ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್ ಗಳಲ್ಲಿ ಲೈಂಗಿಕ ಗುಲಾಮಗಿರಿ ಇದೆ ಎಂದು ಒಪ್ಪಿಕೊಂಡ ಪೋಪ್

|
Google Oneindia Kannada News

ದುಬೈ, ಫೆಬ್ರವರಿ 06: ಚರ್ಚ್‌ಗಳಲ್ಲಿ ನನ್‌ (ಕ್ರೈಸ್ತ ಸನ್ಯಾಸಿನಿ)ಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ಕ್ಯಾಥೊಲಿಕ್‌ ಚರ್ಚ್‌ಗಳ ಮುಖ್ಯಸ್ಥ ಎಂದೇ ಕರೆಯಲಾಗುವ ಪೋಪ್‌ ಫ್ರಾನ್ಸಿಸ್‌ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.

ಅರಬ್‌ ದೇಶಗಳಿಗೆ ಭೇಟಿ ನೀಡಿದ್ದ ಪೋಪ್‌, ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ನನ್‌ಗಳು ಮುಂಚಿನಿಂದಲೂ ಪಾದ್ರಿಗಳು, ಬಿಷಪ್‌ಗಳಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ, ಅದೂ ಈಗಲೂ ಮುಂದುವರೆದಿದೆ ಎಂದು ಹೇಳಿದ್ದಾರೆ.

ನನ್‌ಗಳನ್ನು ಲೈಂಗಿಕ ಗುಲಾಮರನ್ನಾಗಿಯೂ ಮಾಡಿಕೊಳ್ಳಲಾಗಿದೆ ಎಂದಿರುವ ಅವರು, ಕ್ಯಾಥೊಲಿಕ್ ಚರ್ಚ್‌ಗೆ ಈ ಬಗ್ಗೆ ಮಾಹಿತಿ ಇದ್ದು, ನಾವು ಈ ಕೆಟ್ಟ ವ್ಯವಸ್ಥೆಯನ್ನು ಬದಲಾಯಿಸುವ ಹಾದಿಯಲ್ಲಿದ್ದೇವೆ ಎಂದು ಪೋಪ್‌ ಅವರು ಹೇಳಿದ್ದಾರೆ.

Pope Francis has admits that sexual abuse of nuns happen in churches

ಈ ಸಮಸ್ಯೆಯು ಮುಂಚಿನಿಂದ ಇದೆ, ಕೆಲವು ಪ್ರಾರ್ಥನಾ ಮಂದಿರಗಳಲ್ಲಿ (ಚರ್ಚ್‌), ಕೆಲವು ಪ್ರದೇಶದ ಚರ್ಚ್‌ಗಳಲ್ಲಿ, ಹೊಸದಾಗಿ ಆಗಿರುವ ಚರ್ಚ್‌ಗಳಲ್ಲಿ ಹೆಚ್ಚು ಕಂಡು ಬರುತ್ತಿದೆ ಎಂದು ಪೋಪ್ ಪ್ರಾನ್ಸಿಸ್‌ ಹೇಳಿದರು.

ನನ್‌ಗಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಆಗಾಗ್ಗೆ ಅಲ್ಲಲ್ಲಿ ವರದಿಗಳು ಕೇಳಿಬರುತ್ತಲೇ ಇದ್ದವು. ಇತ್ತೀಚೆಗಷ್ಟೆ ನೆರೆಯ ಕೇರಳದಲ್ಲಿ ಫ್ರಾನ್ಸಿಸ್ ಮುಲಕ್ಕಲ್ ವಿರುದ್ಧ ಕೆಲವು ನನ್‌ಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರು. ಅದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.

ಬೆಂಗಳೂರಿನಲ್ಲಿ ಮಹಿಳೆ ಮೇಲೆ ಬಿಷಪ್ ಮತ್ತು ಪಾದ್ರಿಯಿಂದ ಲೈಂಗಿಕ ದೌರ್ಜನ್ಯಬೆಂಗಳೂರಿನಲ್ಲಿ ಮಹಿಳೆ ಮೇಲೆ ಬಿಷಪ್ ಮತ್ತು ಪಾದ್ರಿಯಿಂದ ಲೈಂಗಿಕ ದೌರ್ಜನ್ಯ

ಬೆಂಗಳೂರಿನಲ್ಲಿ ಕಳೆದ ಶನಿವಾರವಷ್ಟೆ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ದೌರ್ಜನ್ಯಕ್ಕೊಳಗಾದ 27 ವರ್ಷದ ಮಹಿಳೆ, ಆರು ವರ್ಷಗಳ ಹಿಂದೆ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕೆಂದು ಹೋಲಿ ಟ್ರಿನಿಟಿ ಚರ್ಚ್ ಬಿಷಪ್ ಮತ್ತು ಪಾದ್ರಿ ಮಾಡುತ್ತಿದ್ದ ಒತ್ತಡವನ್ನು ಸಹಿಸಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಳು.

ಕೇರಳದ ಸನ್ಯಾಸಿನಿಯ ವಿರುದ್ಧವೇ ತಿರುಗಿದ ಅತ್ಯಾಚಾರ ಪ್ರಕರಣಕೇರಳದ ಸನ್ಯಾಸಿನಿಯ ವಿರುದ್ಧವೇ ತಿರುಗಿದ ಅತ್ಯಾಚಾರ ಪ್ರಕರಣ

English summary
Pope Francis has admit that sexual abuse nuns happen largely in Church. He said Nuns has been used as sex slaves. We are in the path of changing this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X