ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿವಂತ ದೇಶ ಸೌದಿ ಅರೇಬಿಯಾದಿಂದ ಇದೇ ಮೊದಲ ಬಾರಿಗೆ ಟೂರಿಸ್ಟ್ ವೀಸಾ

|
Google Oneindia Kannada News

ರಿಯಾದ್, ಸೆಪ್ಟೆಂಬರ್ 27: ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾವು ಟೂರಿಸ್ಟ್ (ಪ್ರವಾಸಿ) ವೀಸಾ ವಿತರಣೆಗೆ ಮುಂದಾಗಿರುವುದಾಗಿ ಶುಕ್ರವಾರ ತಿಳಿಸಿದೆ. ಮುಸ್ಲಿಂ ಸಾಂಪ್ರದಾಯಿಕ ದೇಶವು ರಜಾ ಸಮಯ ಕಳೆಯಲು ತೆರೆದುಕೊಂಡಿದೆ. ಆ ಮೂಲಕ ತೈಲದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು, ಬೇರೆ ಆದಾಯ ಮೂಲಗಳ ಕಡೆಗೂ ಪ್ರಯತ್ನಿಸುತ್ತಿದೆ.

ತೈಲದ ಆರ್ಥಿಕತೆ ಅವಲಂಬನೆ ಮುಗಿದ ನಂತರ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ರಾಜ ಮೊಹ್ಮದ್ ಬಿನ್ ಸಲ್ಮಾನ್ ಆಲೋಚನೆ ಮಾಡಿದ್ದು, ಪ್ರವಾಸೋದ್ಯಮ ಕೂಡ ಅದರಲ್ಲಿ ಮುಖ್ಯ ಆರ್ಥಿಕ ಮೂಲ ಆಗಬೇಕು ಎಂದು ಚಿಂತಿಸಿದ್ದಾರೆ. ಎರಡು ವಾರಗಳ ಹಿಂದಷ್ಟೇ ಸೌದಿ ಅರೇಬಿಯಾದ ಅತಿ ದೊಡ್ದ ತೈಲ ಸಂಗ್ರಹದ ಮೇಲೆ ದಾಳಿ ನಡೆದಿತ್ತು. ಅದಕ್ಕೆ ಇರಾನ್ ಜವಾಬ್ದಾರಿ ಎಂದು ಅಮೆರಿಕ ಆರೋಪ ಮಾಡಿತ್ತು.

Saudi Aramco ತೈಲ ಕಂಪೆನಿ: ಅರಬ್ಬರ ದೇಶದ ಕುಬೇರನ ಸಂಪತ್ತುSaudi Aramco ತೈಲ ಕಂಪೆನಿ: ಅರಬ್ಬರ ದೇಶದ ಕುಬೇರನ ಸಂಪತ್ತು

"ಸೌದಿ ಅರೇಬಿಯಾವನ್ನು ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಮುಕ್ತಗೊಳಿಸುವುದು ನಮ್ಮ ದೇಶಕ್ಕೆ ಐತಿಹಾಸಿಕ ಕ್ಷಣ" ಎಂದು ಪ್ರವಾಸೋದ್ಯಮ ಇಲಾಖೆ ಮುಖ್ಯಸ್ಥ ಅಹ್ಮದ್ ಅಲ್- ಖತೀಬ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಲವತ್ತೊಂಬತ್ತು ದೇಶಗಳ ನಾಗರಿಕರಿಗೆ ಆನ್ ಲೈನ್ ವೀಸಾ ಅರ್ಜಿಗಳನ್ನು ಶನಿವಾರದಿಂದ ಸೌದಿ ಅರೇಬಿಯಾ ಆರಂಭಿಸಲಿದೆ.

UAE Will Issue Tourist Visa First Time

ಪ್ರವಾಸಿಗರು ಅಚ್ಚರಿಗೊಳ್ಳುತ್ತಾರೆ. ನಮ್ಮಲ್ಲಿ ಅಂಥ ಅದ್ಭುತ ಸ್ಥಳಗಳಿವೆ. ಐದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಿವೆ. ಸ್ಥಳೀಯವಾದ ಸಂಸ್ಕೃತಿ ಹಾಗೂ ಪ್ರಾಕೃತಿಕ ಸೌಂದರ್ಯ ತಾಣಗಳಿವೆ ಎಂದು ಪ್ರವಾಸೋದ್ಯಮ ಮುಖ್ಯಸ್ಥರು ತಿಳಿಸಿದ್ದಾರೆ. ಇನ್ನು ವಿದೇಶಿ ಮಹಿಳೆಯರಿಗೆ ಸೌದಿ ಅರೇಬಿಯಾದ ಕಠಿಣ ವಸ್ತ್ರಸಂಹಿತೆಯಿಂದ ವಿನಾಯಿತಿ ನೀಡುವುದಾಗಿ ತಿಳಿಸಿದ್ದಾರೆ.

ಮದ್ಯ ಮಾರಾಟ ಕೂಡ ನಿಷೇಧವಿದ್ದು, ಇನ್ನೂ ಕೆಲ ಸಾಮಾಜಿಕ ಕಟ್ಟುಪಾಡುಗಳು ಪ್ರವಾಸಿಗರಿಗೆ ಕಠಿಣ ಎನಿಸುತ್ತದೆ. ಆದರೆ ರಾಜ ಮೊಹ್ಮದ್ ಬಿನ್ ಸಲ್ಮಾನ್ ಸೌದಿ ಅರೇಬಿಯಾಗೆ ಬದಲಾವಣೆ ತರುವ ಪ್ರಯತ್ನದಲ್ಲಿ ಇದ್ದಾರೆ. ಕಳೆದ ವರ್ಷದಿಂದ ಅಷ್ಟೇ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾಗವಹಿಸಲು ವೀಸಾ ನೀಡಲು ಆರಂಭಿಸಿದೆ.

ಸದ್ಯಕ್ಕೆ ಮೆಕ್ಕಾ ಮದೀನಾ ಭೇಟಿ ನೀಡುವುದಕ್ಕೆ ಹಾಗೂ ಸೌದಿ ಅರೇಬಿಯಾದಲ್ಲಿ ಉದ್ಯೋಗ ನಿರ್ವಹಿಸುವವರು ಮತ್ತು ಅವರ ಅವಲಂಬಿತರಿಗೆ ಮಾತ್ರ ವೀಸಾ ವಿತರಿಸಲಾಗುತ್ತಿದೆ. ಇನ್ನು ಸೌದಿ ಅರೇಬಿಯಾದಲ್ಲಿ ಇರುವ ಕಠಿಣ ಕಾನೂನುಗಳ ಬಗ್ಗೆ ಆಕ್ಷೇಪ ಇದ್ದು, ಆ ಕಾರಣಕ್ಕೆ ಪ್ರವಾಸಿಗರು ಭೇಟಿ ನೀಡುವುದು ಕಡಿಮೆ. ಇದೀಗ ತಳ ಮಟ್ಟದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಶ್ರಮಿಸಬೇಕಿದೆ.

English summary
UAE announced on Friday that, it will issue tourist visa for first time and this is the historic moment for country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X