ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರೇಬಿಯಾದಲ್ಲಿ 'ಸಾರ್ವಜನಿಕ ಸಭ್ಯತೆ' ಮೀರಿದರೆ ದಂಡ

|
Google Oneindia Kannada News

ರಿಯಾದ್ (ಸೌದಿ ಅರೇಬಿಯಾ), ಸೆಪ್ಟೆಂಬರ್ 29: 'ಸಾರ್ವಜನಿಕ ಸಭ್ಯತೆ' ಮೀರಿದರೆ ದಂಡ ವಿಧಿಸುವುದಾಗಿ ಸೌದಿ ಅರೇಬಿಯಾ ಶನಿವಾರ ಘೋಷಿಸಿದೆ. ಸಾರ್ವಜನಿಕವಾಗಿ ಪ್ರೀತಿ ತೋರಿಸುವುದಕ್ಕೆ, ಗೌರವಯುತವಾಗಿ ದಿರಿಸು ಧರಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ. ವಿದೇಶಿ ಪ್ರವಾಸಿಗರಿಗೆ ವೀಸಾ ನಿಯಮಗಳನ್ನು ಸಡಿಲಗೊಳಿಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.

ಆಂತರಿಕ ಸಚಿವಾಲಯ ತಿಳಿಸಿರುವ ಪ್ರಕಾರ ಇಂಥ ಹತ್ತೊಂಬತ್ತು 'ಅಪರಾಧಗಳು' ಇವೆ. ಆದರೆ ಅದಕ್ಕೆ ಎಷ್ಟು ದಂಡ ವಿಧಿಸಲಾಗುವುದು ಎಂಬ ಬಗ್ಗೆ ತಿಳಿಸಿಲ್ಲ. ಸಂಪ್ರದಾಯಸ್ಥ ಇಸ್ಲಾಮಿಕ್ ರಾಷ್ಟ್ರ ಸೌದಿ ಅರೇಬಿಯಾವು ಮೊದಲ ಬಾರಿಗೆ ಟೂರಿಸ್ಟ್ ವೀಸಾ ನೀಡಲು ಆರಂಭಿಸಿದೆ.

ಮಡಿವಂತ ದೇಶ ಸೌದಿ ಅರೇಬಿಯಾದಿಂದ ಇದೇ ಮೊದಲ ಬಾರಿಗೆ ಟೂರಿಸ್ಟ್ ವೀಸಾಮಡಿವಂತ ದೇಶ ಸೌದಿ ಅರೇಬಿಯಾದಿಂದ ಇದೇ ಮೊದಲ ಬಾರಿಗೆ ಟೂರಿಸ್ಟ್ ವೀಸಾ

ಹೊಸ ನಿಯಮದ ಪ್ರಕಾರ ಮಹಿಳೆಯರು, ಪುರುಷರು ಗೌರವಯುತವಾದ ದಿರಿಸು ಧರಿಸಬೆಕು. ಸಾರ್ವಜನಿಕವಾಗಿ ಪ್ರೀತಿ ತೋರಿಸಬಾರದು. ಗೌರವಯುತವಾದ ದಿರಿಸು ಆಯ್ಕೆ ಮಾಡಿಕೊಳ್ಳುವುದಕ್ಕೆ ಮಹಿಳೆಯರು ಸ್ವತಂತ್ರರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Fine Imposed On Who Violate Public Decency In Saudi Arabia

ಪ್ರವಾಸಿಗರು ಸಾರ್ವಜನಿಕವಾಗಿ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಲಿ ಎಂಬ ಕಾರಣಕ್ಕೆ ಈ ರೀತಿ ನಿಯಮಗಳನ್ನು ಮಾಡಲಾಗಿದೆ. ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಸೌದಿ ಅರೇಬಿಯಾ ಶುಕ್ರವಾರ ಘೋಷಣೆ ಮಾಡಿದ ಪ್ರಕಾರ, ನಲವತ್ತೊಂಬತ್ತು ದೇಶಗಳಿಗೆ ಈಗ ಇ- ವೀಸಾ ಅಥವಾ ವೀಸಾ ಆನ್ ಅರೈವಲ್ ನೀಡಲಾಗಿದೆ. ಅದರಲ್ಲಿ ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ ಹಾಗೂ ಯುರೋಪಿಯನ್ ದೇಶಗಳು ಇವೆ.

ಪ್ರವಾಸೋದ್ಯಮದ ಮುಖ್ಯಸ್ಥ ಅಹ್ಮದ್ ಅಲ್- ಖತೀಬ್ ಮಾತನಾಡಿ, ವಿದೇಶಿ ಮಹಿಳೆಯರಿಗೆ ಸೌದಿ ಮಹಿಳೆಯರ ರೀತಿಯಲ್ಲಿ ಕಡ್ಡಾಯ ವಸ್ತ್ರ ಸಂಹಿತೆ ಇರುವುದಿಲ್ಲ ಎಂದಿದ್ದಾರೆ. ಆದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸೌದಿಯ ಮಹಿಳೆಯರು ಭುಜ, ಮಂಡಿಯು ಕಾಣದಂತೆ ಬಟ್ಟೆ ಧರಿಸಿರಬೇಕು.

English summary
UAE government Saturday announce fine for violation of public decency. Here is the complete story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X