ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಪುರುಷರು ಈ ನಾಲ್ಕು ದೇಶಗಳ ಮಹಿಳೆಯನ್ನು ಮದುವೆಯಾಗುವಂತಿಲ್ಲ!

|
Google Oneindia Kannada News

ರಿಯಾದ್, ಮಾರ್ಚ್ 20: ಸೌದಿ ಅರೇಬಿಯಾವು ಪಾಕಿಸ್ತಾನ ಸೇರಿದಂತೆ ನಾಲ್ಕು ದೇಶಗಳ ಮಹಿಳೆಯರನ್ನು ಮದುವೆಯಾಗದಂತೆ ತನ್ನ ದೇಶದ ಪುರುಷರಿಗೆ ನಿರ್ಬಂಧ ವಿಧಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಮತ್ತು ಮಯನ್ಮಾರ್ ದೇಶಗಳಿಗೆ ಸೇರಿದ ಮಹಿಳೆಯರನ್ನು ಮದುವೆಯಾಗುವಂತಿಲ್ಲ ಎಂದು ಸೌದಿ ಆದೇಶ ಹೊರಡಿಸಿರುವುದಾಗಿ ಪಾಕಿಸ್ತಾನದ 'ಡಾನ್' ಪತ್ರಿಕೆ ವರದಿ ಮಾಡಿದೆ.

ಅನಧಿಕೃತ ಲೆಕ್ಕಾಚಾರದ ಪ್ರಕಾರ ಸೌದಿ ಅರೇಬಿಯಾದಲ್ಲಿ ಈ ನಾಲ್ಕು ದೇಶಗಳ ಸುಮಾರು 5 ಲಕ್ಷ ಮಹಿಳೆಯರು ಇದ್ದಾರೆ. ವಿದೇಶಿ ಮಹಿಳೆಯರನ್ನು ಮದುವೆಯಾಗಲು ಇಚ್ಛಿಸುವ ಸೌದಿಯ ಪುರುಷರು ಇನ್ನು ಮುಂದೆ ಕಠಿಣ ನಿಯಂತ್ರಣ ನಿಯಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮಕ್ಕಾ ಪೊಲೀಸ್ ನಿರ್ದೇಶಕ ಮೇಜರ್ ಜನರಲ್ ಅಸ್ಸಾಫ್ ಅಲ್ ಖುರೇಷಿ ಹೇಳಿರುವುದಾಗಿ ಪತ್ರಿಕೆ ತಿಳಿಸಿದೆ.

ವಿದೇಶಿಗರನ್ನು ಮದುವೆಯಾಗದಂತೆ ಸೌದಿ ಪುರುಷರನ್ನು ನಿಯಂತ್ರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿದೇಶಿಗರ ಜತೆಗಿನ ವಿವಾಹಕ್ಕೆ ಪೂರ್ವಾನುಮತಿ ಪಡೆಯುವ ವಿವಿಧ ಹೆಚ್ಚುವರಿ ನಿಯಮಗಳನ್ನು ಜಾರಿಗೊಳಿಸಲಾಗಿದೆ.

Saudi Arabia Prohibits Men From Marrying Women From 4 Nations Including Pakistan

ವಿದೇಶಿ ಮಹಿಳೆಯನ್ನು ಮದುವೆಯಾಗಲು ಮೊದಲು ಸರ್ಕಾರದಿಂದ ಅನುಮತಿಗೆ ಮನವಿ ಸಲ್ಲಿಸಬೇಕು. ಅಧಿಕೃತ ಮಾರ್ಗದ ಮೂಲಕ ಮದುವೆ ಅರ್ಜಿಗಳನ್ನು ಸಲ್ಲಿಸಬೇಕು. ವಿಚ್ಚೇದನ ಪಡೆದು ಆರು ತಿಂಗಳ ಒಳಗೆ ಮರು ಮದುವೆಗೆ ಪುರುಷರು ಅರ್ಜಿ ಸಲ್ಲಿಸುವಂತಿಲ್ಲ.

ಅರ್ಜಿದಾರರು 25 ವರ್ಷ ಮೀರಿರಬೇಕು ಮತ್ತು ಸ್ಥಳೀಯ ಜಿಲ್ಲಾ ಮೇಯರ್‌ನ ಸಹಿಯುಳ್ಳ ಗುರುತಿನ ದಾಖಲೆಗಳು, ಕುಟುಂಬದ ಕಾರ್ಡ್ ಪ್ರತಿ ಸೇರಿದಂತೆ ಇತರೆ ಗುರುತಿನ ದಾಖಲೆಗಳನ್ನು ಒದಗಿಸಬೇಕು. ಒಂದು ವೇಳೆ ಅರ್ಜಿದಾರರು ಈಗಾಗಲೇ ಮದುವೆಯಾಗಿದ್ದರೆ, ತನ್ನ ಪತ್ನಿ ಅಂಗವಿಕಲೆ, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದಾಳೆ ಅಥವಾ ಬಂಜೆ ಎಂದು ಸಾಬೀತುಪಡಿಸುವ ವರದಿಯನ್ನು ಆಸ್ಪತ್ರೆಯಿಂದ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

English summary
Saudi Arabia has prohibited its men from marrying women from Pakistan, Chad, Bangladesh and Myanmar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X