ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕಳ್ಳತನದ ಆರೋಪ: ದುಬೈಯಿಂದ ಬಂದು ಹತ್ಯೆಯಾದ ನತದೃಷ್ಟ!

|
Google Oneindia Kannada News

ಬರೇಲಿ, ಆಗಸ್ಟ್ 30: ಜಾನುವಾರು ಕಳ್ಳತನದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಜನರೇ ಹೊಡೆದು ಕೊಂದ ದಾರುಣ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಭೊಲಾಪುರ ಹದೊಲಿಯಾ ಎಂಬ ಹಳ್ಳಿಯಲ್ಲಿ ನಡೆದಿದೆ.

ದುಬೈಯಲ್ಲಿ ಟೇಲರ್ ಕೆಲಸ ಮಾಡುತ್ತಿದ್ದ ಶಾರೂಖ್ ಬರೇಲಿಯಲ್ಲಿರುವ ತನ್ನ ಮನೆಗೆ ಬಂದಿದ್ದ. ಈ ಸಮಯದಲ್ಲಿ ತನ್ನ ಮೂವರು ಗೆಳೆಯರೊಂದಿಗೆ ಅಡ್ಡಾಡಿಕೊಂಡು ಬರಲು ಹೋಗಿದ್ದ ಸಮಯದಲ್ಲಿ ಎಮ್ಮೆಯೊಂದನ್ನು ಕದ್ದಿದ್ದಾರೆಂದು ಆರೋಪಿಸಿ ಜನರ ಗುಂಪೊಂದು ಅವರ ಮೇಲೆ ದಾಳಿ ನಡೆಸಿತ್ತು.

ಗೋಕಳ್ಳನೆಂಬ ಆರೋಪ: ಹರ್ಯಾಣದಲ್ಲಿ ವ್ಯಕ್ತಿಯ ಬರ್ಬರ ಹತ್ಯೆಗೋಕಳ್ಳನೆಂಬ ಆರೋಪ: ಹರ್ಯಾಣದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಈ ಸಮಯದಲ್ಲಿ ಶಾರೂಖ್ ನ ಉಳಿದ ಸ್ನೇಹಿತರು ಪರಾರಿಯಾಗಿದ್ದಾರೆ. ಆದರೆ ಶಾರೂಖ್ ನನ್ನು ಹಿಡಿದ ಜನರು ಆತನನ್ನು ಚೆನ್ನಾಗಿ ಥಳಿಸಿದ್ದು, ಅತಿಯಾದ ಗಾಯ ಮತ್ತು ರಕ್ತಸ್ರಾವದಿಂದ ಬಳಲುತ್ತಿದ್ದ ಶಾರೂಖ್ ನನ್ನು ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ, ಆತ ಅಷ್ಟರಲ್ಲೇ ಅಸುನೀಗಿದ್ದ.

Uttar Pradesh: Man commin from Dubai to his home lynched

ಗೋಕಳ್ಳನೆಂದು ಆರೋಪಿಸಿ ಇತ್ತೀಚೆಗಷ್ಟೆ ಹರ್ಯಾಣದಲ್ಲಿ ಓರ್ವ ವ್ಯಕ್ತಿ ಮತ್ತು ರಾಜಸ್ಥಾನದಲ್ಲಿ ಓರ್ವ ವ್ಯಕ್ತಿಯನ್ನು ಜನರೇ ಹೊಡು ಕೊಂದಿದ್ದರು.

ರಾಜಸ್ಥಾನ: ಗೋಕಳ್ಳನೆಂದು ವ್ಯಕ್ತಿಯನ್ನು ಹೊಡೆದು ಕೊಂದ ಜನರಾಜಸ್ಥಾನ: ಗೋಕಳ್ಳನೆಂದು ವ್ಯಕ್ತಿಯನ್ನು ಹೊಡೆದು ಕೊಂದ ಜನ

ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದು ಸ್ವತಃ ಪ್ರಧಾನಿ ಮೋದಿ ಅವರೇ ಕರೆ ಕೊಟ್ಟಿದ್ದರೂ ಇಂಥ ಪ್ರಕರಣಗಳು ನಿಲ್ಲುತ್ತಿಲ್ಲ.

ಮೋದಿ ಜನಪ್ರಿಯತೆ ಹೆಚ್ಚಿದಷ್ಟೂ ಗುಂಪು ಹತ್ಯೆ ಹೆಚ್ಚಳ: ಮೇಘ್ವಾಲ್ ವಿವಾದಮೋದಿ ಜನಪ್ರಿಯತೆ ಹೆಚ್ಚಿದಷ್ಟೂ ಗುಂಪು ಹತ್ಯೆ ಹೆಚ್ಚಳ: ಮೇಘ್ವಾಲ್ ವಿವಾದ

ಗೋ ರಕ್ಷಣೆಯ ಹೆಸರಿನಲ್ಲಿ ಗುಂಪುಗೂಡಿಕೊಂಡು ಹೊಡೆಯುವುದು, ಕೊಲ್ಲುವುದು ಅಪರಾಧ. ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು.

English summary
A man was lynched in a village in Uttar Pradesh’s Bareilly district on suspicion that he had stolen a buffalo, police said today. He was comming to home from Dubai, where he was working as tailor,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X