• search
  • Live TV
ದುಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಬುದಾಬಿ ಲಾಟರಿಯಲ್ಲಿ ಬಂಪರ್ ಹೊಡೆದ ಕೇರಳಿಗ

|

ಅಬುದಾಬಿ, ಆಗಸ್ಟ್ 3: ಅಬುದಾಬಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಡ್ರಾ ಮಾಡಲಾದ ಲಾಟರಿಯಲ್ಲಿ ಕೇರಳದ ವ್ಯಕ್ತಿಯೊಬ್ಬರು ಬರೋಬ್ಬರಿ 10 ಮಿಲಿಯನ್ ದಿರ್ಹಾಮ್ ಗೆದ್ದಿದ್ದಾರೆ.

ಶುಕ್ರವಾರ ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ನಡೆದ ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ ಈ ಭಾರಿ ಮೊತ್ತದ ಹಣ ಕೇರಳದ ವಲಸಿಗ ವಳಪಳ್ಳಿ ಯೊಹಾನನ್ ಸಿಮೊನ್ ಅವರಿಗೆ ಒಲಿದಿದೆ.

ದುಬೈನಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್ ಲಾಟರಿ ಗೆದ್ದ ಸಂದೀಪ್ ಮೆನನ್ದುಬೈನಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್ ಲಾಟರಿ ಗೆದ್ದ ಸಂದೀಪ್ ಮೆನನ್

ವಿಶೇಷವೆಂದರೆ ಟಾಪ್ 10 ವಿಜೇತರ ಪಟ್ಟಿಯಲ್ಲಿ ತೈಸಿರ್ ನಸರ್ ಸಾಬಿಹ್ ಎಂಬ ಸಿರಿಯಾದ ವ್ಯಕ್ತಿ ಹೊರತುಪಡಿಸಿ ಉಳಿದವರೆಲ್ಲರೂ ಭಾರತದವರೇ ಆಗಿದ್ದಾರೆ.

ಅಬುದಾಬಿ ಲಾಟರಿ ಭಾರತೀಯರ ಪಾಲಿಗೆ ಅದೃಷ್ಟದ್ದಾಗಿದೆ ಎಂದೇ ಪರಿಗಣಿಸಲಾಗಿದೆ. ಈ ವಾರದ ಆರಂಭದಲ್ಲಿ ಭಾರತದ ಸಂದೀಪ್ ಮೆನನ್ ಅವರು 1 ಮಿಲಿಯನ್ ಡಾಲರ್ ಗೆದ್ದಿದ್ದರು. ಶಾಂತಿ ಬೋಸ್ ಎಂಬುವವರು ಬಿಎಂಡ್ಬ್ಲ್ಯೂ ಆರ್ ನೈನ್ ಟಿ ಮೋಟಾರ್‌ಬೈಕ್ ಜಯಿಸಿದ್ದರು.

ತಮಗೆ ಕರೆ ಬಂದಾಗ ಆರಂಭದಲ್ಲಿ ಅದು ಹುಸಿ ಕರೆ ಎಂದೇ ಭಾವಿಸಿದ್ದಾಗಿ ಸಿಮೊನ್ ಹೇಳಿದ್ದಾರೆ. ಯುಎಇಯಲ್ಲಿ 13 ವರ್ಷ ಕಳೆದ ಬಳಿಕ ದೇವರು ಆಶೀರ್ವದಿಸಿದ್ದಾನೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಮೂವರು ಮಕ್ಕಳ ತಂದೆಯಾಗಿರುವ ಅವರು ಕೆಲವು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು. ಅಬುದಾಬಿಯಲ್ಲಿ ಅವರು ವ್ಯಾಪಾರ ಮಾಡುತ್ತಿದ್ದು, ಕೇರಳದಲ್ಲಿರುವ ಸಂಸ್ಥೆಯೊಂದಕ್ಕೆ ಈ ಹಣದ ಭಾಗವನ್ನು ದೇಣಿಗೆಯಾಗಿ ನೀಡಲು ಅವರು ಉದ್ದೇಶಿಸಿದ್ದಾರೆ.

English summary
Keralite Vazappalli Yohannan Simon won 10 million Dirhams in a raffle draw at Abu Dhabi International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X