• search
  • Live TV
ದುಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಿವಾಸಿ ಭಾರತೀಯರೆಲ್ಲರೂ ಶ್ರೀಮಂತರಲ್ಲ: ಪ್ರವೀಣ್ ಶೆಟ್ಟಿ ವಕ್ವಾಡಿ

By ರೋನ್ಸ್ ಬಂಟ್ವಾಳ್
|

ದುಬಾಯಿ (ಅಲ್ ನಾಸರ್), ನ.29: ಯುಎಇನಲ್ಲಿ ನೆಲೆಯಾದ ಕರ್ನಾಟಕದಲ್ಲಿನ ಯಾವುದೇ ಜನರ ಸ್ಪಂದನೆಗೆ ಕೆಎನ್ಆರ್ಐ ಸಂಸ್ಥೆ ತ್ವರಿತವಾಗಿ ಸ್ಪಂದಿಸಿ ಮಾನವೀಯತೆ ಮೆರೆದಿದೆ ಎಂದು ದುಬಾಯಿಯ ಪ್ರತಿಷ್ಠಿತ ಉದ್ಯಮಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದರು.

ಕರ್ನಾಟಕ ಉದ್ಯಮಿಗಳ ಸಾಗರೋತ್ತರ ಸಂಸ್ಥೆಯಲ್ಲೊಂದಾದ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ (ಕೆಎನ್ಆರ್ಐ) ದುಬಾಯಿಯ ಫರ್ಚುನ್ ಪ್ಲಾಜ್ಹಾ ಹೊಟೇಲು ಸಭಾಗೃಹದಲ್ಲಿ ಆಯೋಜಿಸಿದ್ದ ಕರ್ನಾಟಕ ಮಂತ್ರಿಗಳೊಂದಿಗೆ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದೇಶದಲ್ಲಿನ ಅಥವಾ ಈ ರಾಷ್ಟ್ರದ ಕಾನೂನುಗಳನ್ನು ಪಾಲಿಸುತ್ತಾ ವೀಸಾ ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದೇವೆ. ಕರ್ನಾಟಕ ರಾಜ್ಯ ಅಥವಾ ಕೇಂದ್ರ ಸರಕಾರಗಳು ನಮ್ಮನ್ನು ಪ್ರೋತ್ಸಾಹಿಸಿದರೆ ಮತ್ತಷ್ಟು ಸುಲಭವಾಗಿ ಸೇವೆ ಸಲ್ಲಿಸಲು ಅನುಕೂಲಕರ ಆಗಬಲ್ಲದು. ಕಾರಣ ಅನಿವಾಸಿ ಭಾರತೀಯರೆಲ್ಲರೂ ಶ್ರೀಮಂತರಲ್ಲ ಎಂದರು.

ಕೊಡಗಿಗೆ ದೇಣಿಗೆ ನೀಡಿ ಹೃದಯವಂತಿಕೆ ಮೆರೆದ ಕತಾರ್ ಭಾರತೀಯರು

ವೀಸಾ, ಸಂಬಳ, ಉದ್ಯೋಗದಲ್ಲಿನ ಸಮಸ್ಯೆ, ಹೊಸ ಉದ್ಯಮಕ್ಕೆ ಅವಕಾಶ, ವಿಮಾನ ಯಾನ ದರದಲ್ಲಿನ ತಾರತಮ್ಯತೆ, ಕರ್ನಾಟಕದ ಕೆಲವೊಂದು ಕಡೆ ನೇರ ವಿಮಾನ ಸಂಚಾರ ಇತ್ಯಾದಿ ಸಮಸ್ಯೆಗಳು ಕಾಡುತ್ತಿವೆ. ನಾವು ನಮ್ಮ ಸದಸ್ಯರಿಗೆ ಇದೀಗಲೇ ಕೆಎನ್ ಆರ್‍ಐ ಕಾರ್ಡ್ ಗಳನ್ನು ನೀಡಿದ್ದೇವೆ. ನಾವು ತವರೂರಲ್ಲಿ ಮತ್ತೆ ನಿವೃತ್ತಿ ಜೀವನ ಸಾಗಿಸುವಾಗ ಇರಲಿ, ಆ ಮುನ್ನವಾಗಲಿ ನಮಗೆ ವಾಸ್ತವ್ಯಕ್ಕಾಗಿ ಮನೆ ಕಟ್ಟುವಾಗ ಅಧಿಕಾರಿಗಳ ಸಹಯೋಗ, ಶೀಘ್ರವಾಗಿ ದಾಖಲೆಪತ್ರಗಳ ವಿಲೇವರಿ, ವಿಮಾ ಯೋಜನೆ, ಎಲ್ಲದಕ್ಕೂ ಮುನ್ನ ಎನ್‍ಆರ್‍ಐಗಳಿಗೆ ಮತದಾನ ಹಕ್ಕು ಚಲಾವಣೆ ಅವಕಾಶ, ಪ್ರತಿಯೊಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎನ್‍ಆರ್‍ಐ ಕಛೇರಿ, ಉನ್ನಧಿಕಾರಿಗಳ ನೇಮಕಾತಿ ಬಗ್ಗೆ ಜ್ವಲಂತ ಉದಾಹರಣೆಗಳೊಂದಿಗೆ ಸಚಿವರಿಗೆ ತಿಳಿಸಿದರು.

 ಸಚಿವರಿಗೆ ಮನವಿ

ಸಚಿವರಿಗೆ ಮನವಿ

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ , ಹಾಲಿ ಸಂಸದ ಡಾ.ಎಂ.ವೀರಪ್ಪ ಮೊಯಿಲಿ, ಕರ್ನಾಟಕದ ನಗರಾಭಿವೃದ್ಧಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ಯು.ಟಿ ಖಾದರ್, ಕರ್ನಾಟಕದ ಮಹಿಳಾ-ಮಕ್ಕಳ ಕಲ್ಯಾಣ, ಕನ್ನಡ-ಸಂಸ್ಕೃತಿ ಖಾತೆ, ಉಡುಪಿ ಜಿಲ್ಲಾ ಉಸ್ತುವರಿ ಸಚಿವೆ ಡಾ. ಜಯಮಾಲ ಉಪಸ್ಥಿತರಿದ್ದು, ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಸಚಿವರಿಗೆ ಮನವಿ ಅರ್ಪಿಸಿ ಸಮಸ್ಯೆಗಳ ಪರಿಹಾರಕ್ಕೆ ಕೋರಿದರು.

ವಾವ್, ವಾಟ್ ಅ ಗ್ರೇಟ್ ಹಾಲಿವುಡ್ ಟೈಪ್ ಮೂವಿ ಟ್ರೈಲರ್ ಮ್ಯಾನ್

 ಯುವ ಪೀಳಿಗೆಗೆ ಮಾದರಿ

ಯುವ ಪೀಳಿಗೆಗೆ ಮಾದರಿ

ವೀರಪ್ಪ ಮೊಯಿಲಿ ಮಾತನಾಡಿ, ವಿದೇಶಿಗರಿಗೆ ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರಗಳ ಅವಶ್ಯಕತೆಗಳಿದ್ದು ಇವೆರಡೂ ಸರಕಾರಗಳ ಕರ್ತವ್ಯಗಳೇ ವಿಭಿನ್ನವಾಗಿವೆ. ಎನ್‍ಆರ್‍ಐಗಳಿಗೆ ಕೇಂದ್ರ ವಿದೇಶಾಂಗದ ಸಹಯೋಗ ಅತ್ಯವಶ್ಯವಾಗಿರುತ್ತದೆ. ತಮ್ಮ ಸಮಸ್ಯೆಗಳಿಗೆ ಸಿಂಗಲ್‍ ವಿಂಡೋ ಪರಿಹಾರಕ್ಕೆ ಶೀಘ್ರವೇ ವ್ಯವಸ್ಥೆ ಮಾಡಿಸುವೆ.

ತಮ್ಮತಂಹ ಪರಿಶ್ರಮಜೀವಿಗಳಿಂದ ನಮ್ಮನಾಡು ಪ್ರಗತಿ ಕಂಡಿದೆ. ಕರ್ನಾಟಕವು ಉದ್ಯಮಕ್ಕೆ ಸ್ವಂದಿಸುವ ಪ್ರಥಮ ರಾಜ್ಯವಾಗಿ ಅನುಕೂಲಕರ ವಾತಾವರಣ ನಿರ್ಮಿಸಿದೆ. ಆದ್ದರಿಂದ ಅನಿವಾಸಿ ಭಾರತೀಯರು ತವರೂರಲ್ಲೂ ಉದ್ಯಮ ಕಟ್ಟಿ ಬೆಳೆಸಬೇಕು.

ಪ್ರವೀಣ್ ಕುಮಾರ್ ಶೆಟ್ಟಿ ಓರ್ವ ಸಾಧನಾಶೀಲ ಯುವ ಉದ್ಯಮಿಯಾಗಿದ್ದು ಯುವ ಪೀಳಿಗೆಗೆ ಮಾದರಿ ಉದ್ಯಮಿ ಆಗಿದ್ದಾರೆ ಎಂದರು.

ನಿಜವಾದ ಕನ್ನಡ ಪ್ರೇಮಿ ಯಾರು, ಎನ್ನಾರೈ ಕನ್ನಡಿಗನ ಅನುಭವಾಮೃತ

 ಪರಿಹಾರ ನೀಡಲು ಪ್ರಯತ್ನಿಸುತ್ತೇವೆ

ಪರಿಹಾರ ನೀಡಲು ಪ್ರಯತ್ನಿಸುತ್ತೇವೆ

ಸಚಿವ ಖಾದರ್ ಮಾತನಾಡಿ ನಮ್ಮದು ಎನ್‍ಆರ್‍ಐ ಸರಕಾರವಲ್ಲ. ಆದರೆ ವ್ಯಾಪಿಗೆ ಒಳಪಡುವ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಿದ್ದೇವೆ. ಸಮಸ್ಯೆಗಳು ಎಲ್ಲರನ್ನೂ ಕಾಡುತ್ತವೆ. ಅದನ್ನು ಒಗ್ಗಟ್ಟಿನಿಂದ ಪರಿಹರಿಸಿಕೊಳ್ಳಬೇಕು. ತಾವೆಲ್ಲರೂ ಮಾನವೀಯ ದೃಷ್ಟಿಯಿಂದ ಸ್ಪಂದಿಸಿ ಸಹಯೋಗ ನೀಡುತ್ತಿರುವುದು ಶ್ಲಾಘನೀಯ.

ಮತ್ತೊಂದು ಸರಕಾರಗಳ ಸ್ಪಂದನೆ ಬಗ್ಗೆ ನಾವೇನನ್ನೂ ಹೇಳಕ್ಕಾಗಲ್ಲ. ಆದರೆ ಮುಂದೆ ತಮ್ಮ ಯೋಗದಾನಕ್ಕೆ ಶಕ್ತಿ ತುಂಬುವ ಕೆಲಸ ಕರ್ನಾಟಕ ಸರಕಾರದಿಂದ ಮಾಡುವ ಪ್ರಯತ್ನ ಮಾಡುವೆ ಎಂದರು.

ಮತದಾನದ ಹಕ್ಕಿನ ಬಗ್ಗೆ ಚರ್ಚಿಸುವೆ

ಮತದಾನದ ಹಕ್ಕಿನ ಬಗ್ಗೆ ಚರ್ಚಿಸುವೆ

ಸರಕಾರ ಎಲ್ಲರ ಸಮಸ್ಯೆಗಳನ್ನು ಅರ್ಥೈಸಿ ಅನುದಾನ ನೀಡುತ್ತದೆ. ಮುಂದಿನ ಪೀಳಿಗೆಗೆ ಮಾದರಿ ಆಗುವ ಮತ್ತು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವುದನ್ನೇ ನಮ್ಮ ಸರಕಾರ ಅಪೇಕ್ಷಿಸುತ್ತದೆ. ಆದರೆ ಎನ್‍ಆರ್‍ಐ ಮತ್ತು ನಮ್ಮ ಸರಕಾರದ ಮಧ್ಯೆ ಏನೋ ಸ್ಪಂದನಾ ವ್ಯತ್ಯಯ ಆಗಿರಬಹುದು. ವಿದೇಶದಲ್ಲಿನ ನಮ್ಮವರೆಲ್ಲರೂ ಶ್ರೀಮಂತರೆನ್ನುವ ಮನೋಭಾವ ಸಾಮಾನ್ಯವಾದುದು.

ಆದರೆ ನಿಮ್ಮೆಲ್ಲರ ಕಷ್ಟಪಾಡು, ಅವಿರತ ಶ್ರಮದ ಬದುಕು ನಾವು ಅರಿತಿದ್ದೇವೆ. ನಿಮ್ಮ ಬೇಡಿಕೆಯಂತೆ ಮತದಾನದ ಹಕ್ಕು ಬಗ್ಗೆ ಮತ್ತೆ ಚರ್ಚಿಸುವೆ. ಮತದಾನ ಮಾಡದ ಮನುಷ್ಯನ ಬದುಕು ಸಾರ್ಥಕವಲ್ಲ ಎಂದು ಸಚಿವೆ ಜಯಮಾಲ ತಿಳಿಸಿದರು.

 ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯ

ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯ

ಈ ಸಂದರ್ಭದಲ್ಲಿ ಫೋರಂನ ಉಪಾಧ್ಯಕ್ಷ ಜೋಸೆಫ್ ಮಥಾಯಸ್, ಬಿ.ಕೆ ಗಣೇಶ್ ರೈ, ಡಾ. ಕಾಪು ಮಹ್ಮದ್, ಜೊತೆ ಕೋಶಾಧಿಕಾರಿ ದಯಾ ಕಿರೋಡಿಯನ್, ಜೊತೆ ಕಾರ್ಯದರ್ಶಿ ಎಂ.ಇ ಮುಳೂರು, ನೋವೆಲ್ ಅಲ್ಮೇಡಾ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಲತೀಫ್ ಮೂಲ್ಕಿ, ಮಲ್ಲಿಕಾರ್ಜುನ್ ಗೌಡ, ಮಹ್ಮದ್ ಆಲಿ ಉಚ್ಚಿಲ್, ಪ್ರಶಾಂತ್ ಆಚಾರ್ಯ ಸೇರಿದಂತೆ ಹಲವಾರು ಸದಸ್ಯರು, ಅಖಿಲಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಡಾ. ಯು.ಟಿ ಇಫ್ತಿಕರ್ ಆಲಿ, ನಾರಾಯಣ ದೇವಾಡಿಗ ಕಾಪು (ದುಬಾಯಿ), ಸತೀಶ್ ಶೆಟ್ಟಿ ಪಟ್ಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಉಭಯ ರಾಷ್ಟ್ರಗಳ ರಾಷ್ಟ್ರಗೀತೆಯೊಂದಿಗೆ ಸಭೆ ಆದಿಗೊಂಡಿತು. ಜೊತೆ ಕಾರ್ಯದರ್ಶಿ ಶಶಿಧರ್ ನಾಗರಾಜಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಬಾಕರ್ ಅಂಬಲತರೆ ಪ್ರಸ್ತಾವಿಕವಾಗಿ ನುಡಿದು ಸದಸ್ಯರ ಸ್ಪಂದನೆ ಹಾಗೂ ಇಲ್ಲಿನ ಕನ್ನಡಿಗರು ಪಡುವ ಶ್ರಮದ ಬಗ್ಗೆ ವಿವರಿಸಿದರು. ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸದನ್ ದಾಸ್ ವಂದಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dubai Businessman Praveen shetty Said that All Non-resident Indians are not rich. He Said in Karnataka NRI Forum Meeting with Karnataka Ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more