ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರ ಮೇಲಿನ ಪ್ರಮುಖ ನಿರ್ಬಂಧಗಳನ್ನು ತೆಗೆದುಹಾಕಿದ ಸೌದಿ ಅರೇಬಿಯಾ

|
Google Oneindia Kannada News

ದುಬೈ, ನವೆಂಬರ್ 04: ಸೌದಿ ಅರೇಬಿಯಾವು ವಲಸೆ ಕಾರ್ಮಿಕರ ಮೇಲಿನ ಪ್ರಮುಖ ನಿರ್ಬಂಧಗಳನ್ನು ತೆರೆವುಗೊಳಿಸಿದೆ.

ಆ ನಿರ್ಬಂಧಗಳಿಂದ ವಲಸೆ ಕಾರ್ಮಿಕ ಮೇಲೆ ಶೋಷಣೆಗಳು ಹೆಚ್ಚಾಗಿ ಅವರು ಬದುಕುವುದೇ ಕಷ್ಟವಾಗಿತ್ತು ಹೀಗಿರುವ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ಸುಧಾರಣೆಗಳು ಒಬ್ಬ ಉದ್ಯೋಗದಾತರಿಂದ ಇನ್ನೊಬ್ಬರಿಗೆ ವರ್ಗಾಯಿಸುವ ಮೂಲಕ ಉದ್ಯೋಗವನ್ನು ಬದಲಾಯಿಸುವ ಹಕ್ಕನ್ನು ನೀಡುತ್ತದೆ.

Saudi Arabia To Remove Key Restrictions On Foreign Workers

ದೇಶವನ್ನು ತೊರೆದು ಮತ್ತೆ ಪ್ರವೇಶಿಸಬಹುದು ಮತ್ತು ತಮ್ಮ ಉದ್ಯೋಗದಾತರ ಒಪ್ಪಿಗೆ ಇಲ್ಲದೆ ಅಂತಿಮ ನಿರ್ಗಮನ ವೀಸಾವನ್ನು ಪಡೆದುಕೊಳ್ಳಬಹುದು ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಹೇಳಿದೆ.

ಕಾರ್ಮಿಕ ಸಚಿವಾಲಯದ ಹೊಸ ಉಪಕ್ರಮವು ಮಾರ್ಚ್ 2021ರಿಂದ ಜಾರಿಗೆ ಬರಲಿದೆ ಎಂದು ಉಪಮಂತ್ರಿ ಅಬ್ದುಲ್ಲಾ ಬಿನ್ ನಾಸರ್ ಅಬುತ್ನೈನ್ ಹೇಳಿದ್ದಾರೆ.

ಇದು ಸೌದಿ ಅರೇಬಿಯಾದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಅಥವಾ ರಾಜ್ಯದಲ್ಲಿ ಸುಮಾರು 10 ಮಿಲಿಯನ್ ವಿದೇಶಿ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ.

ಕಾರ್ಮಿಕ ಕಾನೂನಿನ ಇತ್ತೀಚಿನ ಬದಲಾವಣೆಗಳು ದಾಸಿಯರು ಮತ್ತು ಗೃಹ ದಾದಿಯರಂತಹ ಗೃಹ ಕಾರ್ಮಿಕರು ಸೇರಿದಂತೆ ಎಲ್ಲಾ ವಲಸೆ ಕಾರ್ಮಿಕರಿಗೆ ಅನ್ವಯವಾಗುತ್ತದೆಯೇ ಎಂದು ನೋಡಬೇಕಾಗಿದೆ.

English summary
Saudi Arabia on Wednesday announced reforms that will abolish some key restrictions tying millions of low-paid and vulnerable migrant workers to their employers in conditions that have been rife with abuse and exploitation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X