ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಒಂದು ವರ್ಷದ ಮಗು ಗೆದ್ದಿತು 7 ಕೋಟಿ ರೂ. ಲಾಟರಿ

|
Google Oneindia Kannada News

ದುಬೈ, ಫೆಬ್ರವರಿ 07: ಕೇರಳದ ಒಂದು ವರ್ಷದ ಮಗು ಬರೋಬ್ಬರಿ 7 ಕೋಟಿ ರೂಪಾಯಿ ಗೆದ್ದಿದೆ. ಇನ್ನೂ ಮಾತನಾಡಲು, ನಡೆಯಲು ಬಾರದ ಮಗು ಈಗ ಏಳು ಕೋಟಿ ಹಣದ ಒಡೆಯ.

ಕೇರಳ ಮೂಲದ ರಮೀಸ್‌ ರಹಮಾನ್ ತಮ್ಮ ಒಂದು ವರ್ಷದ ಮಗ ಮೊಹಮ್ಮದ್ ಸಲಾಹ್ ಹೆಸರಿನಲ್ಲಿ ದುಬೈ ನಲ್ಲಿ ಲಾಟರಿ ಖರೀದಿಸಿದ್ದರು. ಅವರು ಖರೀದಿಸಿದ್ದ 1319 ಲಾಟರಿ ಟಿಕೆಟ್‌ಗೆ ಜಾಕ್‌ಪಾಟ್ ಹೊಡೆದಿದೆ. ಬರೋಬ್ಬರಿ ಏಳು ಕೋಟಿ ರೂಪಾಯಿ ರಮೀಸ್ ರಹಾಮಾನ್‌ ಖಾತೆಗೆ ಜಮಾ ಆಗಲಿದೆ.

ಒಂದಂಕಿ ಲಾಟರಿ: ನಡೆಯದ ಪ್ರಕರಣಕ್ಕೆ ಕೇಸು ದಾಖಲಿಸಿದ್ದ ಪೊಲೀಸರು!ಒಂದಂಕಿ ಲಾಟರಿ: ನಡೆಯದ ಪ್ರಕರಣಕ್ಕೆ ಕೇಸು ದಾಖಲಿಸಿದ್ದ ಪೊಲೀಸರು!

ರಮೀಸ್ ರಹಮಾನ್ ದುಬೈ ನ ಸಂಸ್ಥೆಯೊಂದರಲ್ಲಿ ಅಕೌಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ವರ್ಷದ ಹಿಂದೆ ಗಂಡು ಮಗುವಾಗಿತ್ತು. ಮಗುವಿನ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ದುಬೈ ಡ್ಯುಟಿ ಫ್ರೀ ಲಾಟರಿ ಟಿಕೆಟ್ ಖರೀದಿಸಿದ್ದರು.

Keralas One Year Boy Wins Seven Crore Rs Lottery

ಲಾಟರಿ ಹೊಡೆದಿರುವ ಬಗ್ಗೆ ಮಾತನಾಡಿರುವ ರಮೀಸ್‌ ರಹಮಾನ್, 'ಬಹಳವೇ ಸಂತೋಶವಾಗಿದೆ. ನನ್ನ ಮಗನ ಭವಿಷ್ಯ ಭದ್ರವಾಗಿದೆ. ದುಬೈ ಡ್ಯೂಟಿ ಫ್ರೀ ಲಾಟರಿಗೆ ಧನ್ಯವಾದ' ಎಂದಿದ್ದಾರೆ. ಗೆದ್ದ ಹಣವನ್ನು ಮಗನ ಭವಿಷ್ಯ ಭದ್ರಗೊಳಿಸಲು ಅವರು ಬಳಸುತ್ತಾರಂತೆ.

''ಲಾಟರಿ ನಿಷೇಧದಿಂದ ಬೀದಿಗೆ ಬಿದ್ದ 19 ಲಕ್ಷ ಮಂದಿಗೆ ನೆರವಾಗಿ''ಲಾಟರಿ ನಿಷೇಧದಿಂದ ಬೀದಿಗೆ ಬಿದ್ದ 19 ಲಕ್ಷ ಮಂದಿಗೆ ನೆರವಾಗಿ"

ದುಬೈ ನಲ್ಲಿ ಹಲವು ರೀತಿಯ ಲಾಟರಿಗಳು ನಡೆಯುತ್ತದೆ. ಈ ಲಾಟರಿಗಳಲ್ಲಿ ಭಾರತೀಯರು ಹಲವು ಬಾರಿ ಗೆದ್ದಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಭಾರತದಿಂದ ಕೆಲಸ ಹುಡುಕಲು ದುಬೈ ಗೆ ಹೋಗಿದ್ದ ರೈತನೊಬ್ಬನಿಗೆ 5 ಕೋಟಿ ಲಾಟರಿ ಹೊಡೆದಿತ್ತು.

English summary
Kerala's one year baby boy wins 7 crore rs lottery in Dubai. Boy's father Rehman purchased lottery jackpot hit to that lottery number 1319.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X