ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಬರುವ ಪ್ರಯಾಣಿಕರಿಗೆ ವೀಸಾ ಆನ್ ಅರೈವಲ್ ಸ್ಥಗಿತಗೊಳಿಸಿದ ಯುಎಇ

|
Google Oneindia Kannada News

ದುಬೈ, ಆಗಸ್ಟ್ 24: ಭಾರತದಿಂದ ಯುಎಇಗೆ ಹೋಗುವ ಪ್ರಯಾಣಿಕರು ಮತ್ತು ಕಳೆದ ಎರಡು ವಾರಗಳಲ್ಲಿ ಭಾರತದಲ್ಲಿ ಉಳಿದುಕೊಂಡಿರುವವರು ಕೂಡ ವೀಸಾ ಆನ್ ಅರೈವಲ್ ಪಡೆಯಲು ಸಾಧ್ಯವಿಲ್ಲ.

ಯುಎಇಯ ಎತಿಹಾಡ್ ಏರ್‌ವೇಸ್ ಟ್ವೀಟ್ ಮಾಡಿದ್ದು, ಯುಎಇ ಅಧಿಕಾರಿಗಳು ಕಳೆದ 14ದಿನಗಳಲ್ಲಿ ಭಾರತದಿಂದ ಬರುವ ಅಥವಾ ಬಂದ ಪ್ರಯಾಣಿಕರಿಗೆ ವೀಸಾ ಆನ್ ಅರೈವಲ್ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.

ಮಂಗಳೂರಿನಿಂದ ಯುಎಇ ರಾಷ್ಟ್ರಗಳಿಗೆ ವಿಮಾನ ಹಾರಾಟ ಆರಂಭ ಮಂಗಳೂರಿನಿಂದ ಯುಎಇ ರಾಷ್ಟ್ರಗಳಿಗೆ ವಿಮಾನ ಹಾರಾಟ ಆರಂಭ

ನಾವು ನಮ್ಮ ವೆಬ್‌ಸೈಟ್ ಅಪ್‌ಡೇಟ್ ಮಾಡಲು ಪ್ರಯತ್ನಿಸುತ್ತಿದ್ದೇವೆ, ಹೆಚ್ಚಿನ ಮಾಹಿತಿಗಾಗಿ https://bit.ly/TravelGuideEN ಭೇಟಿ ನೀಡಿ ಎಂದು ಹೇಳಲಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ,ಪಾಕಿಸ್ತಾನ, ನೇಪಾಳ, ಅಫ್ಘಾನಿಸ್ತಾನ, ಉಗಾಂಡಾ ಮತ್ತು ನಮೀಬಿಯಾದಿಂದ ಬರುವ ಪ್ರಯಾಣಿಕರಿಗೆ ಇದೇ ನಿಯಮಗಳು ಅನ್ವಯವಾಗುತ್ತವೆ ಎನ್ನಲಾಗಿದೆ.

UAE Temporarily Suspends Visa-On-Arrival For Passengers From India

ಯುಎಇಗೆ ತೆರಳುವ ಪ್ರಯಾಣಿಕರು ಕೋವಿಡ್ 19 ನೆಗೆಟಿವ್ ವರದಿ ಹೊಂದಿರಬೇಕು, ವರದಿ ವಿಮಾನ ಹತ್ತುವುದಕ್ಕೂ 6 ಗಂಟೆಗಿಂತ ಹೆಚ್ಚು ಹಳೆಯದಾಗಿರಬಾರದು.

ಯುಎಸ್‌ಎ ವೀಸಾಗಳು, ಗ್ರೀನ್‌ಕಾರ್ಡ್‌ಗಳು, ಯುಕೆ ರೆಸಿಡೆಂಟ್ ಪರ್ಮಿಟ್‌ಗಳು ಅಥವಾ ಇಯು ನಿವಾಸ ಪರವಾನಗಿಯೊಂದಿಗೆ ಸಾಮಾನ್ಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಭಾರತೀಯ ನಾಗರಿಕರಿಗೆ ಯುಎಇ 14 ದಿನಗಳವರೆಗೆ ಮಾನ್ಯತೆ ಪಡೆದ ಬಳಿಕ ಪ್ರವೇಶ ವೀಸಾವನ್ನುಪಡೆಯಲು ಅನುಮತಿಸಲಾಗಿದೆ.
ಕೊರೊನಾ ಹಿನ್ನೆಲೆ ಭಾರತದಿಂದ ಯುಎಇಗೆ ಸಂಚರಿಸುವ ವಿಮಾನಗಳನ್ನು ಆಗಸ್ಟ್‌ 2ರವರೆಗೆ ಸ್ಥಗಿತಗೊಳಿಸಲಾಗಿತ್ತು.

ದಿನಾಂಕವನ್ನು ಯುಎಇ ಅಧಿಕಾರಿಗಳ ನಿರ್ದೇಶನಗಳಿಗೆ ಅನುಗುಣವಾಗಿ ಮತ್ತೆ ವಿಸ್ತರಣೆ ಮಾಡಬಹುದು ಎಂದು ಎತಿಹಾಡ್‌ ಏರ್ವೇಸ್‌ಹೇಳಿತ್ತು. ಇದೀಗ ಈ ನಿರ್ಧಾರವನ್ನು ಘೋಷಿಸಿದೆ.

ಕೊರೊನಾ ಸಾಂಕ್ರಾಮಿಕದ ದೃಷ್ಟಿಯಿಂದ, ಸರ್ಕಾರವು ಮತ್ತೊಮ್ಮೆ ಅಂತಾರಾಷ್ಟ್ರೀಯ ವಿಮಾನಗಳ ನಿಷೇಧವನ್ನು ವಿಸ್ತರಿಸಿದೆ. ಆಗಸ್ಟ್ 31, 2021 ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲಿನ ನಿಷೇಧವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಅಂದರೆ, ಆಗಸ್ಟ್ 31 ರವರೆಗೆ, ಭಾರತದಿಂದ ಯಾವುದೇ ವಿಮಾನ ವಿದೇಶಕ್ಕೆ ಹಾರಾಟ ನಡೆಸುವುದಿಲ್ಲ. ಅಥವಾ ವಿದೇಶದಿಂದ ಯಾವ ವಿಮಾಣವೂ ಭಾರತಕ್ಕೆ ಬರಲು ಅವಕಾಶವಿರುವುದಿಲ್ಲ. ಡಿಜಿಸಿಎ ಬಗ್ಗೆ ಇಂದು ಸುತ್ತೋಲೆ ಹೊರಡಿಸಿದೆ.

ನಿಷೇಧ ವಿಸ್ತರಣೆಯ ಹಿಂದಿನ ಕಾರಣ : ಕೊರೊನಾ ವೈರಸ್ ಮೂರನೇ ಅಲೆಯ ಆತಂಕ ಮತ್ತು ಅನೇಕ ದೇಶಗಳಲ್ಲಿ ಡೆಲ್ಟಾ ರೂಪಾಂತರಗಳ ವೈರಸ್ ಪ್ರಕರಣಗಳು ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಡಿಜಿಸಿಎ (ಈ ನಿರ್ಧಾರ ತೆಗೆದುಕೊಂಡಿದೆ. ಅಮೆರಿಕ ಮತ್ತು ಕೆಲವು ಯುರೋಪಿಯನ್ ದೇಶಗಳಲ್ಲಿ ಡೆಲ್ಟಾ ರೂಪಾಂತರ ಪ್ರಕರಣಗಳು ವರದಿಯಾಗಿವೆ.

ಈ ಹಿನ್ನೆಲೆಯಲ್ಲಿ ಅನೇಕ ದೇಶಗಳು ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ನಿಷೇಧಿಸಿದೆ . ಡಿಜಿಸಿಎ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಈ ನಿಷೇಧವು ಅಂತರರಾಷ್ಟ್ರೀಯ ಸರಕು ವಿಮಾನಗಳು ಮತ್ತು ಡಿಜಿಸಿಎ ಅನುಮತಿ ಪಡೆದ ವಿಮಾನಗಳಿಗೆ ಅನ್ವಯಿಸುವುದಿಲ್ಲ.

ಕರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು. ನಂತರ ಕೆಲ ಷರತ್ತುಗಳೊಂದಿಗೆ ಮೇ 2020ರಲ್ಲಿ ದೇಶೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧವನ್ನು ಮುಂದುವರೆಸಲಾಗಿತ್ತು. ಈ ಮೊದಲು ಈ ನಿಷೇಧವನ್ನು ಜುಲೈ 31, 2021 ರವರೆಗೆ ಹೇರಲಾಗಿತ್ತು.

Recommended Video

ಪಾಕಿಸ್ತಾನ ಬಾಂಗ್ಲಾದೇಶದ ಮುಸ್ಲಿಂರನ್ನು ಇಲ್ಲಿಗೆ ತುಂಬಿಸ್ಕೊಂಡಿದ್ರೆ ಪರಿಸ್ಥಿತಿ ಏನಾಗ್ತಿತ್ತು ? | Oneindia

English summary
Passengers headed from India to the UAE, and even those who've stayed in India over the last two weeks, will not be able to access the "visa-on-arrival" facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X