ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನಲ್ಲಿ ಕೊವಿಡ್ ರೋಗಿಯ 1.52 ಕೋಟಿ ರೂ. ಚಿಕಿತ್ಸಾ ಶುಲ್ಕ ಮನ್ನಾ

|
Google Oneindia Kannada News

ದುಬೈ, ಜುಲೈ 16: ತೆಲಂಗಾಣ ಮೂಲದ ಕೊವಿಡ್ ರೋಗಿಯ 1.52 ಕೋಟಿ ಚಿಕಿತ್ಸಾ ಶುಲ್ಕವನ್ನು ಮಾನವೀಯತೆ ಆಧಾರದ ಮೇಲೆ ದುಬೈ ಆಸ್ಪತ್ರೆ ಮನ್ನಾ ಮಾಡಿ ಮಾನವೀಯತೆ ಮೆರೆದಿದೆ.

Recommended Video

ರಚಿತಾ ರಾಮ್ ಚಾನ್ಸ್ ಮಿಸ್ ಮಾಡ್ಕೊಂಡ್ರು ಹರಿಪ್ರಿಯಾ ಕ್ಯಾಚ್ ಹಾಕೊಂಡ್ರು | Filmibeat Kannada

ದುಬೈ ಆಸ್ಪತ್ರೆಯಲ್ಲಿ ಸುಮಾರು 80 ದಿನಗಳಿಂದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆಗೆ ಅವರ ಆಸ್ಪತ್ರೆ ವೆಚ್ಚ 1.52 ಕೋಟಿ ರೂ ಆಗಿತ್ತು.
ಹಾಗೆಯೇ ಅವರು ತೆಲಂಗಾಣಕ್ಕೆ ತೆರಳಲು ಉಚಿತ ವಿಮಾನ ಟಿಕೆಟ್‌ಗಳನ್ನು ಕೂಡ ಹೊಂದಿಸಿದ್ದಾರೆ.

ಕೊವಿಡ್ 19 : ಯಾವ ಯಾವ ದೇಶದಲ್ಲಿ ಅತಿ ಹೆಚ್ಚು ಸಾವು ನೋವುಕೊವಿಡ್ 19 : ಯಾವ ಯಾವ ದೇಶದಲ್ಲಿ ಅತಿ ಹೆಚ್ಚು ಸಾವು ನೋವು

ಬುಧವಾರ ಬೆಳಗ್ಗೆ 42 ವರ್ಷದ ರೋಗಿ ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಸುಮಾರು 85 ದಿನಗಳ ಕಾಲ ಚಿಕಿತ್ಸೆಯನ್ನು ಪಡೆದು ಬಳಿಕ ಕುಟುಂಬದವರನ್ನು ಸೇರಿದ್ದಾರೆ.

Dubai Hospital Waives Off Rs 1.52 Crore Bill of Telangana Covid Patient

ದುಬೈನಲ್ಲಿ ಕಳೆದ 2 ವರ್ಷಗಳಿಂದ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 23 ರಂದು ಆಸ್ಪತ್ರೆಗೆ ದಾಖಲಾಗಿದ್ದರು, ಬಳಿಕ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಗೊತ್ತಾಗಿತ್ತು.

ರಾಜೇಶ್ 80 ದಿನಗಳು ಅಲ್ಲಿ ಚಿಕಿತ್ಸೆ ಪಡೆದಿದ್ದರು, ಬಳಿಕ 1 ಕೋಟಿ 52 ಲಕ್ಷ ಆಸ್ಪತ್ರೆ ಬಿಲ್ ಆಗಿತ್ತು. ಗಲ್ಫ್ ವರ್ಕರ್ಸ್ ಪ್ರೊಟೆಕ್ಷನ್ ಸೊಸೈಟಿ ಅಧ್ಯಕ್ಷ ಗುಂಡೆಲ್ಲಿ ನರಸಿಂಹಯ್ಯ, ರೋಗಿ ಆಸ್ಪತ್ರೆಯಲ್ಲಿ ದಾಖಲಾದ ದಿನದಿಂದಲೇ ಅವರ ಸಂಪರ್ಕದಲ್ಲಿದ್ದರು. ಬಳಿಕ ಅವರ ಬಳಿ ಅಷ್ಟೊಂದು ಆಸ್ಪತ್ರೆ ಬಿಲ್ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿದಿದ್ದರು.

ಬಳಿಕ ಭಾರತೀಯ ಕೌನ್ಸುಲೇಟ್ ವಾಲಂಟಿಯರ್ ಸುಮಂತ್ ರೆಡ್ಡಿ ಅವರನ್ನು ಸಂಪರ್ಕಿಸಲಾಗಿತ್ತು, ನಂತರ ಸ್ವಾಮಿನಾರಾಯಣ ಟ್ರಸ್ಟ್ ಸಂಪರ್ಕಿಸಲಾಗಿತ್ತು. ಬಳಿಕ ಎಲ್ಲಾ ಸ್ವಯಂಸೇವಕರೂ ಸೇರಿ ಆಸ್ಪತ್ರೆಗೆ ಮನವಿ ಮಾಡಿ, ಮಾನವೀಯತ ಆಧಾರದಲ್ಲಿ ಅವರನ್ನು ಬಿಡುಗಡೆ ಮಾಡುವಂತೆ ಕೇಳಿಕೊಳ್ಳಲಾಯಿತು. ಅದಕ್ಕೆ ಸ್ಪಂದಿಸಿದ ಆಸ್ಪತ್ರೆ ತಕ್ಷಣವೇ ಅವರನ್ನು ಬಿಡುಗಡೆ ಮಾಡಿದರು.

English summary
A hospital in Dubai waived off the medical bill amounting to Rs 1.52 crore in Indian currency of a COVID-19 patient from Telangana on ‘humanitarian grounds’. A volunteer also arranged Rs 10,000 and free tickets for the man to return home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X