• search
  • Live TV
ದುಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದುಬೈಯಲ್ಲಿ ಅದ್ದೂರಿಯಾಗಿ ನಡೆದ ಯುಎಇ ದಸರಾ ಕ್ರೀಡಾಕೂಟ

By ಮಮತಾ ಸೆಂಥಿಲ್, ದುಬೈ
|

ಅಬುಧಾಬಿ : ಮೈಸೂರು ದಸರಾ ಎಷ್ಟೊಂದು ಸುಂದರ ಎಂದು ಬಹುಪಾಲು ಅನಿವಾಸಿ ಕನ್ನಡಿಗರು ಕೇಳಿದ್ದಾರೆಯೇ ಹೊರತು ಹೆಚ್ಚಿನವರಿಗೆ ನೋಡಲು ಸಮಯ ಸಂದರ್ಭ ಕೂಡಿ ಬರುವುದಿಲ್ಲ. ನಾಡಹಬ್ಬ ಮೈಸೂರು ದಸರಾ ಉತ್ಸವದ ಒಂದು ಸಣ್ಣ ಮೆಲುಕನ್ನು ಅನಿವಾಸಿ ಕನ್ನಡಿಗರಿಗೆ ಅದರಲ್ಲೂ ಕನ್ನಡ ನಾಡಿನ ಮುದ್ದು ಮಕ್ಕಳಿಗೆ ನಾಡ ಹಬ್ಬದ ಬಗ್ಗೆ ತಿಳಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಯುಎಇ ಹೆಮ್ಮೆಯ ಕನ್ನಡಿಗರು, ವಾಟ್ಸಾಪ್ ಗ್ರೂಪ್ ಸದಸ್ಯರು ದುಬೈಯಲ್ಲಿ ಯುಎಇ ದಸರಾ ಕ್ರೀಡಾಕೂಟ ಎಂಬ ಕಾರ್ಯಕ್ರಮವನ್ನು ಅಕ್ಟೋಬರ್ 19ನೇ ತಾರೀಖಿನಂದು ಅಲ್ ಬರ್ಶದಲ್ಲಿರುವ ಜುಮೇರಾ ವಿಲೇಜ್ ಸರ್ಕಲಿನಲ್ಲಿನ ಜೆಎಸ್ಎಸ್ ಅಂತಾರಾಷ್ಟ್ರೀಯ ಶಾಲೆಯ ಒಳ ಮತ್ತು ಹೊರ ಕ್ರೀಡಾಂಗಣದಲ್ಲಿ ಆಯೋಜಿಸಿತ್ತು.

ದುಬೈಯಲ್ಲಿ ಮೆಚ್ಚುಗೆ ಗಳಿಸಿದ ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ ದುಬೈಯಲ್ಲಿ ಮೆಚ್ಚುಗೆ ಗಳಿಸಿದ ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ

ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಿ, ದಸರಾ ಹಬ್ಬವನ್ನು ವಿಶ್ವದ ಅತ್ಯಂತ ಎತ್ತರದ ಕಟ್ಟಡಗಳನ್ನು ಹೊಂದಿರುವ ಮಾಯಾನಗರಿ ದುಬೈ ನಗರದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವು ಬೆಳಿಗ್ಗೆ 8.30ಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆಗೊಂಡಿತು. ದೀಪವನ್ನು ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಶಿವಕುಮಾರ್ ಅವರು ಬೆಳಗಿಸಿ ಕಾಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ನೀಡಿದರು.

ದುಬೈನಲ್ಲಿ ಮನಸೂರೆಗೊಂಡ 'ಅಷ್ಟಭುಜೆ ಆದಿಮಾಯೆ' ತಾಳಮದ್ದಳೆ ದುಬೈನಲ್ಲಿ ಮನಸೂರೆಗೊಂಡ 'ಅಷ್ಟಭುಜೆ ಆದಿಮಾಯೆ' ತಾಳಮದ್ದಳೆ

ದಸರಾ ಕ್ರೀಡಾಕೂಟದ ಅಂಗವಾಗಿ ಮಕ್ಕಳ ವಿಭಾಗಕ್ಕೆ ಲಾಂಗ್ ಜಂಪ್, ಮ್ಯೂಸಿಕಲ್ ಚೇರ್, ಪಾಸಿಂಗ್ ದಿ ರಿಂಗ್, ಫ್ರಾಗ್ ಜಂಪ್, ರನ್ನಿಂಗ್ ರೇಸ್, ಲೆಮನ್ ಅಂಡ್ ಸ್ಪೂನ್ ಮುಂತಾದ ಹಲವು ಆಟೋಟಗಳು ಇದ್ದವು. ಹಾಗೆ ಕನ್ನಡತಿಯರಿಗೆ ಮ್ಯೂಸಿಕಲ್ ಚೇರ್, ಟಗ್ ಆಫ್ ವಾರ್, ಥ್ರೋ ಬಾಲ್, ಪಾಸಿಂಗ್ ದಿ ರಿಂಗ್, ಬ್ಯಾಡ್ಮಿಂಟನ್, ರಂಗೋಲಿ, ರನ್ನಿಂಗ್ ರೇಸ್ ಮುಂತಾದ ಆಟೋಟಗಳು ಇದ್ದವು.

ಪುರುಷ ವಿಭಾಗಕ್ಕೆ ಟಗ್ ಆ ವಾರ್, ಥ್ರೋ ಬಾಲ್, ಲಾಂಗ್ ಜಂಪ್, ರನ್ನಿಂಗ್ ರೇಸ್ ಬ್ಯಾಡ್ಮಿಂಟನ್ ಮುಂತಾದ ಆಟೋಟಗಳು ಏರ್ಪಡಿಸಿದ್ದರು. ಕನ್ನಡ ನಾಡಿನ ನಾನಾ ಭಾಗದ ಅನಿವಾಸಿ ಕನ್ನಡಿಗರು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ವಿವಿಧ ಕಡೆಗಳಿಂದ ಆರುನೂರಕ್ಕಿಂತಲೂ ಹೆಚ್ಚು ಕನ್ನಡಿಗ ಕ್ರೀಡಾಪಟುಗಳು ಪಾಲ್ಗೊಂಡು ಸಂಭ್ರಮಿಸಿದರು.

ಅಬುಧಾಬಿಯಲ್ಲಿ ವಿಜೃಂಭಿಸಿದ ಕನ್ನಡ ರಾಜ್ಯೋತ್ಸವ ಅಬುಧಾಬಿಯಲ್ಲಿ ವಿಜೃಂಭಿಸಿದ ಕನ್ನಡ ರಾಜ್ಯೋತ್ಸವ

ಈ ಒಂದು ಸುಂದರ ಕಾರ್ಯಕ್ರಮಕ್ಕೆ ಕನ್ನಡ ನಾಡಿನ ಹಲವು ಜನ ನಾಯಕರು, ಸಾಮಾಜಿಕ ನೇತಾರರು, ಸಂಘ ಸಂಸ್ಥೆಗಳ ನಾಯಕರುಗಳು ಹಾಗೆ ಯುಎಇ ದೇಶದಲ್ಲಿ ವ್ಯವಹಾರ ಕ್ಷೇತ್ರದಲ್ಲಿನ ಹಲವು ಅನಿವಾಸಿ ಕನ್ನಡಿಗರು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭ ಮತ್ತು ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿದ ಕ್ರೀಡಾಪಟುಗಳಿಗೆ ಪಾರಿತೋಷಕ ವಿತರಿಸಿದರು.

ಅಲ್ ಸಮಿಯೇರ್ ಎಲೆಕ್ಟ್ರಿಕಲ್ ಗ್ರೂಪ್ ಮುಖ್ಯಸ್ಥರಾದ ಸುರೇಶ್ ಗಾಂಧಿ, ಪಾನ್ ವರ್ಲ್ಡ್ ಎಜುಕೇಶನ್ ಮುಖ್ಯಸ್ಥರಾದ ರಾಘವೇಂದ್ರ ಮನ್ಬೋಲ್, ಪ್ರಿಸಿಶನ್ ಎಕ್ಲೇಕ್ರಿಕೆಲ್ಸ್ ಕೋ ಮುಖ್ಯಸ್ಥರು, ಅಲ್ ಸರಾಯ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಸತೀಶ್ ಹೈನ್ದರ್, ಡಾ .ಮಮತಾ ರೆಡ್ಡಾರ್, ಎಮ್ ಸ್ಕ್ವೇರ್ ಎಂಜಿನೀರಿಂಗ್ ಮಾಲಿಕರಾದ ಮುಸ್ತಫಾ ಮತ್ತು ಮುಸ್ತಫಾ, ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಕನ್ನಡ ಪಾಠ ಶಾಲೆ ಮುಖ್ಯಸ್ಥರಾದ ಶಶಿಧರ್ ನಾಗರಾಜಪ್ಪ, ನೋಯೆಲ್, ಜೆಎಸ್ಎಸ್ ಶಾಲೆಯ ಮುಖ್ಯಸ್ಥರಾದ ಅಶೋಕ್, ಜೆಎಸ್ಎಸ್ ಶಾಲೆಯ ದೈಹಿಕ ಶಿಕ್ಷಕರಾದ ಬಾಬನ್ ಮ್ಯಾಥ್ಯು, ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷೆ ಉಮಾ ವಿದ್ಯಾದರ್, ಜೆಎಸ್ಎಸ್ ಶಾಲೆಯ ದೈಹಿಕ ಶಿಕ್ಷಕರಾದ ಮೊಣ್ಣಪ್ಪ ಮುಂತಾದವರು ವಿಜೇತರುಗಳಿಗೆ ಸನ್ಮಾನ ಹಸ್ತಾಂತರಿಸಿದರು. ಕೊನೆಯಲ್ಲಿ ಆಗಮಿಸಿದ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿ ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಿದರು.

ವೈರಲ್ ವಿಡಿಯೋ: ಬುರ್ಜ್ ಖಲಿಫಾ ಮೇಲೆ ಮಹಾತ್ಮಾ ಗಾಂಧಿ ಪ್ರತ್ಯಕ್ಷ! ವೈರಲ್ ವಿಡಿಯೋ: ಬುರ್ಜ್ ಖಲಿಫಾ ಮೇಲೆ ಮಹಾತ್ಮಾ ಗಾಂಧಿ ಪ್ರತ್ಯಕ್ಷ!

ಉದ್ಘಾಟನಾ ಸಮಯದಲ್ಲಿ ವೇದಿಕೆಯಲ್ಲಿ ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷರಾದ ವೀರೇಂದ್ರ ಬಾಬು, ದುಬಾಯಿ ಕನ್ನಡ ಪಾಠಶಾಲೆ ಮುಖ್ಯಸ್ಥರಾದ ಶಶಿಧರ್ ನಾಗರಾಜಪ್ಪ, ಬಸವ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಲಿಂಬಳ್ಳಿ, ಅಲ್ ಸರಾಯ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಮಾಲಿಕರಾದ ಸತೀಶ್ ಹೈನ್ದರ್, ಜೆಎಸ್ಎಸ್ ದುಬೈ ಶಾಲೆಯ ಅಧಿಕಾರಿಗಳಾದ ಅಶೋಕ್ ಮತ್ತು ದುಬೈ ದಸರಾ ಕ್ರೀಡಾಕೂಟ ವ್ಯವಸ್ಥಾಪಕ ಸಮಿತಿ ಸದಸ್ಯರುಗಳಾದ ರಫಿಕ್ ಅಲಿ ಕೊಡಗು, ಶ್ವೇತಾ ಮೈಲಾರ್ ಮತ್ತು ಸುದೀಪ್ ಪರಂಗಿ ದಾವಣಗೆರೆ, ಸೌಮ್ಯ ಮತ್ತು ವೆಂಕಟೇಶ್ ಮೇಲುಕೋಟೆ , ಪಲ್ಲವಿ ಮತ್ತು ಬಸವರಾಜ್ ಜೋಗಪ್ಪನವರ್ ದಾವಣಗೆರೆ, ಮಮತಾ ಮತ್ತು ಸೆಂಥಿಲ್ ಬೆಂಗಳೂರು, ಮಮತಾ ಮತ್ತು ರಾಘವೇಂದ್ರ ಮನ್ಬೋಲ್ ಬೆಂಗಳೂರು, ಅನಿತಾ ಮತ್ತು ರಾಮ್ ಬೆಂಗಳೂರು, ಸ್ವಪ್ನ ಮತ್ತು ಶಶಿಧರ್ ಮುಂಡರಗಿ ದಾವಣಗೆರೆ, ವೀಣಾ ಮತ್ತು ಮಧು ಗೌಡರ್ ದಾವಣಗೆರೆ, ವಿಷ್ಣುಮೂರ್ತಿ ಮೈಸೂರು, ಸಯೀದಾ ಯಸ್ ಕೆ ಝೆನಿಯ ಮತ್ತು ಮುಹಮ್ಮೆದ್ ಬೆಂಗಳೂರು, ಸಿರಿ ರೇಣುಕಾನಂದ ಮತ್ತು ಯೋಗೇಶ್ ಸೊಪ್ಪಿನ್, ದಾವಣಗೆರೆ, ಶೀಲಾ ಮತ್ತು ಮೊಣ್ಣಪ್ಪ ಕೊಡಗು, ಹಾದಿಯ ಮಂಡ್ಯ, ಅಲಾನ್ ಮೆಂಡೋನ್ಸಾ ಮಂಗಳೂರು, ಜಯಶ್ರೀ ಮತ್ತು ಸಂತೋಷ್ ಶೆಟ್ಟಿ ಮಂಗಳೂರು, ಮೈತ್ರಿ ಮತ್ತು ರವೀಂದ್ರ ಪೈ ಉಡುಪಿ, ವಿರುಪಾಕ್ಷ ನಾಗಠಾಣ ಧಾರವಾಡ, ಅನುರಾಧ ಮತ್ತು ಸತೀಶ್ ಮಾಸುರ್ ಧಾರವಾಡ , ಲೈನಾಲ್ ಮೊಂಟೆರಿಯೋ ಮಂಗಳೂರು, ಸವಿತಾ ಮತ್ತು ಮೋಹನ್ ಕುದೂರ್, ಕಿರಣ್ ಸಣ್ಣಕಿ ದಾವಣಗೆರೆ, ಅಮೃತ್ ಬಾಬು ದಾವಣಗೆರೆ ಮುಂತಾದವರು ಹಾಜರಿದ್ದರು.

English summary
Dasara celebrated in Dubai with sport activities. An attempt was to made to explain how Dasara is celebrated in Mysuru. The event was organized by UAE Kannadigaru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X