ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರೆಬಿಯಾ: ಅತಿ ದೊಡ್ಡ ತೈಲ ಘಟಕ ಡ್ರೋನ್ ದಾಳಿಗೆ ಭಸ್ಮ

|
Google Oneindia Kannada News

ದುಬೈ, ಸೆಪ್ಟೆಂಬರ್ 14: ಸೌದಿ ಅರೆಬಿಯಾದಲ್ಲಿನ ವಿಶ್ವದ ಅತಿ ದೊಡ್ಡ ತೈಲ ಘಟಕದ ಮೇಲೆ ಇಂದು ಬೆಳಿಗ್ಗೆ ಡ್ರೋನ್ ದಾಳಿ ನಡೆದಿದ್ದು ತೈಲ ಘಟಕವು ಬೆಂಕಿಗೆ ಆಹುತಿಯಾಗಿದೆ.

ಸರ್ಕಾರಿ ಸ್ವಾಮ್ಯದ ಸೌದಿ ಅರ್ಮ್ಯಾಕೊ ಹೆಸರಿನ ಸೌದಿಯ ದೊಡ್ಡ ತೈಲ ಘಟಕದ ಮೇಲೆ ರಿಮೋಟ್ ನಿಯಂತ್ರಿತ ಡ್ರೋನ್‌ಗಳು ದಾಳಿ ನಡೆಸಿದ್ದು, ತೈಲ ಘಟಕ ಹೊತ್ತಿ ಉರಿಯುವಂತೆ ಮಾಡಿವೆ.

ಯೆಮನ್ ಬಂಡುಕೋರರು ಡ್ರೋನ್ ದಾಳಿಯ ಹೊಣೆ ಹೊತ್ತಿದ್ದು, ಇದಕ್ಕೂ ಮುನ್ನಾ ಅರಬ್‌ನ ಕೆಲವು ನಗರಗಳನ್ನು ಗುರಿ ಆಗಿಸಿಕೊಂಡು ಇವರು ಡ್ರೋನ್ ದಾಳಿ ನಡೆಸಿದ್ದರು.

Worlds Largest Oil Processing Unit Attacked In UAE

ದಾಳಿಯಲ್ಲಿ ಜೀವ ಹಾನಿ ಆಗಿರುವ ಬಗ್ಗೆ ಮಾಹಿತಿ ಇಲ್ಲ, ಆದರೆ ಬೆಂಕಿ ಮಾತ್ರ ಅತ್ಯಂತ ತೀವ್ರ ಸ್ವರೂಪದ್ದಾಗಿದ್ದು, ಕಿ.ಮೀ ಗಟ್ಟಲೆ ಹೊಗೆ ಆವರಿಸಿದೆ. ಆಕಾಶದೆತ್ತರಕ್ಕೆ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದಾಗಿ ಸ್ಥಳೀಯರು ಹೇಳಿದ್ದಾರೆ.

ಸೌದಿ ಅರೆಬಿಯಾದ ರಕ್ಷಣಾ ಸಚಿವರು ನೀಡಿರುವ ಹೇಳಿಕೆಯಂತೆ, ಹತ್ತು ರಿಮೋಟ್ ಚಾಲಿತ ಡ್ರೋನ್‌ಗಳನ್ನು ಯೆಮನ್ ಬಂಡುಕೋರರು ದಾಳಿಗೆ ಬಳಸಿದ್ದರು. ಬಂಡುಕೋರರ ಯುದ್ಧ ಹೀಗೆ ಮುಂದುವರೆದರೆ ಭಾರಿ ಬೆಲೆಯನ್ನು ಅವರು ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸೌದಿಯ ತೈಲ ಘಟಕದ ಮೇಲೆ ನಡೆದಿರುವ ಈ ದಾಳಿಯ ವಿಶ್ವದ ಇತರ ರಾಷ್ಟ್ರಗಳ ತಲೆನೋವಿಗೂ ಕಾರಣವಾಗಿದ್ದು, ಈಗಾಗಲೇ ಇಂಧನ ಬೆಲೆ ಹೆಚ್ಚಿದ್ದು, ದಾಳಿಯ ನಂತರ ಇನ್ನಷ್ಟು ಹೆಚ್ಚಾಗುವ ಭೀತಿ ಇದೆ.

English summary
Dron attack happened Saturday morning on UAE's largest oil processing unit, Its also world largest oil processing unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X