ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಮುಡಿಗೆ UAE ದೇಶದ ಅತ್ಯುನ್ನತ ನಾಗರಿಕ ಗೌರವ

|
Google Oneindia Kannada News

ಅಬುಧಾಬಿ, ಏಪ್ರಿಲ್ 4: ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್(UAE) ನ ಅತ್ಯುನ್ನತ ನಾಗರಿಕ ಗೌರವವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.

ಯುಎಇ ಅಧ್ಯಕ್ಷ ಖಾಲಿಫಾ ಬಿನ್ ಜಾಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಪ್ರಧಾನಿ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಗೌರವವಾದ 'ಝಾಯದ್ ಮೆಡಲ್' ಅನ್ನು ಘೋಷಿಸಿದರು.

ಸಿಯೋಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿದ ಮೋದಿ, ನಮಾಮಿ ಗಂಗೆಗೆ ಅರ್ಪಣೆಸಿಯೋಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿದ ಮೋದಿ, ನಮಾಮಿ ಗಂಗೆಗೆ ಅರ್ಪಣೆ

ಯುಎಇ ಮತ್ತು ಭಾರತದ ನಡುವೆ ಅತ್ಯುತ್ತಮ ಸಂಬಂಧ ಸೃಷ್ಟಿಸಿದ ಕಾರಣಕ್ಕೆ ಮೋದಿ ಅವರಿಗೆ ಈ ಗೌರವ ನೀಡಲಾಗಿದೆ ಎಂದು ಜಾಯದ್ ಟ್ವೀಟ್ ಮಾಡಿದ್ದಾರೆ.

"ಭಾರತ ಭಾರತದೊಂದಿಗೆ ಐತಿಹಾಸಿಕ ಮತ್ತು ಸಮಗ್ರ ಕಾರ್ಯತಂತ್ರ ಹೊಂದಿದ್ದೇವೆ. ಇದಕ್ಕೆಲ್ಲ ಕಾರಣ ನನ್ನ ಆತ್ಮೀಯ ಸ್ನೇಹಿತರಾದ ಪ್ರಧಾನಿ ನರೇಂದ್ರ ಮೋದಿ. ಈ ಸಂಬಂಧಕ್ಕೆ ಒತ್ತು ನೀಡಿದ್ದು ಅವರು. ಅವರ ಈ ಪ್ರಯತ್ನಕ್ಕಾಗಿ ನಾವು ಅವರಿಗೆ ಯುಎಇಯ ಉನ್ನತ ಗೌರವವನ್ನು ಪ್ರದಾನ ಮಾಡುತ್ತಿದ್ದೇವೆ" ಎಂದು ಅಬುಧಾಬಿಯ ಯುವರಾಜ ಟ್ವೀಟ್ ಮಾಡಿದ್ದಾರೆ.

UAE honours PM Narendra Modi with Zayed Medal, its highest civil honour

ಈ ಪ್ರಶಸ್ತಿಯನ್ನು ಇದಕ್ಕೂ ಮುನ್ನ ರಷ್ಯಾಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾದ ಕ್ಸಿ ಜಿನ್ಪಿಂಗ್, ಕ್ವೀನ್ ಎಲೆಜಬೆತ್ ಮತ್ತು ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲಾಜಿಜ್ ಅಲ್ ಸೌದ್ ಅವರಿಗೆ ನೀಡಲಾಗಿದೆ.

ಮೋದಿಗೆ ಕೊಟ್ಲರ್ ಪ್ರಶಸ್ತಿ, ಪ್ರಧಾನಿಯ ಕಾಲೆಳೆದ ರಾಹುಲ್ ಗಾಂಧಿಮೋದಿಗೆ ಕೊಟ್ಲರ್ ಪ್ರಶಸ್ತಿ, ಪ್ರಧಾನಿಯ ಕಾಲೆಳೆದ ರಾಹುಲ್ ಗಾಂಧಿ

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ದಕ್ಷಿಣ ಕೊರಿಯಾದ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
United Arab Emirates (UAE) President Khalifa bin Zayed bin Sultan Al Nahyan on Thursday honoured Prime Minister Narendra Modi with the Zayed Medal, which is the hingest civil honour of the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X