• search
  • Live TV
ದುಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಟ್ಟೆಯಿಲ್ಲದೆ ಬದುಕಬೇಕಾದ ಅಬ್ಬಾಸ್ ಆಸೆಯಿಂದ ಕೇಳಿದ್ದು ಬಿರಿಯಾನಿ

By ಅನಿಲ್ ಆಚಾರ್
|

ಆತನ ಹೆಸರು ಗುಲಾಮ್ ಅಬ್ಬಾಸ್. ದುಬೈನಲ್ಲಿ ಎಂಜಿನಿಯರ್. ದಿಢೀರನೆ ಆತನ ತೂಕ ಕಡಿಮೆ ಆಗುತ್ತಾ ಹೋಯಿತು. ಜತೆಗೆ ಆಗಾಗ ವಾಂತಿ ಬೇರೆ ಆಗ್ತಿತ್ತು. ಇದೇನೋ ಸಾಮಾನ್ಯ ಅನಾರೋಗ್ಯ ಇರಬೇಕು ಅಂದುಕೊಂಡು ಅಬ್ಬಾಸ್ ವೈದ್ಯರಲ್ಲಿಗೆ ಹೋದಾಗ ಗೊತ್ತಾಗಿದ್ದು ಏನೆಂದರೆ, ಆತನಿಗೆ ಹೊಟ್ಟೆ ಕ್ಯಾನ್ಸರ್. ಅದೂ ಮೂರನೇ ಹಂತದಲ್ಲಿತ್ತು.

ಆಗ ಆತನಿಗಿದ್ದ ಆಯ್ಕೆ ಏನು ಗೊತ್ತಾ? ಹೊಟ್ಟೆ ಇಲ್ಲದೆ ಬದುಕಬೇಕು ಅಥವಾ ಬದುಕುವ ಆಸೆಯನ್ನೇ ಬಿಡಬೇಕು. ಹೊಟ್ಟೆ ಇಲ್ಲದಿದ್ದರೂ ಪರವಾಗಿಲ್ಲ, ಬದುಕಿದ್ದರೆ ಸಾಕು ಎಂದು ನಿರ್ಧರಿಸಿದ ಅಬ್ಬಾಸ್, ಆಪರೇಷನ್ ಮಾಡಿಸಿಕೊಳ್ಳಲು ಸಿದ್ಧನಾದ. ಅಂದರೆ ಶಸ್ತ್ರಚಿಕಿತ್ಸೆ ಮೂಲಕ ಅಬ್ಬಾಸ್ ನ ಹೊಟ್ಟೆಯನ್ನೇ ತೆಗೆದುಹಾಕಬೇಕಿತ್ತು.

ದೆಹಲಿ ಜನರ ಬಾಯಾರಿಕೆ ತಣಿಸುತ್ತಿರುವ ಬೆಂಗಳೂರು ಮೂಲದ 'ಭಗೀರಥ'

ಒಮ್ಮೆ ಹೊಟ್ಟೆಯನ್ನು ತೆಗೆದುಹಾಕಿದ ಮೇಲೆ ಮಸಾಲೆ ಪದಾರ್ಥಗಳನ್ನು ಹಾಗೂ ಜಾಸ್ತಿ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವಂತಿಲ್ಲ. ಇದು ಗೊತ್ತಾದ ಮೇಲೆಯೇ, ನೀವು ಆಪರೇಷನ್ ಮಾಡುವ ಮುಂಚೆ ಒಂದೇ ಒಂದು ಸಲ ನನಗಿಷ್ಟವಾದ ಬಿರಿಯಾನಿ ತಿಂದುಬಿಡ್ತೀನಿ ಎಂದು ಅಬ್ಬಾಸ್ ತನ್ನ ಆಸೆಯೊಂದನ್ನು ವೈದ್ಯರ ಮುಂದೆ ಹೇಳಿದ್ದಾನೆ. ಅದಕ್ಕೆ ವೈದ್ಯರು ಸಹ ಒಪ್ಪಿಕೊಂಡಿದ್ದಾರೆ.

ಮಸಾಲೆ ಹಾಕಿದ ಬಿರಿಯಾನಿ ಇನ್ನು ನನ್ನ ಪಾಲಿಗಿಲ್ಲ

ಮಸಾಲೆ ಹಾಕಿದ ಬಿರಿಯಾನಿ ಇನ್ನು ನನ್ನ ಪಾಲಿಗಿಲ್ಲ

ಅಬ್ಬಾಸ್ ನ ಪತ್ನಿ ಬಿರಿಯಾನಿ ಮಾಡಿದ್ದಾರೆ. ಆತನ ಸೋದರ ಅದನ್ನು ಆಸ್ಪತ್ರೆಗೆ ತಂದಿದ್ದಾನೆ. ಬಿರಿಯಾನಿ ಅಂದರೆ ನನಗೆ ಗಂಟಲ ತನಕ ಪ್ರೀತಿಯಿತ್ತು. ನನ್ನ ಹೆಂಡತಿ ಮಾಡಿದ ಬಿರಿಯಾನಿಯನ್ನು ಕೊನೆ ಬಾರಿಗೆ ಎಂದು ಮನಸಾರೆ ತಿಂದೆ. ಈ ಜನ್ಮಕ್ಕೆ ಇಂಥ ಮಸಾಲೆ ಹಾಕಿದ, ನನ್ನಿಷ್ಟದ ಬಿರಿಯಾನಿ ನನ್ನ ಪಾಲಿಗಿಲ್ಲ ಎಂದು ಅಬ್ಬಾಸ್ ಹೇಳಿಕೊಂಡಿದ್ದಾನೆ.

ಹೊಟ್ಟೆ ಇಲ್ಲದೆ ಬದುಕು ನಡೆಸುವುದು ಕಷ್ಟವಲ್ಲ

ಹೊಟ್ಟೆ ಇಲ್ಲದೆ ಬದುಕು ನಡೆಸುವುದು ಕಷ್ಟವಲ್ಲ

ಅಂದಹಾಗೆ ಅಬ್ಬಾಸ್ ಗೆ ಇಬ್ಬರು ಮಕ್ಕಳು. ಮಗನಿಗೆ ಒಂದೂವರೆ ವರ್ಷ. ಮಗಳಿಗೆ ಆರು ವರ್ಷ ವಯಸ್ಸು. ತಂದೆಯಿಲ್ಲದೆ ಮಕ್ಕಳು ಬೆಳೆಯುವುದು ಬಹಳ ಕಷ್ಟದ ಆಯ್ಕೆ. ಆದರೆ ಹೊಟ್ಟೆಯಿಲ್ಲದೆ ತಾನು ಬದುಕು ನಡೆಸುವುದು ಅಂಥ ಶ್ರಮವಲ್ಲ ಎಂಬುದು ಅಬ್ಬಾಸ್ ಮಾತು.

ಕ್ಯಾನ್ಸರ್ ಪೀಡಿತ ಸೋನಾಲಿ ಬೇಂದ್ರೆಯವರ ಭಾವುಕ ಸಾಲು ಮತ್ತು ಹೊಸ ವಿಡಿಯೋ

ಆಹಾರ ಸೇವನೆಯನ್ನೇ ನಿಲ್ಲಿಸಿ ಬಿಡ್ತಾರಾ?

ಆಹಾರ ಸೇವನೆಯನ್ನೇ ನಿಲ್ಲಿಸಿ ಬಿಡ್ತಾರಾ?

ಜಗತ್ತಿನಾದ್ಯಂತ ಹೊಟ್ಟೆ ಕ್ಯಾನ್ಸರ್ ನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಈಗ ಉದ್ಭವಿಸುವ ಪ್ರಶ್ನೆ ಏನೆಂದರೆ, ಹೊಟ್ಟೆ ಇಲ್ಲದೆ ಅಬ್ಬಾಸ್ ಬದುಕುವುದಕ್ಕೆ ಸಾಧ್ಯವಾ? ಆಹಾರ ಸೇವನೆ, ಪಚನ ಕ್ರಿಯೆ ಇವೆಲ್ಲ ಹೇಗೆ ಅಂತಲ್ಲವೆ? ಹೊಟ್ಟೆ ಇಲ್ಲ ಅಂದಾಕ್ಷಣ ಆಹಾರ ಸೇವನೆಯನ್ನೇ ನಿಲ್ಲಿಸಿ ಬಿಡ್ತಾರೆ ಅಂತಲ್ಲ. ಸಣ್ಣ ಪ್ರಮಾಣದಲ್ಲಿ, ಮಸಾಲೆ ಇಲ್ಲದಂಥ ಆಹಾರ ತೆಗೆದುಕೊಳ್ಳಬಹುದು.

ಕ್ಯಾನ್ಸರ್ ಗುಣಪಡಿಸುವ ಹಾಲೆ ತೊಗಟಿಯ ಕಷಾಯಕ್ಕೆ ಭಾರೀ ಬೇಡಿಕೆ

ಹೊಟ್ಟೆಯ ಮುಖ್ಯ ಕಾರ್ಯವನ್ನು ಬೈಪಾಸ್ ಮಾಡಬಹುದು

ಹೊಟ್ಟೆಯ ಮುಖ್ಯ ಕಾರ್ಯವನ್ನು ಬೈಪಾಸ್ ಮಾಡಬಹುದು

ಹೊಟ್ಟೆ ಇಲ್ಲದೆ ವ್ಯಕ್ತಿ ಬದುಕುವುದಕ್ಕೆ ಸಾಧ್ಯವಾ ಎಂಬುದು ಇನ್ನೂ ಸಾಮಾನ್ಯ ಪ್ರಶ್ನೆ. ಆದರೆ ಹೊಟ್ಟೆಯ ಕಾರ್ಯ ಚಟುವಟಿಕೆಯನ್ನು ಬೈಪಾಸ್ ಮಾಡಬಹುದು. ಹೊಟ್ಟೆಯ ಮುಖ್ಯ ಕೆಲಸ ಏನೆಂದರೆ ಆಹಾರ ಸಂಗ್ರಹ ಹಾಗೂ ಅದನ್ನು ನುರಿದು ಕರುಳಿಗೆ ಕಳುಹಿಸುವುದು. ಹೊಟ್ಟೆ ಇಲ್ಲದಿದ್ದರೆ ಸಣ್ಣ ಪ್ರಮಾಣದಲ್ಲಿ ಸೇವಿಸಿದ ಆಹಾರ ನೇರವಾಗಿ ಎಸೊಫಗಸ್ ನಿಂದ ಸಣ್ಣ ಕರುಳಿಗೆ ನೇರವಾಗಿ ಹೋಗುತ್ತದೆ ಎನ್ನುತ್ತಾರೆ ವೈದ್ಯರು. ಅಬ್ಬಾಸ್ ಆದಷ್ಟು ಶೀಘ್ರದಲ್ಲೇ ಸಣ್ಣ ಪ್ರಮಾಣದ ಆಹಾರ ಸೇವಿಸಲು ಆರಂಭಿಸಬಹುದು. ಅದುವರೆಗೆ ದ್ರವಾಹಾರ ಸೇವನೆ ಮಾಡಬೇಕಾಗುತ್ತದೆ. ಅಬ್ಬಾಸ್ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ.

ಕ್ಯಾನ್ಸರ್ ಗುಣಪಡಿಸಲು ಫಾರ್ಮ್ಯುಲಾ ಕಂಡುಹಿಡಿದ ಸಂಶೋಧಕಿ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ghulam Abbas, an engineer in Dubai, diagnosed with stage-three stomach cancer. had one 'delicious' wish before the doctors surgically removed his stomach - to savour biryani. Abbas requested the doctors to let him have biryani, the doctors agreed.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more