ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಷ್ಠಿಯುದ್ಧದಲ್ಲಿ ಖಶೋಗಿ ಹತರಾದರು: ಸೌದಿ ಅರೆಬಿಯಾ

|
Google Oneindia Kannada News

ದುಬೈ, ಅಕ್ಟೋಬರ್ 20: ಸೌದಿ ರಾಯಭಾರ ಕಚೇರಿಯಲ್ಲಿ ನಿಗೂಢವಾಗಿ ನಾಪತ್ತೆಯಾದ ಪತ್ರಕರ್ತ ಜಮಲ್ ಖಶೋಗಿ ಅವರು ಇಸ್ತಾಂಬುಲ್ ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ನಡೆದ ಮುಷ್ಠಿ ಕಾಳಗದಲ್ಲಿ ಮೃತರಾಗಿದ್ದಾರೆಂದು ಸೌದಿ ಅರೆಬಿಯಾ ಒಪ್ಪಿಕೊಂಡಿದೆ.

ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ! ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!

ನ್ಯೂಯಾರ್ಕ್ ಟೈಮ್ಸ್ ನ ಪತ್ರಕರ್ತರಾಗಿದ್ದ ಜಮಲ್ ಖಶೋಗಿ ಅವರು ಟರ್ಕಿಯ ಇಸ್ತಾಂಬುಲ್ ನಲ್ಲಿರುವ ಸೌದಿ ಅರೆಬಿಯಾ ರಾಯಭಾರ ಕಚೇರಿಗೆ ತೆರಳಿ ತಮ್ಮ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ತೆರಳಿದ್ದರು. ಆದರೆ ಕಚೇರಿಗೆ ತೆರಳಿದ ಅವರು ಎರಡು ವಾರವಾದರೂ ಪತ್ತೆಯಾಗಿರಲಿಲ್ಲ. ಸೌದಿ ಅರೇಬಿಯಾ ರಾಜನ ವಿರುದ್ಧ ನಿರಂತರವಾಗಿ ವಿವಾದಾತ್ಮಕ ಬರಹಗಳನ್ನು ಬರೆಯುತ್ತಿದ್ದ ಖಶೋಗಿ ಅವರನ್ನು ಸೌದಿಯ ಪ್ರಭಾವೀ ವ್ಯಕ್ತಿಗಳೇ ಸಾಯಿಸಿದ್ದಾರೆ ಎಂದು ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು.

ಸೌದಿ ಪತ್ರಕರ್ತನ ನಾಪತ್ತೆಯ ರಹಸ್ಯ ಭೇದಿಸೀತೇ ಒಂದು ವಾಚ್?ಸೌದಿ ಪತ್ರಕರ್ತನ ನಾಪತ್ತೆಯ ರಹಸ್ಯ ಭೇದಿಸೀತೇ ಒಂದು ವಾಚ್?

Saudi Arabia admits journalist Jamal Khashoggi killed by fist fight

ಆದರೆ ಖಶೋಗಿಯವರು ರಾಯಭಾರ ಕಚೇರಿಯಿಂದ ಸುರಕ್ಷಿತವಾಗಿ ಆಚೆ ಹೋಗಿದ್ದರು ಎಂದು ಹೇಳುವ ಮೂಲಕ ಸೌದಿ ಅರೆಬಿಯಾ ವ್ಯತಿರಿಕ್ತ ಹೇಳಿಕೆ ನೀಡಿತ್ತು. ಇದೀಗ ತನ್ನ ನಿಲುವನ್ನು ಬದಲಿಸಿ, ಇಸ್ತಾಂಬುಲ್ ನಲ್ಲಿರುವ ರಾಯಭಾರ ಕಚೇರಿಯಲ್ಲಿಯೇ ಖಶೋಗಿ ಅವರು ಮೃತರಾಗಿದ್ದಾರೆ ಎಂದು ಸೌದಿ ಅರೇಬಿಯಾ ಹೇಳಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹೇಳಿಕೆ ಸಂಚಲನ ಮೂಡಿಸಿದೆ.

English summary
Saudi Arabia on Saturday admitted that critic Jamal Khashoggi was killed inside its consulate in Istanbul, more than two weeks after his disappearance tipped the kingdom into one of its worst international crises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X