ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನಿಂದ ಪ್ರವಾಸಿ ವೀಸಾ ನೀಡಲು ಮುಂದಾದ ಯುಎಇ

|
Google Oneindia Kannada News

ದುಬೈ, ಆಗಸ್ಟ್‌ 30: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಕೊರೊನಾ ವೈರಸ್‌ ಸೋಂಕಿನ ವಿರುದ್ದ ಸಂಪೂರ್ಣ ಲಸಿಕೆಯನ್ನು ಪಡೆದವರಿಗೆ ಸೋಮವಾರದಿಂದ ಟೂರಿಸ್ಟ್‌ ವೀಸಾ ನೀಡಲಿದೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಕೊರೊನಾ ವೈರಸ್‌ ಸೋಂಕು ದೈನಂದಿನ ಪ್ರಕರಣಗಳ ಸಂಖ್ಯೆಯು ಕಡಿಮೆಯಾದ ಹಿನ್ನೆಲೆ ಯುಎಇ ಪ್ರವಾಸಿ ವೀಸಾವನ್ನು ನೀಡಲು ಮುಂದಾಗಿದೆ.

ಕಳೆದ ವಾರದಿಂದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಕೊರೊನಾ ವೈರಸ್‌ ಸೋಂಕು ದೈನಂದಿನ ಪ್ರಕರಣಗಳು ಒಂದು ಸಾವಿರಕ್ಕೂ ಕಡಿಮೆ ಸಂಖ್ಯೆಯಲ್ಲಿ ದಾಖಲಾಗುತ್ತಿದೆ. ಕೊರೊನಾ ಲಸಿಕೆ ನೀಡಿಕೆ ಪ್ರಮಾಣವು ಕೂಡಾ ಅಧಿಕವಾಗಿದೆ. ಮಾಲ್ಟಾದಲ್ಲಿ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆ ನೀಡಿಕೆ ಪ್ರಮಾಣವು ವಿಶ್ವದಲ್ಲೇ ಅಧಿಕವಾಗಿದೆ. ನಂತರದ ಸ್ಥಾನದಲ್ಲಿ ಯುಎಇ ಇದೆ. ಯುಎಇ ಅಲ್ಲಿ ಕೊರೊನಾ ಲಸಿಕೆ ನೀಡಿಕೆ ಪ್ರಮಾಣವು ಶೇಕಡ 92 ಆಗಿದೆ.

ಭಾರತದಿಂದ ಬರುವ ಪ್ರಯಾಣಿಕರಿಗೆ ವೀಸಾ ಆನ್ ಅರೈವಲ್ ಸ್ಥಗಿತಗೊಳಿಸಿದ ಯುಎಇಭಾರತದಿಂದ ಬರುವ ಪ್ರಯಾಣಿಕರಿಗೆ ವೀಸಾ ಆನ್ ಅರೈವಲ್ ಸ್ಥಗಿತಗೊಳಿಸಿದ ಯುಎಇ

ಗುರುತಿಸುವಿಕೆ ಮತ್ತು ಪೌರತ್ವಕ್ಕಾಗಿ ಫೆಡರಲ್ ಪ್ರಾಧಿಕಾರ (ಐಸಿಎ) ಮತ್ತು ರಾಷ್ಟ್ರೀಯ ತುರ್ತುಸ್ಥಿತಿ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಸಿಇಎಂಎ) ಪ್ರವಾಸಿ ವೀಸಾಗಳನ್ನು ನೀಡಲಾಗುವುದು ಎಂದು ಜಂಟಿಯಾಗಿ ಘೋಷಣೆ ಮಾಡಿದೆ. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಅನುಮೋದನೆ ಪಡೆದ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿರುವ ಎಲ್ಲಾ ದೇಶದ ಪ್ರವಾಸಿಗರಿಗೆ ಪ್ರವಾಸಿ ವೀಸಾವನ್ನು ಒದಗಿಸಲಾಗುವುದು ಎಂದು ತಿಳಿಸಿದೆ.

UAE to resume issuing visas to tourists fully vaccinated against Covid

ಯುಎಇಯ ಅಧಿಕೃತ ಸುದ್ದಿ ಸಂಸ್ಥೆ ಡಬ್ಲ್ಯುಎಎಮ್, "ಸಾರ್ವಜನಿಕ ಆರೋಗ್ಯ ಮತ್ತು ಪ್ರಮುಖ ವಲಯಗಳ ಚಟುವಟಿಕೆಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ದೇಶದ ಕಾರ್ಯತಂತ್ರದ ಭಾಗವಾಗಿ ಮತ್ತು ಸುಸ್ಥಿರ ಚೇತರಿಕೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ರಾಷ್ಟ್ರೀಯ ಪ್ರಯತ್ನಗಳಿಗೆ ಬೆಂಬಲವಾಗಿ ಪ್ರವಾಸಿಗರಿಗೆ ಪ್ರವಾಸಿ ವೀಸಾವನ್ನು ಒದಗಿಸಲಾಗುವುದು," ಎಂದು ಹೇಳಿದ್ದಾರೆ.

ಯುಎಇಯಲ್ಲಿ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆ ಪಡೆದವರಿಗೆ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ಬಯಸುವ ಪ್ರವಾಸಿಗರು ತಮ್ಮ ಕೊರೊನಾ ಲಸಿಕೆಯನ್ನು ಪಡೆಯಲು ಐಸಿಎ ಪ್ಲಾಟ್‌ಫಾರ್ಮ್ ಅಥವಾ Al Hosn ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಯುಎಇ ತಿಳಿಸಿದೆ. ಇನ್ನು ಯುಎಇಯಲ್ಲಿ ಕೋವಿಡ್‌ ವಿರುದ್ದ ಲಸಿಕೆ ಪಡೆದ ಜನರು ಅಬುಧಾಬಿಯಲ್ಲಿ ಮಾಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವಂತಹ ಅವಕಾಶವನ್ನು ಪಡೆಯುತ್ತಾರೆ.

 ಭಾರತದ ಪ್ರಯಾಣಿಕರಿಗೆ ನಿಷೇಧ ತೆಗೆದುಹಾಕಿದ ಯುಎಇ: ದುಬೈಗೆ ತೆರಳಲಿದ್ದಿರಿಯೇ? ಇಲ್ಲಿದೆ ಮಾರ್ಗಸೂಚಿ ಭಾರತದ ಪ್ರಯಾಣಿಕರಿಗೆ ನಿಷೇಧ ತೆಗೆದುಹಾಕಿದ ಯುಎಇ: ದುಬೈಗೆ ತೆರಳಲಿದ್ದಿರಿಯೇ? ಇಲ್ಲಿದೆ ಮಾರ್ಗಸೂಚಿ

ಜೂನ್ 3 ರ ಹೊತ್ತಿಗೆ, ಡಬ್ಲ್ಯುಎಚ್‌ಒ ಕೋವಿಡ್ -19 ಲಸಿಕೆಗಳಲ್ಲಿ ಆಸ್ಟ್ರಾಜೆನೆಕಾ/ಆಕ್ಸ್‌ಫರ್ಡ್/ಕೋವಿಶೀಲ್ಡ್, ಜಾನ್ಸನ್ ಮತ್ತು ಜಾನ್ಸನ್, ಮಾಡರ್ನಾ, ಫೈಜರ್/ಬಯೋಟೆಕ್, ಸಿನೋಫಾರ್ಮ್ ಮತ್ತು ಸಿನೋವಾಕ್‌ ಅನ್ನು ಅನುಮೋದಿಸಿದೆ. ಈ ಕೋವಿಡ್‌ ಲಸಿಕೆಯನ್ನು ಪಡೆದವರು ಯುಎಇ ನಲ್ಲಿ ಪ್ರವಾಸಿ ವೀಸಾವನ್ನು ಪಡೆಯಲು ಅರ್ಹರಾಗಿದ್ದಾರೆ. "ಪ್ರವಾಸಿ ವೀಸಾದಲ್ಲಿ ಬರುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು," ಎಂದು ಯುಎಇಯ ಅಧಿಕೃತ ಸುದ್ದಿ ಸಂಸ್ಥೆ ಡಬ್ಲ್ಯುಎಎಮ್ ಎಂದಿದೆ.

ಕೊರೊನಾ ವೈರಸ್‌ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆ ಪ್ರವೇಶ ನಿಷೇಧದ ಹೊರತಾಗಿಯೂ, ಭಾರತವು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಗ್ರಸ್ಥಾನ ರಾಷ್ಟ್ರವಾಗಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 2021 ರ ಮೊದಲಾರ್ಧದಲ್ಲಿ 1.9 ಮಿಲಿಯನ್ ಪ್ರಯಾಣಿಕರ ಸಂಖ್ಯೆಯನ್ನು ಹೊಂದಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಎಮಿರೇಟ್ಸ್ ಏರ್ಲೈನ್ಸ್ ಯುಎಸ್ ಮತ್ತು ಕೆನಡಾಕ್ಕೆ ಪ್ರಯಾಣಿಸುವ ಭಾರತೀಯರು ಹೆಚ್ಚಾಗಿ ದುಬೈಗೆ ತೆರಳಿ ಅಲ್ಲಿಗೆ ಪ್ರವಾಸ ಮಾಡುತ್ತಾರೆ. ಯುಎಸ್‌ ಮತ್ತು ಕೆನಾಡಕ್ಕೆ ಸಂಚಾರ ಮಾಡಲು ದುಬೈ ಅನುಕೂಲಕರ ಸ್ಥಳವಾಗಿದೆ.

ಈ ವರ್ಷದ ಆರಂಭದಲ್ಲಿ ಮಾರ್ಚ್‌ನಲ್ಲಿ, ಯುಎಇ ಸಂಸತ್ತು ಎಲ್ಲಾ ರಾಷ್ಟ್ರಕ್ಕೆ ಐದು ವರ್ಷಗಳ ಬಹು ಪ್ರವೇಶ ಪ್ರವಾಸಿ ವೀಸಾವನ್ನು ಅನುಮೋದಿಸಿತ್ತು. ಇಲ್ಲದಿದ್ದಲ್ಲಿ ಪ್ರವಾಸಿ ವೀಸಾವನ್ನು 30 ದಿನಗಳು ಅಥವಾ 90 ದಿನಗಳವರೆಗಿನ ಕಾಲಾವಧಿಯಲ್ಲಿ ಮಾತ್ರ ನೀಡಲಾಗುತ್ತದೆ. ಯುಎಸ್ ಅಥವಾ ಯುಕೆಯ ಮಾನ್ಯ ವೀಸಾ ಹೊಂದಿರುವ ಭಾರತೀಯ ನಾಗರಿಕರು ಪ್ರವಾಸಿ ವೀಸಾವನ್ನು ಪಡೆಯಲು ಅರ್ಹರಾಗಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
The United Arab Emirates announced it will resume issuing visas to all tourists fully vaccinated against COVID-19 from Monday August 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X