ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5.6 ಟನ್ ಮಾದಕ ವಸ್ತು ಪತ್ತೆಹಚ್ಚಿದ ಪೊಲೀಸ್ ಶ್ವಾನ

|
Google Oneindia Kannada News

ದುಬೈ, ಫೆಬ್ರವರಿ 26: ದುಬೈ ಪೊಲೀಸ್ ಇಲಾಖೆಯ ಜರ್ಮನ್ ಷೆಫರ್ಡ್ ನಾಯಿಯ ಸಹಾಯದಿಂದ ದೇಶದೊಳಗೆ 5.6 ಟನ್ ಕ್ಯಾಪ್ಟಗಾನ್ ಮಾತ್ರೆಗಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುವ ಭಾರಿ ಪ್ರಯತ್ನವನ್ನು ಭೇದಿಸಲಾಗಿದೆ.

ದುಬೈಗೆ ತರಲಾಗುತ್ತಿದ್ದ ಎಲೆಕ್ಟ್ರಿಕ್ ಕೇಬಲ್ ಒಳಗೆ 35 ಮಿಲಿಯನ್ ಮಾತ್ರೆಗಳನ್ನು ಬಚ್ಚಿಡಲಾಗಿತ್ತು. ಏಳು ವರ್ಷಗಳಿಂದ ದುಬೈ ಪೊಲೀಸ್ ಇಲಾಖೆಯಲ್ಲಿರುವ ಪುಲೆಟು ಶ್ವಾನ ಕಂಟೈನರ್‌ಗಳ ಒಳಗೆ ಇರಿಸಿದ್ದ ಕೇಬಲ್‌ಗಳಲ್ಲಿ ಅನುಮಾನಾಸ್ಪದ ವಸ್ತುಗಳಿಗೆ ಎಂಬುದನ್ನು ಪತ್ತೆಹಚ್ಚಿದೆ.

ಮದುವೆ ಆಮಂತ್ರಣ ಪತ್ರಿಕೆಯೊಳಗಿತ್ತು 5.49 ಕೆ.ಜಿ ಮಾದಕ ವಸ್ತುಮದುವೆ ಆಮಂತ್ರಣ ಪತ್ರಿಕೆಯೊಳಗಿತ್ತು 5.49 ಕೆ.ಜಿ ಮಾದಕ ವಸ್ತು

ಈ ಮಾತ್ರೆಗಳ ತೂಕ ಬರೋಬ್ಬರಿ 5.6 ಟನ್ ತೂಕವಿದ್ದು, ಇದು ಜಗತ್ತಿನಲ್ಲಿಯೇ ಅತಿ ದೊಡ್ಡ ಮಾದಕ ವಸ್ತು ಕಳ್ಳಸಾಗಣೆಯ ಪ್ರಯತ್ನವಾಗಿದೆ ಎಂದು ದುಬೈ ಪೊಲೀಸ್ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಅಬ್ದುಲ್ಲಾ ಖಲೀಫಾ ಅಲ್ ಮೆರ್ರಿ ತಿಳಿಸಿದ್ದಾರೆ.

Dubai Police Dog Helps To Foil 5.5 Tonnes Of Captagon Pills

ಜೆಬೆಲ್ ಅಲಿ ಬಂದರಿನಿಂದ ಬರುತ್ತಿದ್ದ ಕಂಟೇನರ್‌ಗಳ ಒಳಗೆ ಮಾದಕವಸ್ತುವನ್ನು ಬಚ್ಚಿಡಲಾಗಿತ್ತು. ಕೇಬಲ್ ಒಳಗೆ ಇದ್ದ ಮಾದಕವಸ್ತುಗಳನ್ನು ಪತ್ತೆಹಚ್ಚಲು ಪುಲೆಟು ನೆರವಾಯಿತು. ಮಾದಕವಸ್ತು ಕಳ್ಳಸಾಗಣೆಯ ಪ್ರಯತ್ನವನ್ನು ವಿಫಲಗೊಳಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಾ ಮತ್ತು ಅಜ್ಮಾನ್‌ನಲ್ಲಿ ಆರು ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರಲ್ಲಿ ಪ್ರಾರಂಭವಾಗಲಿದೆ ಭಾರತದ ಮೊದಲ 'ಗಾಂಜಾ ಆಸ್ಪತ್ರೆ'ಬೆಂಗಳೂರಲ್ಲಿ ಪ್ರಾರಂಭವಾಗಲಿದೆ ಭಾರತದ ಮೊದಲ 'ಗಾಂಜಾ ಆಸ್ಪತ್ರೆ'

ಈ ಗ್ಯಾಂಗ್‌ನ ಮುಖ್ಯಸ್ಥ 70 ವರ್ಷದ ವೃದ್ಧನಾಗಿದ್ದು, ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ಬೆಲೆ 1.8 ಬಿಲಿಯನ್ ದಿರ್ಹಾಮ್‌ಗಳೆಂದು ಅಂದಾಜಿಸಲಾಗಿದೆ.

ಕ್ಯಾಪ್ಟಗಾನ್ ಮಾತ್ರೆಗಳ ರೂಪದಲ್ಲಿ ಸಿಗುವ ಮಾದಕವಸ್ತುವಾಗಿದೆ. 1960ರ ದಶಕದಲ್ಲಿ ಖಿನ್ನತೆ ಮತ್ತಿತರ ಸಮಸ್ಯೆಗಳ ಚಿಕಿತ್ಸೆಗೆ ಈ ಮಾತ್ರೆಗಳನ್ನು ಔಷಧವಾಗಿ ಬಳಸಲಾಗುತ್ತಿತ್ತು. ಆದರೆ ಇದರಿಂದ ಇತರೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅನೇಕ ದೇಶಗಳನ್ನು ಮಾತ್ರೆಯನ್ನು ಮಾದಕವಸ್ತು ಎಂದು ಪರಿಗಣಿಸಿ ನಿಷೇಧಿಸಲಾಗಿದೆ.

English summary
Dubai Police dog helps to foil biggest drug smuggling of 5.6 tonnes of captagon pills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X