ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಫೋನ್‌ ಕೈಗೆತ್ತಿಕೊಳ್ಳಿ, ಮಕ್ಕಳಿಗೆ ಇಂಗ್ಲಿಷ್ ಕಲಿಸಿ!

Google Oneindia Kannada News

ಇವತ್ತಿನ ದಿನಗಳಲ್ಲಿ ನಮ್ಮ ಪ್ರತಿಯೊಂದು ಕಾರ್ಯವೂ ಒಂದಲ್ಲಾ ಒಂದು ರೂಪದಲ್ಲಿ ಸಮಾಜದ ಪ್ರಗತಿಗೆ ನೆರವಾಗುತ್ತದೆ. ಉದಾಹರಣೆಗೆ ಕೈಲಿರುವ ಮೊಬೈಲ್‌ ಬಳಕೆ ಮತ್ತು ಆಧುನಿಕ ಸಂವಹನಕ್ಕೆ ನಿತ್ಯ ಬಳಸುವ ಇಂಗ್ಲಿಷ್ ಬಾಷೆ. ಇವೆರಡೂ ಕೌಶಲ್ಯಗಳು ನಿಮ್ಮ ಬಳಿ ಇದ್ದು, ಇವುಗಳನ್ನು ದೇಶಕ್ಕಾಗಿ ಬಳಸಲು ನೀವು ತಯಾರಿದ್ದರೆ ನಿಮಗೆ ಈ ಮಾಹಿತಿ ನೆರವಾಗುತ್ತದೆ.

'ನಿಹಾರ್ ಶಾಂತಿ ಆಮ್ಲ' ವತಿಯಿಂದ ಆರಂಭವಾಗಿರುವ ಈ ಪ್ರಾಯೋಗಿಕ ಆಂದೋಲನ ನಗರ ಪ್ರದೇಶಗಳ ಸುಶಿಕ್ಷಿತ ಜನರನ್ನು ಅಗತ್ಯ ಸೌಕರ್ಯರಹಿತ ವಾತಾವರಣದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಜತೆ ಜೋಡಿಸುವ ಕೆಲಸ ಆರಂಭಿಸಿದೆ. 'ಕರೆಯನ್ನು ಸ್ವೀಕರಿಸಿ' ಅಥವಾ #PhoneUthaoIndiaKoPadhao (#ಕರೆಸ್ವೀಕರಿಸಿಭಾರತಕ್ಕೆಬೋಧಿಸಿ) ಹೆಸರಿನಲ್ಲಿ ಕಂಪನಿಯು ಮುಂಚೂಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಪ್ರಾಯೋಗಿಕ ಯೋಜನೆ ಜಾರಿಯಾದ ನಂತರದ ದಿನಗಳಲ್ಲಿ ಸುಮಾರು 55 ಸಾವಿರ ನಿಮಿಷಗಳ ಗುಣಮಟ್ಟದ ದೂರವಾಣಿ ಸಂವಹನವನ್ನು ರೆಕಾರ್ಡ್‌ ಮಾಡಲಾಗುತ್ತದೆ.

ಇಂಗ್ಲಿಷ್‌ ಭಾಷೆಯನ್ನೇ ಯಾಕೆ ಕಲಿಸಬೇಕು?

ಇಂಗ್ಲಿಷ್‌ ಭಾಷೆಯನ್ನೇ ಯಾಕೆ ಕಲಿಸಬೇಕು?

ಇವತ್ತಿಗೆ ಇಂಗ್ಲಿಷ್‌ ಎಂಬುದು ವ್ಯವಹಾರಿಕವಾಗಿ ಪ್ರಮುಖವಾದ ಸಂವಹನ ಭಾಷೆ. ಇದನ್ನು ರೂಢಿಸಿಕೊಳ್ಳಲು ಅನೇಕರು ಶಕ್ತರಾಗಿದ್ದರೂ, ಪೂರಕ ವಾತಾವರಣ ಇಲ್ಲದ ಹಿನ್ನೆಲೆಯಲ್ಲಿ ಕಲಿಕೆಯಲ್ಲಿ ಹಿಂದೆ ಬೀಳುತ್ತಿದ್ದಾರೆ. ಹೀಗಾಗಿ ಇಂತಹ ಸಮುದಾಯಕ್ಕೆ ಇಂಗ್ಲಿಷ್ ಕಲಿಸಲು ಐದು ವರ್ಷಗಳ ಹಿಂದೆ ಜಾರಿಗೆ ಬಂದ 'ಪಾಠಶಾಲಾ ಫನ್‌ವಾಲಾ' ಎಂಬ ಬ್ರಾಂಡ್‌ ಅಡಿಯಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. 'ಕರೆಯನ್ನು ಸ್ವೀಕರಿಸಿ' ಇನಿಶಿಯೇಟಿವ್ ಅದರ ಒಂದು ಭಾಗ. ಇಷ್ಟಕ್ಕೂ ಇಂಗ್ಲಿಷ್‌ ಭಾಷೆಯನ್ನೇ ಯಾಕೆ ಕಲಿಸಬೇಕು?

7500 ಹಳ್ಳಿಗಳನ್ನು ತಲುಪಿಸ ಕಾರ್ಯಕ್ರಮ

7500 ಹಳ್ಳಿಗಳನ್ನು ತಲುಪಿಸ ಕಾರ್ಯಕ್ರಮ

"ನಿಹಾರ ಶಾಂತಿ ಆಮ್ಲ ಇಂಗ್ಲಿಷ್ ಭಾಷೆಯನ್ನು ಪ್ರಗತಿಗೆ ಪೂರಕವಾಗಿರುವ ಭಾಷೆ ಎಂದು ನಂಬಿದೆ. ಸಂವಹನ ಭಾಷೆಯಾಗಿ ಇದು ಉದ್ಯೋಗದ ಅರ್ಹತೆಯನ್ನು ಹೆಚ್ಚಿಸುತ್ತದೆ. ಬೆಳವಣಿಗೆಯ ಮೂಲಾಧಾರವೇ ಪ್ರಗತಿಯ ಅಡಿಗಲ್ಲು ಆಗಿರುವುದರಿಂದ ಹಾಗೂ ಪ್ರಗತಿ ಇಂಗ್ಲಿಷ್ ಭಾಷೆಯ ಮೂಲಕ ಸಾಧ್ಯವಿರುವ ಹಿನ್ನೆಲೆಯಲ್ಲಿ ಆಂಗ್ಲ ಭಾಷೆಯನ್ನು ಕಲಿಸಲು 'ಪಾಠಶಾಲಾ ಫನ್‌ವಾಲಾ' ಯೋಜನೆಯನ್ನು ಆರಂಭಿಸಲಾಗಿದೆ," ಎಂದು ವರದಿ ಹೇಳುತ್ತದೆ.

ಈವರೆಗೆ ಕಳೆದ ಐದು ವರ್ಷಗಳಲ್ಲಿ ಯೋಜನೆ ಗ್ರಾಮೀಣ ಭಾಗದ ಸುಮಾರು 7500 ಹಳ್ಳಿಗಳನ್ನು ತಲುಪಿದೆ. ಒಟ್ಟು ವಿನಿಮಯವಾದ ಕರೆಗಳ ಸಂಖ್ಯೆಯೇ 8.5 ಲಕ್ಷ ಕೋಟಿಯಷ್ಟಿದೆ. ಕಳೆದ ಒಂದು ವರ್ಷದ ಅಂತರದಲ್ಲಿ ಸುಮಾರು 3 ಲಕ್ಷ ಹೊಸ ಮಕ್ಕಳನ್ನು ಯೋಜನೆ ಅಡಿಯಲ್ಲಿ ತರಲಾಗಿದೆ.

ಹೆಣ್ಣುಮಕ್ಕಳ ಕಲಿಕೆಯೇ ಫೋಕಸ್‌

ಹೆಣ್ಣುಮಕ್ಕಳ ಕಲಿಕೆಯೇ ಫೋಕಸ್‌

ಭಾರತದ ಹಲವು ಜಿಲ್ಲೆಗಳಲ್ಲಿ ಕಲಿಕೆಯ ವಿಚಾರಕ್ಕೆ ಬಂದರೆ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ದೊಡ್ಡಮಟ್ಟದ ತಾರತಮ್ಯವಿದೆ. ಹೀಗಾಗಿ ಹೆಣ್ಣು ಮಕ್ಕಳ ಕಲಿಕೆ, ಶಾಲೆಗಳ ಗುಣಮಟ್ಟ ಸುಧಾರಣೆ, ಶಿಕ್ಷಣ ಪಡೆಯುಲು ಪೂರಕ ವಾತಾವರಣ ನಿರ್ಮಾಣಗಳ ಮೂಲಕ ಒಟ್ಟಾರೆ ಅವರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ತರಲು ಎಜುಕೇಟ್‌ ಗರ್ಲ್ಸ್‌ (ಇಜಿ) ಹೆಸರಿನ ಸರಕಾರೇತ ಸಂಸ್ಥೆಯನ್ನು ಕಂಪನಿ ನೊಂದಾವಣಿ ಮಾಡಿಸಿದೆ. ಸಾರ್ವಜನಿಕರು, ಖಾಸಗಿ ಹಾಗೂ ಸಮುದಾಯದ ನೆರವಿನೊಂದಿದೆ ಈ ಯೋಜನೆ ಈ ಯೋಜನೆ 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಧಾರ್, ಮಧ್ಯ ಪ್ರದೇಶ, ಯುದಯಪುರ ಹಾಗೂ ರಾಜಾಸ್ತಾನಗಳಲ್ಲಿ ಸೃಷ್ಟಿಸಿದೆ.

ನೀವು ಪಾಲ್ಗೊಳ್ಳಲು ದಾರಿ ಹೀಗಿದೆ...

ನೀವು ಪಾಲ್ಗೊಳ್ಳಲು ದಾರಿ ಹೀಗಿದೆ...

ಇಂತಹ ಪ್ರಗತಿಪರ ಕಾರ್ಯಗಳನ್ನು ಮುಂದುವರಿಸಿರುವ ನಿಹಾರ್ ಶಾಂತಿ ಆಮ್ಲದ #PhoneUthaoIndiaKoPadhao ಭಾರತದ ಶಿಕ್ಷಣ ವ್ಯವಸ್ಥೆಯ ಸ್ವರೂಪವನ್ನು ಬದಲಿಸುವ ಸಾಧ್ಯತೆಗಳಿವೆ ಎಂದು ಹಲವರು ನಂಬಿದ್ದಾರೆ. ಒಂದು ಫೋನ್‌ ಕರೆಯನ್ನು ಸ್ವೀಕರಿಸುವ ಮೂಲಕ ಎಲ್ಲೋ ದೂರದಲ್ಲಿರುವ ಒಂದು ಪುಟ್ಟ ಮಗುವಿಗೆ ಇಂಗ್ಲಿಷ್ ಕಲಿಸುವ ಆಲೋಚನೆ ಜತೆಗೆ ನಿಮ್ಮನ್ನೂ ಜೋಡಿಸಿಕೊಳ್ಳಬಹುದಾಗಿದೆ.

"ಉದಾತ್ತವಾದ ಹಾಗೂ ಬಹಳ ಸುಲಭ ದಾರಿಯಲ್ಲಿ ಮಗುವೊಂದರ ಜೀವನದಲ್ಲಿ ಬದಲಾವಣೆ ಮಾಡಬಹುದು ಅಂದರೆ, ಫೋನ್ ಉಠಾವೋ ಇಂಡಿಯಾ ಕೋ ಪಡಾವೋ ಕಾರ್ಯಕ್ರಮವು ಇಂಗ್ಲಿಷ್ ಮಾತನಾಡುವ ಯಾರಾದರೂ ಮತ್ತು ಎಲ್ಲರಿಗಾಗಿಯೂ ಇದೆ. ಇಂಗ್ಲಿಷ್ ಬಲ್ಲವರು ಮಗುವಿನಲ್ಲೂ ಅದೇ ಕೌಶಲ ಬೆಳೆಸಲು ಸಹಾಯ ಮಾಡಬಹುದು.

"ಆದ್ದರಿಂದ ಈ ಅಂತರರಾಷ್ಟ್ರೀಯ ಸಾಕ್ಷರತಾ ದಿನದಂದು ಆ ಫೋನ್ ಕರೆ ತೆಗೆದುಕೊಳ್ಳಿ ಮತ್ತು ಮಗುವಿನ ಜೀವನದಲ್ಲಿ ಬದಲಾವಣೆ ತರಲು ನೆರವಾಗಿ. ಎಲ್ಲ ಸೇರಿ ನಿಮಗೆ ಅಗತ್ಯ ಇರುವುದು ನಿಮ್ಮ ಸಮಯದ ಹತ್ತು ನಿಮಿಷ ಮತ್ತು ಬದುಕನ್ನು ಬದಲಾಯಿಸಬೇಕು ಎಂಬ ಹೃದಯ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಸ್ವಯಂಸೇವಕರಾಗಿ ನೋಂದಣಿ ಮಾಡಿಕೊಳ್ಳಬಹುದು."

ಸ್ವಯಂಸೇವಕರಾಗಲು 1800-209-7788 ಟಾಲ್‌ ಫ್ರೀ ನಂಬರ್‌ಗೆ ಕರೆ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X