ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರೇಬಿಯಾ: ಬರಿದಾಗುತ್ತಿದೆಯೇ ಜಗತ್ತಿನ ಅತಿ ದೊಡ್ಡ ತೈಲ ಸಂಪತ್ತು?

|
Google Oneindia Kannada News

ದುಬೈ, ಏಪ್ರಿಲ್ 3: ಒಂದು ಕಾಲದಲ್ಲಿ ಜಗತ್ತಿನ ಅತ್ಯಂತ ದೊಡ್ಡ ತೈಲ ಸಂಪತ್ತಿನ ಮೈದಾನವಾಗಿದ್ದ ಸೌದಿ ಅರೇಬಿಯಾದ ಘವಾರ್ ಊಹೆಗಿಂತಲೂ ಕಡಿಮೆ ಪ್ರಮಾಣದ ತೈಲವನ್ನು ಉತ್ಪಾದಿಸುತ್ತಿದೆ. ಈ ಸಂಪತ್ತು ಅತ್ಯಂತ ವೇಗವಾಗಿ ಕ್ಷೀಣಿಸುತ್ತಿದೆ ಎಂಬುದು ಬಹಿರಂಗವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸೌದಿ ರಾಜಮನೆತನದ ಸಿರಿವಂತಿಕೆಗೆ ಪ್ರಮುಖ ಮೂಲವಾಗಿದ್ದ ಇಲ್ಲಿ ಎಷ್ಟು ಪ್ರಮಾಣದ ತೈಲ ಉತ್ಪಾದನೆಯಾಗುತ್ತದೆ ಎಂಬುದು ಸರ್ಕಾರಿ ರಹಸ್ಯವಾಗಿಯೇ ಉಳಿದಿತ್ತು. ಒಮ್ಮೆ ಅಮೆರಿಕದ ಸೇನಾ ಪಡೆಗಳು ಅದನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಸಂಚು ರೂಪಿಸಿದ್ದವು.

ಚೀನಾದಲ್ಲಿ ಸೌದಿ ಯುವರಾಜ: ಬೃಹತ್ ಪ್ರಮಾಣದ ಹೂಡಿಕೆಗೆ ಒಲವು ಚೀನಾದಲ್ಲಿ ಸೌದಿ ಯುವರಾಜ: ಬೃಹತ್ ಪ್ರಮಾಣದ ಹೂಡಿಕೆಗೆ ಒಲವು

ಸೌದಿಯ ಅಧಿಕೃತ ತೈಲ ಕಂಪೆನಿ ಸೌದಿ ಅರಮ್ಕೊ ರಾಷ್ಟ್ರೀಕೃತಗೊಂಡ ನಂತರ 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲಾಭದ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಇದರ ಮಾಹಿತಿ ಪ್ರಕಾರ ಘವಾರ್‌ನಲ್ಲಿ ದಿನಕ್ಕೆ ಗರಿಷ್ಠ 3.8 ಮಿಲಿಯನ್ ಬ್ಯಾರಲ್ ತೈಲವನ್ನು ಹೊರಕ್ಕೆ ತೆರೆಯುವ ಸಾಮರ್ಥ್ಯವಿದೆ. ಮಾರುಕಟ್ಟೆಯ ಲೆಕ್ಕಾಚಾರ, ಕಲ್ಪನೆಗಳಲ್ಲಿ ಇಲ್ಲಿ 5 ಮಿಲಿಯನ್ ಬ್ಯಾರಲ್ ತೆಗೆಯಲಾಗುತ್ತಿದೆ ಎಂದೇ ಹೇಳಲಾಗುತ್ತಿತ್ತು.

Saudi arabia worlds largest oil field ghawar is fading

ಸೌದಿಯ ಅತ್ಯಂತ ದೊಡ್ಡದಾದ ತೈಲ ಭೂಮಿ ಘವಾರ್‌ನಲ್ಲಿ ಕಡಿಮೆ ಉತ್ಪಾದನಾ ಸಾಮರ್ಥ್ಯ ಇರುವುದು ಆಶ್ಚರ್ಯ ಮೂಡಿಸುತ್ತವಂತಿದೆ ಎಂದು ಸಿಂಗಪುರದ ಎನೆರ್ಜಿ ಆಸ್ಪೆಕ್ಟ್ಸ್ ಲಿಮಿಟೆಡ್‌ನ ಸಲಹೆಗಾರ ವೀರೇಂದ್ರ ಚೌಹಾಣ್ ಹೇಳಿದ್ದಾರೆ.

ಅಮೆರಿಕದ ಅಂಕಿ ಅಂಶಗಳನ್ನು ಒದಗಿಸುವ ಸಂಸ್ಥೆ ದಿ ಎನರ್ಜಿ ಇನ್ಫಾರ್ಮೇಷನ್ ಅಡ್ಮಿನಿಸ್ಟ್ರೇಷನ್ ಘವಾರ್‌ನ ತೈಲ ಉತ್ಪಾದನೆ ಸಾಮರ್ಥ್ಯ ದಿನಕ್ಕೆ 5.8 ಮಿಲಿಯನ್ ಬ್ಯಾರೆಲ್‌ನಷ್ಟಿದೆ ಎಂದು 2017ರಲ್ಲಿ ಹೇಳಿತ್ತು.

ಸೌದಿ ಅರೇಬಿಯಾದಿಂದ ಭಾರತಕ್ಕೆ ಸಿಗಲಿದೆ ಹೆಚ್ಚುವರಿ ತೈಲಸೌದಿ ಅರೇಬಿಯಾದಿಂದ ಭಾರತಕ್ಕೆ ಸಿಗಲಿದೆ ಹೆಚ್ಚುವರಿ ತೈಲ

ಘವಾರ್‌ನಲ್ಲಿ ಸವಕಳಿ ಮತ್ತು ಇತರೆ ಕಾರಣಗಳಿಂದ ಉತ್ಪಾದನೆ ಹೆಚ್ಚಿಸಲು ಸೌದಿ ಅರೇಬಿಯಾ ಹೆಣಗಾಡುತ್ತಿದೆ. ಇಲ್ಲಿ ಉತ್ಪಾದನೆ ಕುಸಿತವಾಗಿದೆ ಎಂದು ಅಮೆರಿಕದ ತೈಲ ತಜ್ಞ ಮ್ಯಾಟ್ ಸಿಮನ್ಸ್ 2004ರಲ್ಲಿ ಪುಸ್ತಕವೊಂದರಲ್ಲಿ ಬರೆದಿದ್ದರು. ಇದಕ್ಕೆ ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೌದಿ ಅರೇಬಿಯಾ, ಘವಾರ್‌ನಲ್ಲಿ ಪ್ರತಿದಿನ 5 ಮಿಲಿಯನ್‌ ಬ್ಯಾರೆಲ್‌ಗಿಂತಲೂ ಹೆಚ್ಚು ಉತ್ಪಾದನೆ ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿತ್ತು.

ಸುಮಾರು 174 ಮೈಲುಗಳಷ್ಟು ದೊಡ್ಡದಾಗಿರುವ ಘವಾರ್, ಒಟ್ಟಾರೆ ರಾಜಮನೆತನ ಉತ್ಪದಿಸುವ ಕಚ್ಚಾ ತೈಲದ ಅರ್ಧಕ್ಕಿಂತಲೂ ಹೆಚ್ಚು ತೈಲ ಉತ್ಪಾದಿಸುತ್ತದೆ ಎನ್ನಲಾಗಿತ್ತು. 1938ರಲ್ಲಿ ದಮ್ಮಮ್‌ನಲ್ಲಿ ಬಾವಿ ಪತ್ತೆಯಾದ ಬಳಿಕ ಸೌದಿಯಲ್ಲಿ ತೈಲ ಉತ್ಪಾದನೆ ಆರಂಭವಾಗಿತ್ತು.

1948ರಲ್ಲಿ ಘವಾರ್‌ನಲ್ಲಿನ ತೈಲ ಸಂಪತ್ತನ್ನು ಅಮೆರಿಕದ ಭೂಶಾಸ್ತ್ರಜ್ಞರೊಬ್ಬರು ಪತ್ತೆಹಚ್ಚಿದ್ದರು. 1951ರಲ್ಲಿ ಪತ್ತೆಯಾದ ಸಫಾನಿಯಾ ಮತ್ತು 1957ರಲ್ಲಿ ಪತ್ತೆಯಾದ ಖುರೈಸ್ ಸೌದಿಯ ಇನ್ನೆರಡು ಪ್ರಮುಖ ತೈಲ ಮೈದಾನಗಳಾಗಿವೆ. ಖುರೈಸ್‌ನಲ್ಲಿ ನಿತ್ಯ 1.45 ಮಿಲಿಯನ್ ಬ್ಯಾರೆಲ್ ತೈಲ ಉತ್ಪಾದನೆಯಾಗುತ್ತಿದೆ. ಸಫಾನಿಯಾದಲ್ಲಿ 1.3 ಮಿಲಿಯನ್ ಬ್ಯಾರೆಲ್ ಉತ್ಪಾದನೆಯಾಗುತ್ತಿದೆ. ಅರಮ್ಕೊ ಒಟ್ಟು 101 ತೈಲ ಗಣಿಗಳನ್ನು ನಿರ್ವಹಿಸುತ್ತಿದೆ.

English summary
Saudi Arabia's official oil company Saudi Aramco published its first profit figure since its nationalization nearly 40 years ago, said that world's largest oil field Ghawar is able to produce maximum of 3.8 million barrels a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X