫೇಸ್ಬುಕ್' ತನ್ನ ಹೆಸರನ್ನು 'ಮೆಟಾ' ಎಂದು ಬದಲಾಯಿಸುತ್ತಿದೆ. ರೀಬ್ರ್ಯಾಂಡ್‌ನ ಭಾಗವಾಗಿ ಹೊಸತನದೊಂದಿಗೆ 'ಮೆಟಾವರ್ಸ್' ಅನ್ನು ಅಭಿವೃದ್ಧಿಪಡಿಸುವಲ್ಲಿ ಕಂಪನಿ ಗಮನ ಹರಿಸಿದೆ.

''ಇನ್ನು ಮುಂದೆ, ಫೇಸ್‌ಬುಕ್ ಮೊದಲಲ್ಲ, ನಾವೀಗ ಮೆಟಾವರ್ಸ್ ಆಗಲಿದ್ದೇವೆ,'' ಎಂದು ಸಿಇಒ ಮಾರ್ಕ್ ಜುಕರ್‌ಬರ್ಗ್ ಗುರುವಾರ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಕೇಳಿ ಬರುತ್ತಿದ್ದ ಫೇಸ್‌ಬುಕ್ ಹೆಸರು ಬದಲಾವಣೆಯ ಸುದ್ದಿ ಇದೀಗ ನಿಜವಾಗಿದ್ದು, ಗುರುವಾರ ಅಧಿಕೃತವಾಗಿ ಘೋಷಣೆಯಾಗಿದೆ. ಕಂಪನಿಯ ವರ್ಚುವಲ್ ರಿಯಾಲಿಟಿ ಕಾನ್ಫರೆನ್ಸ್ ನಲ್ಲಿ ಮಾತನಾಡಿದ 37 ವರ್ಷ ವಯಸ್ಸಿನ ಫೇಸ್ಬುಕ್ ಸಂಸ್ಥಾಪಕರಾದ ಮಾರ್ಕ್ ಜುಕರ್‌ಬರ್ಗ್, ಹೊಸವಿನ್ಯಾಸ ಬಗ್ಗೆ ಕಳೆದ ವರ್ಷದಿಂದಲೇ ಜನರು ಮಾತನಾಡುತ್ತಿದ್ದರು. ಸದ್ಯ ಫೇಸ್‌ಬುಕ್ ಬಗ್ಗೆ ಎಲ್ಲರಿಗೂ ಗೊತ್ತುಘಿ. ಆದರೆ, ಮುಂದೊಂದು ದಿನ ಮೆಟಾವರ್ಸ್ ಕಂಪನಿ ಸೋಶಿಯಲ್ ನೆಟ್‌ವರ್ಕ್ ಅಲ್ಲದೆ ಅದಕ್ಕಿಂತ ದೊಡ್ಡದು ಎಂಬ ಭಾವನೆ ಜನ ಬಾಯಲ್ಲಿ ಖಂಡಿತ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೆಟಾವರ್ಸ್ ಅಂದರೆ ಏನು ಎಂಬುದನ್ನು ಮಾರ್ಕ್ ಜುಕರ್‌ಬರ್ಗ್ ವಿವರಿಸಿದ್ದು ಹೀಗೆ.... ಮುಂದಿನ ಪೀಳಿಗೆ ಜನರು ಅಂತರ್ಜಾಲವನ್ನು ಹೇಗೆ ನೋಡುತ್ತಾರೆ ಎಂದರೆ ನಮ್ಮ ಅಕ್ಕಪಕ್ಕದಲ್ಲಿ ಯಾರೂ ಇಲ್ಲ. ಆದರೂ ಡಿಜಿಟಲ್ ಸ್ಟೇಸ್‌ನ ಮುಖಾಂತರ ನಮ್ಮ ನಡುವೆ ಯಾರೋ ಒಬ್ಬರು ಸದಾ ಜೊತೆಯಲ್ಲಿ ಇದ್ದಾರೆ ಎಂಬ ಭಾವನೆ ಮೂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಭವಿಷ್ಯದ ಮೆಟಾವರ್ಸ್ ಹಲವು ಹೊಸ ಸಾಧ್ಯತೆಗಳನ್ನು ಒಳಗೊಂಡಿದೆ. ಬಳಕೆದಾರರು ಇಲ್ಲಿ ಹ್ಯಾಂಗ್ ಔಟ್ ಮೂಲಕ ಚಾಟ್ ಮಾಡಬಹುದು, ಸ್ನೇಹಿತರೊಂದಿಗೆ ಆಟವಾಡಬಹುದು, ಸಹದ್ಯೋಗಿಗಳೊಂದಿಗೆ ಕೆಲಸ ಮಾಡಬಹುದು, ಹೊಸದು ಅನ್ನಿಸುವ ಏನನ್ನಾದರೂ ಬೇಕಾದರೂ ಕ್ರಿಯೇಟ್ ಮಾಡಬಹುದು. ಅಂತರ್ಜಾಲದಲ್ಲಿ ಮಾಡಬಹುದಾದ ಎಲ್ಲವನ್ನೂ ಮಾಡಲು ಮೆಟಾವರ್ಸ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂದರೆ ಇಲ್ಲಿ ನೃತ್ಯವನ್ನೂ ಮಾಡಬಹುದು ಎಂದು ತಿಳಿಸಿದ್ದಾರೆ.

Zuckerberg imagines the metaverse as a virtual space that uses digital tools to give people a sense of physical presence

ಫೇಸ್ಬುಕ್ ಯಾಕೆ ಹೀಗೆ ಮಾಡುತ್ತಿದೆ?
ಸದ್ಯ ಯಾರೂ ನಿರೀಕ್ಷಿಸದ ಈ ಸುದ್ದಿಯನ್ನು ಫೇಸ್‌ಬುಕ್ ನೀಡಿರುವುದರಿಂದ ಇದರ ಬಗ್ಗೆಯೇ ಜನರು ಮಾತನಾಡಲು ಆರಂಭಿಸುತ್ತಾರೆ. ಕನಿಷ್ಠ ಎರಡು ದಿನವಾದರೂ ಈ ಫ್ಲಾಶ್ ನ್ಯೂಸ್ ಅನ್ನೇ ಜನ ಚರ್ಚೆ ಮಾಡುತ್ತಾರೆ. ಇತ್ತೀಚಿಗೆ ಫೇಸ್‌ಬುಕ್ಕಿಗೆ ಕೆಟ್ಟ ಹೆಸರು ಬರುತ್ತಿದೆ. ಅದನ್ನು ತಾತ್ಕಾಲಿಕವಾಗಿದರೂ ಕಡಿಮೆ ಮಾಡಲು, ಜನ ಮನಸ್ಸನ್ನು ಬೇರೆ ಕಡೆ ಸೆಳೆಯಲು ಈ ಸುದ್ದಿ ನೆರವಾಗಬಹುದು ಎಂದು ಕಂಪನಿ ಅಂದಾಜಿಸಿದೆ.

ಎಷ್ಟೋ ವರ್ಷದಿಂದ ಫೇಸ್‌ಬುಕ್ ಬಳಕೆದಾರರನ್ನು ನಿಯಂತ್ರಣದಲ್ಲಿಟ್ಟುಕೊಂಡಿಲ್ಲ. ಮಾಹಿತಿಯನ್ನು ಯಾರು ಹೇಗೆ ಬೇಕಾದರೂ ಸೋರಿಕೆ ಮಾಡಬಹುದು ಎಂಬ ಅಪಾದನೆಗಳನ್ನೆಲ್ಲಾ ಹೊತ್ತುಕೊಂಡಿದೆ. ಫೇಸ್‌ಬುಕ್ ಕಂಪನಿಯ ಉದ್ಯೋಗಿಯೊಬ್ಬ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದನು. ಇದರಿಂದ ಯುವಸಮೂಹವೂ ಫೇಸ್ಬುಕ್ ಅನ್ನು ಇಷ್ಟಪಡದೆ ವಿಮುಖವಾಗುತ್ತಿತ್ತು. ತುಂಬಾ ಜನ ಚೀನಾದ ಟಿಕ್‌ಟಾಕ್‌ಗೆ ಮಾರಿ ಹೋಗಿದ್ದರು. ಫೇಸ್‌ಬುಕ್‌ ಗೆ ಜಾಹೀರಾತೇ ಆದಾಯದ ಮೂಲ. ಬಳಕೆದಾರರು ಕಡಿಮೆಯಾದಂತೆ ಆದಾಯವೂ ಕಡಿಮೆ ಆಗುತ್ತದೆ. ಇದನ್ನೆಲ್ಲವನ್ನೂ ಮನಗಂಡು ಫೇಸ್ಬುಕ್ ಎಂದಿನ ವಿಶ್ವಾಸ ಗಳಿಸಬೇಕೆಂಬ ಉದ್ದೇಶದಿಂದ ಕಂಪನಿ ಈ ಕ್ರಮಕೈಗೊಂಡಿದೆ.

ತನ್ನ ಮೇಲೆ ನಾನಾ ಅಪವಾದ ಇರುವುದರಿಂದ ಫೇಸ್‌ಬುಕ್ ಅನ್ನು ಹೊಸ ರೂಪದಲ್ಲಿ ತೋರಿಸಲು ಕಂಪನಿ ಸಿದ್ಧತೆ ನಡೆಸಿದೆ. ಭವಿಷ್ಯದಲ್ಲಿ ಹೊಸ ಸ್ವರೂಪ ಕೊಟ್ಟರಷ್ಟೇ ಹಳೆಯ ಕಹಿ ನೆನಪುಗಳನ್ನು ಮರೆಯಲು ಸಾಧ್ಯ ಎಂಬುದು ಕಂಪನಿಯ ಅಭಿಪ್ರಾಯವೂ ಆಗಿದೆ. ಹಾಗಾಗಿ ಎಲ್ಲಾ ವಯೋಮಾನದವರಿಗೆ ಇಷ್ಟವಾಗುವಂತೆ ಮೆಟಾವರ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಬಳಕೆದಾರರ ಸಂಖ್ಯೆಯೂ ದ್ವಿಗುಣಗೊಳ್ಳಲಿದೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೆ ನಂಬರ್ ಒನ ಸ್ಥಾನ ಪಡೆಯುವ ಇರಾದೆ ಫೇಸ್‌ಬುಕ್ ಹೊಂದಿದೆ.

2014ರಲ್ಲೇ ಫೇಸ್ಬುಕ್ ಸ್ವರೂಪ ಬದಲಾವಣೆ ಬಗ್ಗೆ ಚಿಂತನೆ ನಡೆಸಲಾಗಿತ್ತು. ಓಕ್ಯುಲಸ್ ಎಂಬ ವರ್ಚುವಲ್ ಡಿವೈಸ್ ಅನ್ನು ಕೂಡ ತಯಾರಿಸಲಾಗಿತ್ತು. ಇದೀಗ ಅದರ ಮುಂದಿನ ವರ್ಸನ್ ತರಲು ಚಿಂತನೆ ನಡೆದಿದೆ. ಇದರಲ್ಲಿ ಆನ್‌ಲೈನ್ ಆಟಗಳು ಹಾಗೂ ಹೆಚ್ಚಿನ ಸಾಫ್ವೇರ್‌ಗಳನ್ನು ಅಳವಡಿಸಲಾಗುತ್ತಿದೆ. ಇದನ್ನು ಮಾಡಲು ಪ್ರತಿ ವರ್ಷ ಬಿಲಿಯನ್ ಡಾಲರ್‌ಗಳನ್ನು ವ್ಯಯಿಸಲಾಗುತ್ತಿದೆ. ಮುಂದಿನ ವರ್ಷ ಜನವರಿಯಲ್ಲಿ ಇದನ್ನು ಆರಂಭಿಸಲು ಆಲೋಚಿಸಲಾಗಿದೆ.

Facebook recently launched the beta version of Horizon Workrooms, a remote-working app

ಯಾವ ಯೋಜನೆಗಳು ಕಾರ್ಯರೂಪದಲ್ಲಿವೆ?
ಇದರಲ್ಲಿ ಸಾಫ್ಟ್ ವೇರ್ ಮತ್ತು ಹಾರ್ಡ್‌ವೇರ್ ಎಲ್ಲವನ್ನೂ ಅಪ್‌ಡೇಟ್ ಮಾಡಲಾಗುತ್ತಿದೆ. ಜೊತೆಗೆ ಹೊಸ ತಂತ್ರಜ್ಞಾನವನ್ನೂ ಅಳವಡಿಸಲಾಗುತ್ತಿದೆ. ಎಲ್ಲರಿಗೂ ತಲುಪುವಂತಹ ಸಾಧನಗಳನ್ನು ಜೋಡಿಸಲಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್ ಆಟಗಳನ್ನು ಸೇರಿಸಲಾಗುತ್ತಿದೆ. ಬಳಕೆದಾರ ಯಾವುದೇ ಮೂಲೆಯಲ್ಲಿ ಕೂತುಕೊಂಡು ತನಗಿಷ್ಟ ಬಂದ ಆಟವನ್ನು ಆಯ್ಕೆ ಮಾಡಿಕೊಳ್ಳ್ಳಬಹುದಾಗಿದೆ. ಆಗಸ್ಟ್‌ನಲ್ಲಿ ಡೇಟಾ ವರ್ಸನ್ ಎಂಬ ಸಾಫ್ಟ್ ವೇರ್ ಬಿಡುಗಡೆ ಮಾಡಲಾಗಿತ್ತು. ಹೆಡ್‌ಸೆಟ್ ಇಲ್ಲದೆಯೋ ಮೀಟಿಂಗ್‌ನಲ್ಲಿ ಭಾಗವಹಿಸುವ ಅವಕಾಶ ಆ ಸ್‌ಟಾವೇರ್‌ನಲ್ಲಿ ಕಲ್ಪಿಸಲಾಗಿತ್ತು. ಇದೇ ರೀತಿಯ ಹತ್ತಾರು ಹೊಸ ಸಾಧ್ಯತೆಗಳು ಮೆಟಾದಲ್ಲೂ ಇರಲಿದೆ.

ಜುಗರ್‌ಬರ್ಗ್ ಹೇಳುವ ಪ್ರಕಾರ, ಹಾರಿಜಾನ್ ಮನೆ ಎಂದರೆ ಅದೊಂದು ಡಿಜಿಟಲ್ ಹೋಮ್. ಸಾಕಷ್ಟು ಅಂತರ್ಜಾಲ ಸೇವೆಗಳು ಇದರಲ್ಲಿ ಲಭ್ಯವಿರಲಿದೆ. ಆನ್‌ಲೈನ್ ಮೂಲಕವೇ ಎಲ್ಲವೂ ನಡೆಯುತ್ತದೆ. ಬೇರೆ ಬೇರೆ ಸ್ಥಳದಲ್ಲಿದ್ದುಕೊಂಡೇ ಡಿಜಿಟಲ್ ಮೂಲಕ ಒಂದೇ ಕಡೆ ಕೆಲಸ ಮಾಡುವ ಅವಕಾಶ ಇದರಲ್ಲಿ ಇರಲಿದೆ. ಒಂದು ಲಿಂಕ್ ಕ್ಲಿಕ್ ಮಾಡಿದರೆ ಡಿಜಿಟಲ್ ಸ್ಪೇಸ್ ತೆರೆದುಕೊಳ್ಳುವ 'ಟೆಲಿಪೋರ್ಟಿಂಗ್' ಆಯ್ಕೆಯನ್ನು ಇದರಲ್ಲಿ ಕೊಡಲಾಗುತ್ತದೆ. ಆ ಲಿಂಕ್ ಮೂಲಕ ಎಲ್ಲರೂ ಒಂದೆಡೆ ಸೇರಿಕೊಳ್ಳಬಹುದು

ದುಡ್ಡು ಹೇಗೆ ಬರುತ್ತದೆ?
ಇದೆಲ್ಲಾ ಹೊಸ ಯೋಜನೆಗಳು. ಈಗಷ್ಟೇ ಶುರುವಾಗುತ್ತಿದ್ದು, ಜನರಿಗೆ ತಲುಪಲು ಒಂದಷ್ಟು ಸಮಯ ಹಿಡಿಯುತ್ತದೆ. ಹೀಗಿರುವಾಗ ಕಂಪನಿಗೆ ಹಣ ಹೇಗೆ ಬರುತ್ತದೆ? ಆದಾಯದ ಮೂಲ ಯಾವುದು? ಎಂಬ ಪ್ರಶ್ನೆಗಳು ಇವೆ. ''ಹಳೆಕಾಲದಲ್ಲಿ ಹೇಗೆ ವ್ಯಾಪಾರ ಮಾಡುತ್ತಿದ್ದರು ಅದನ್ನು ಮತ್ತೆ ನಾವು ಪ್ರಾರಂಭಿಸುತ್ತೇವೆ. ಮೂರು ತಿಂಗಳ ಹಿಂದೆ ಆರಂಭವಾದ ಓಕ್ಯುಲಸ್ ಸ್‌ಟಾವೇರ್‌ನಿಂದ ಬರುತ್ತಿರುವ ದುಡ್ಡಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೆಟಾದಲ್ಲಿ ಸಿಗುತ್ತದೆ ಎಂಬ ನಂಬಿಕೆ ಇದೆ. ಮೆಟಾವರ್ಸ್ ಬಂದ ಮೇಲೆ ಡಿಜಿಟಲ್ ಗೂಡ್ಸ್‌, ಅದನ್ನು ಬಳಕೆ ಮಾಡುವ ಜನರು ಇದನ್ನು ದೊಡ್ಡಮಟ್ಟದಲ್ಲಿ ನಡೆಸುತ್ತಾರೆ. ಹಾಗಾಗಿ ಇದರಿಂದ ಆದಾಯದ ವೃದ್ಧಿಸುತ್ತದೆ '' ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ. ''ಫೇಸ್‌ಬುಕ್‌ನಲ್ಲಿ ವಾಣಿಜ್ಯ ವಹಿವಾಟು ಹೆಚ್ಚಾಗಿ ನಡೆಯುತ್ತದೆ. ಭೌತಿಕ ಹಾಗೂ ಡಿಜಿಟಲ್ ಉತ್ಪನ್ನಗಳು ಹೆಚ್ಚಳಗೊಳ್ಳಲಿವೆ,''ಎಂದು ಮೆಟಾವರ್ಸ್‌ನ ಮುಖ್ಯಸ್ಥ ವಿಶಾಲ್ ಶಾ ಆಭಿಪ್ರಾಯ ಪಟ್ಟಿದ್ದಾರೆ.
ಇಷ್ಟೆಲ್ಲಾ ನಡೆಯಬೇಕಾದರೆ ನೂರಾರು ದಶಲಕ್ಷ ಬಳಕೆದಾರರನ್ನು ಮೆಟಾ ಆಕರ್ಷಿಸಬೇಕಿದೆ. ಆಗ ಮಾಡಿದಾಗ ಮಾತ್ರ ಇಷ್ಟು ವ್ಯವಹಾರ ಮಾಡಬಹುದು. ಇಂತಿಷ್ಟು ಹಣ ಸಂಪಾದಿಸಬಹುದು ಎಂಬ ಆಲೋಚನೆಗೆ ಆಧಾರ ಸಿಗುತ್ತದೆ.

ಈ ಯೋಜನೆ ಯಶಸ್ವಿಯಾಗಬಹುದೇ?
ಟಿಕ್‌ಟಾಕ್, ಟಿಟ್ವರ್‌ಗಳ ಮಧ್ಯೆ ಫೇಸ್‌ಬುಕ್ ಇನ್ನೂ ಜೀವಂತವಾಗಿ ಉಳಿಯಬೇಕಾದರೆ ಇವತ್ತು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿ ಇದೆ. ಭವಿಷ್ಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಬೆಳೆಯಲು ಕೂಡ ಕಂಪನಿಯ ಈ ಲೆಕ್ಕಾಚಾರ ಸೂಕ್ತವಾಗಿದೆ. ಕಳೆದ 18 ತಿಂಗಳಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಕಡಿಮೆ ಆಗಿದೆ. ಬರುತ್ತಿದ್ದ ಆದಾಯಯೂ ಕ್ಷೀಣಿಸಿದೆ. 2020ರಲ್ಲಿ ಪರಿಸ್ಥಿತಿ ಹೀಗಿದೆ ಎಂದು ತಿಳಿದುಬಂದಿದೆ. ಐ ಫೋನ್ ನವರು ಖಾಸಗಿ ನಿಯಮಗಳನ್ನು ಸುಧಾರಣೆ ತಂದ ನಂತರವೇ ಮತ್ತೆ ಚೇತರಿಕೆ ಹಾದಿ ಕಂಡಿದ್ದು, ಹಾಗಾಗಿ ಫೇಸ್‌ಬುಕ್‌ಗೂ ಆ ರೀತಿಯ ಹೊಸ ಗಾಳಿ ಬೀಸಬೇಕಿದೆ.

ಭವಿಷ್ಯದಲ್ಲಿ ಸಾಮಾಜಿಕ ಜಾಲತಾಣದ ಮುಂದಿನ ಹಾದಿ ಕಠಿಣವಾಗಿದೆ. ಬಹುಬೇಗನೆ ಈಗ ಯಶಸ್ಸು ಸಿಗುವುದಿಲ್ಲ. ಕನಿಷ್ಠ 12 ತಂತ್ರಜ್ಞಾನ ತಂತ್ರಗಳು ಬದಲಾಗಬೇಕು. ಆಗ ಮಾತ್ರ ಹೊಸ ವರ್ಸನ್ ಯಶಸ್ಸು ಪಡೆಯುತ್ತದೆ ಎಂಬ ಅಭಿಪ್ರಾಯ ಫೇಸ್‌ಬುಕ್ ಕಂಪನಿಗೂ ತಿಳಿದಿದೆ. ಹೊಸದಾಗಿ ಇಂಟರ್‌ನೆಟ್ ಬಂದಾಗ ಹೇಗಿತ್ತು ಆ ಪರಿಸ್ಥಿತಿ ಮೆಟಾಗೂ ಇದೆ. ಮುಂದಿನ ಹಂತಕ್ಕೆ ಎಂಜಿನಿಯರ್ಸ್‌ಗಳೇ ಇದನ್ನು ಅಭಿವೃದ್ಧಿಪಡಿಸಬೇಕಿದೆ. ಕಾನೂನು ತೊಡಕು ಬರುವ ಮುನ್ನ ಏನೆಲ್ಲಾ ಬದಲಾವಣೆ ಬೇಕು ಎಂಬುದನ್ನು ತಂತ್ರಜ್ಞರೇ ರೂಪಿಸಬೇಕಿದೆ.

English summary
Facebook has changed its name to "Meta" in a shift away from social media and towards developing "the metaverse," a digital world that could be the next generation of the internet. Here's what they have planned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X