ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

A380 ವಿಮಾನದ ಜಗತ್ತಿನ ಅತ್ಯಂತ ಹತ್ತಿರ ಮಾರ್ಗದ ಸೇವೆ ಆರಂಭ

By ಅನಿಲ್ ಆಚಾರ್
|
Google Oneindia Kannada News

ಅಬುಧಾಬಿ, ಜುಲೈ 1: ಯುಎಇ ಮೂಲದ ಎಮಿರೇಟ್ಸ್ ಸೋಮವಾರದಂದು ಜಗತ್ತಿನ ಅತ್ಯಂತ ಕಡಿಮೆ ದೂರಕ್ಕೆ A380 ವಿಮಾನವನ್ನು ದುಬೈ ಮತ್ತು ಮಸ್ಕತ್ ಮಧ್ಯೆ ಆರಂಭಿಸಿದೆ. ದುಬೈ ಮತ್ತು ಮಸ್ಕತ್ ಮಧ್ಯದ ಸರಾಸರಿ ಪ್ರಯಾಣದ ಅವಧಿ 40 ನಿಮಿಷ ಮಾತ್ರ. ಇದು A380 ವಿಮಾನವನ್ನು 42 ಮಂದಿಯ ತಂಡವು ಸ್ವಚ್ಛಗೊಳಿಸಲು ತೆಗೆದುಕೊಳ್ಳುವ ಸಮಯಕ್ಕಿಂತ ಕೇವಲ ಐದು ನಿಮಿಷ ಹೆಚ್ಚು ಎಂದು ಏರ್ ಲೈನ್ಸ್ ಟ್ವೀಟ್ ಮಾಡಿದೆ.

ಕತಾರ್: ಸೇವೆಗಾಗಿ ಆರ್ಯಭಟ ಪ್ರಶಸ್ತಿ ಪಡೆದ ಬೆಂಗಳೂರಿನ ಸತೀಶ್‌ಕತಾರ್: ಸೇವೆಗಾಗಿ ಆರ್ಯಭಟ ಪ್ರಶಸ್ತಿ ಪಡೆದ ಬೆಂಗಳೂರಿನ ಸತೀಶ್‌

ದುಬೈ ಮತ್ತು ಮಸ್ಕತ್ ಮಧ್ಯದ ದೂರಕ್ಕಿಂತ (340 ಕಿ.ಮೀ) A380 ವಿಮಾನದಲ್ಲಿನ ವೈರಿಂಗ್ (500 ಕಿ.ಮೀ) ಹೆಚ್ಚು ಎಂದು ಟ್ವೀಟ್ ಮಾಡಲಾಗಿದೆ. ಎಮಿರೇಟ್ಸ್ ನ ವಾಣಿಜ್ಯ ಕಾರ್ಯಾಚರಣೆ ವಿಭಾಗೀಯ ಹಿರಿಯ ಉಪಾಧ್ಯಕ್ಷ ಶೇಖ್ ಮಜಿದ್ ಅಲ್ ಮೌಲ್ಲಾ ಮಾತನಾಡಿ, A380 ಸೇವೆಯನ್ನು ಪರಿಚಯಿಸಿದ ಉದ್ದೇಶ ಏನೆಂದರೆ, ಈ ಕ್ಷೇತ್ರದಲ್ಲೇ ಅದ್ಭುತ ಸೇವೆ ಒದಗಿಸುವುದರ ಅನುಭವ ಅವರಿಗೆ ಆಗಬೇಕು. ಇದರ ಜತೆಗೆ ಅವರ ಅಗತ್ಯಕ್ಕೆ ಸೇವೆ ವಿಸ್ತರಿಸುತ್ತೇವೆ ಎಂದು ಹೇಳಿದ್ದಾರೆ.

Worlds shortest A380 air bus between Dubai and Muscat launched

ಹೊಸ ವಿಮಾನವು ಎಮಿರೇಟ್ಸ್ ನ ಸ್ವಂತ ದಾಖಲೆಯನ್ನು ಮುರಿದಿದೆ. ಈ ಹಿಂದೆ A380 ಸೇವೆಯನ್ನು ದುಬೈ ಮತ್ತು ದೋಹಾ ಮಧ್ಯ ಒದಗಿಸಿತ್ತು. ಆದರೆ ಯುಎಇ ಮತ್ತು ಕತಾರ್ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣಕ್ಕೆ ದೋಹಾಕ್ಕೆ ಎಲ್ಲ ವಿಮಾನವು 2017ರಲ್ಲಿ ರದ್ದಾಯಿತು.

English summary
World's shortest A380 air bus between Dubai and Muscat launched on Monday. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X