ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಕೊರೊನಾ ಲಸಿಕೆ ಪಡೆದ ಯುಎಇ ಪ್ರಧಾನಿ ಶೇಖ್ ಮೊಹಮ್ಮದ್

|
Google Oneindia Kannada News

ಅಬುದಾಬಿ, ನವೆಂಬರ್ 03: ಯುಎಇ ಪ್ರಧಾನಿ ಶೇಖ್ ಮೊಹಮ್ಮದ್ ಅವರು ಚೀನಾದ ಕೊರೊನಾ ಲಸಿಕೆಯ ಮೊದಲ ಡೋಸ್‌ ಅನ್ನು ಪಡೆದಿದ್ದಾರೆ.

ಈ ಕುರಿತು ಮಾಹಿತಿಯನ್ನು ಖುದ್ದಾಗಿ ಶೇಖ್ ಮೊಹಮ್ಮದ್ ಅವರೇ ಟ್ವಿಟ್ಟರ್‌ನಲ್ಲಿ ಫೋಟೊವನ್ನು ಕೂಡ ಹಂಚಿಕೊಂಡಿದ್ದಾರೆ.

ಚೀನಾ ಕೊರೊನಾ ಲಸಿಕೆಯ ಸುರಕ್ಷತೆಯ ಕುರಿತು ಹೆಚ್ಚಿದ ಆತಂಕ ಚೀನಾ ಕೊರೊನಾ ಲಸಿಕೆಯ ಸುರಕ್ಷತೆಯ ಕುರಿತು ಹೆಚ್ಚಿದ ಆತಂಕ

ಕೊವಿಡ್ 19 ಲಸಿಕೆ ಸ್ವೀಕರಿಸುವಾಗ ಪ್ರತಿಯೊಬ್ಬರಿಗೂ ಸುರಕ್ಷತೆ ಮತ್ತು ಉತ್ತಮ ಆರೋಗ್ಯವನ್ನು ನಾವು ಬಯಸುತ್ತೇವೆ ಮತ್ತು ಯುಎಇಯಲ್ಲಿ ಲಸಿಕೆ ಲಭ್ಯವಾಗುವಂತೆ ಪಟ್ಟು ಬಿಡದೆ ಶ್ರಮಿಸಿದ ನಮ್ಮ ತಂಡಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಯುಎಇಯ ಭವಿಷ್ಯವು ಎಂದೂ ಉತ್ತಮವಾಗಿರಲಿದೆ ಎಂದು ಬರೆದುಕೊಂಡಿದ್ದಾರೆ.

UAE PM Sheikh Mohammed Receives Dose Of Chinese Covid-19 Vaccine

ಚೀನಾದ ಲಸಿಕೆಯನ್ನು ಸಿನೋಫಾರ್ಮ್ ಅಭಿವೃದ್ಧಿಪಡಿಸಿದೆ. ಕಳೆದ ತಿಂಗಳು ತುರ್ತು ಪರಿಸ್ಥಿತಿಯಲ್ಲಿ ಸಿನೋಫಾರ್ಮ್ ನ ಈ ಲಸಿಕೆಯನ್ನು ಬಳಕೆ ಮಾಡಬಹುದು ಎಂದು ತಿಳಿಸಿತ್ತು.

ಮಂಗಳವಾರ ಬಹ್ರೇನ್ ಚೀನಾದ ಲಸಿಕೆಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಲು ಒಪ್ಪಿಗೆ ಸೂಚಿಸಿದೆ. ಯುಎಇಯಲ್ಲಿ ಇದುವರೆಗೂ 1,36,149 ಮಂದಿಗೆ ಕೊರೊನಾ ಸೋಂಕು ತಗುಲಿದೆ. 503 ಮಂದಿ ಮೃತಪಟ್ಟಿದ್ದಾರೆ.

ಕಳೆದ ತಿಂಗಳು ಯುಎಇ ರಷ್ಯಾದ ಸ್ಪುಟ್ನಿಕ್ Vಯ ಪ್ರಾಯೋಗಿಕ ಪರೀಕ್ಷೆಗಳನ್ನು ಅನುಮೋದಿಸಿದೆ.

English summary
The Prime Minister and Vice-President of the United Arab Emirates (UAE), as well as the ruler of Dubai, Sheikh Mohammed bin Rashid Al Maktoum received a dose of the coronavirus vaccine on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X