• search
  • Live TV
ದುಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೂನ್ 23ರಿಂದ ಭಾರತಕ್ಕೆ ದುಬೈ ಎಮಿರೇಟ್ಸ್ ವಿಮಾನ ಹಾರಾಟ

|
Google Oneindia Kannada News

ದುಬೈ, ಜೂನ್ 20; ಭಾರತ ಸೇರಿದಂತೆ ಮೂರು ದೇಶಗಳಿಗೆ ಜೂನ್ 23ರಿಂದ ವಿಮಾನ ಹಾರಾಟ ಆರಂಭಿಸುವುದಾಗಿ ದುಬೈ ಎಮಿರೇಟ್ಸ್ ಹೇಳಿದೆ. ಕೋವಿಡ್ ಹಿನ್ನಲೆಯಲ್ಲಿ ಹಾಕಿದ್ದ ವಿಮಾನ ಸಂಚಾರ ನಿರ್ಬಂಧವನ್ನು ದುಬೈ ರದ್ದುಗೊಳಿಸಿದೆ.

ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾಕ್ಕೆ ಜೂನ್ 23ರಿಂದ ವಿಮಾನ ಹಾರಾಟ ನಡೆಸುವುದಾಗಿ ಘೋಷಣೆ ಮಾಡಲಾಗಿದೆ. ವಿಮಾನದಲ್ಲಿ ಸಂಚಾರ ನಡೆಸಬೇಕಾದರೆ ಯುಎಇ ಮಾನ್ಯತೆ ಪಡೆದ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು.

ಭಾರತ- ದುಬೈ ವಿಮಾನ ರದ್ದುಗೊಳಿಸಿದ ಎಮಿರೇಟ್ಸ್‌ಭಾರತ- ದುಬೈ ವಿಮಾನ ರದ್ದುಗೊಳಿಸಿದ ಎಮಿರೇಟ್ಸ್‌

ದುಬೈನ ನೈಸರ್ಗಿಕ ವಿಕೋಪ ಮತ್ತು ಬಿಕ್ಕಟ್ಟು ನಿರ್ವಹಣೆಯ ಉನ್ನತ ಮಟ್ಟದ ಸಮಿತಿ ವಿಮಾನ ಸಂಚಾರಕ್ಕೆ ಅವಕಾಶ ನೀಡಿದೆ. ವಿಮಾನ ಹಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಕೋವಿಡ್ ನಿಯಮ ಉಲ್ಲಂಘನೆ: ಏರ್ ಇಂಡಿಯಾ ವಿಮಾನ ಸಂಚಾರ ಅಮಾನತು ಮಾಡಿದ ದುಬೈಕೋವಿಡ್ ನಿಯಮ ಉಲ್ಲಂಘನೆ: ಏರ್ ಇಂಡಿಯಾ ವಿಮಾನ ಸಂಚಾರ ಅಮಾನತು ಮಾಡಿದ ದುಬೈ

ಭಾರತದಿಂದ ಸಂಚಾರ ನಡೆಸುವ ಪ್ರಯಾಣಿಕರು 4 ಗಂಟೆ ಮೊದಲು ಆರ್‌ಟಿಪಿಆರ್ ಪರೀಕ್ಷೆಗೆ ಒಳಪಡಬೇಕು. ದುಬೈನಲ್ಲಿ ಮತ್ತೆ ಪರೀಕ್ಷೆ ಮಾಡಿಸಬೇಕು ಎಂದು ಸೂಚನೆ ನೀಡಲಾಗಿದೆ.

 ವೈರಲ್ ವಿಡಿಯೋ; ಆಸ್ಟ್ರಿಚ್ ಜೊತೆ ದುಬೈ ರಾಜಕುಮಾರನ ಸೈಕಲ್ ರೇಸ್ ವೈರಲ್ ವಿಡಿಯೋ; ಆಸ್ಟ್ರಿಚ್ ಜೊತೆ ದುಬೈ ರಾಜಕುಮಾರನ ಸೈಕಲ್ ರೇಸ್

ಭಾರತದಿಂದ ದುಬೈಗೆ ಬರುವ ಪ್ರಯಾಣಿಕರು ಆರ್‌ಟಿಪಿಸಿಆರ್ ವರದಿ ಬರುವ ತನಕ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಬೇಕು. 24 ಗಂಟೆಯಲ್ಲಿ ವರದಿ ಕೈ ಸೇರಲಿದೆ.

ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾದ ಪ್ರಯಾಣಿಕರು ಕೋವಿಡ್ ಲಸಿಕೆ ಪಡೆದಿರಬೇಕು. ಸಂಚಾರ ಆರಂಭಿಸುವ 48 ಗಂಟೆಗಳ ಮೊದಲ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು.

ಏಪ್ರಿಲ್‌ ತಿಂಗಳಿನಲ್ಲಿ ಕೋವಿಡ್ 2ನೇ ಅಲೆ ಹೆಚ್ಚಾದಾಗ ದುಬೈ ಭಾರತ ಸೇರಿದಂತೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರ ರದ್ದು ಮಾಡಿತ್ತು. ಈಗ ಭಾರತದಲ್ಲಿಯೂ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ವಿಮಾನ ಹಾರಾಟ ಪುನಃ ಆರಂಭಿಸಲಾಗಿದೆ.

English summary
Dubai's Gulf news reported that Dubai's emirates airline will resume flights connecting India from June 23rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X