ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ : ಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜ

|
Google Oneindia Kannada News

ದುಬೈ, ಆಗಸ್ಟ್ 16 : 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶ್ವದ ಅತಿ ಎತ್ತರದ ಕಟ್ಟಡದ ಮೇಲೆ ಭಾರತದ ತ್ರಿವರ್ಣ ಧ್ವಜ ಮೂಡಿಬಂದಿದೆ. ದುಬೈನ ಬುರ್ಜ್ ಖಲೀಫಾದಲ್ಲಿ ವಿದ್ಯುತ್ ದೀಪಗಳಿಂದ ತ್ರಿವರ್ಣ ಧ್ವಜವನ್ನು ಮೂಡಿಸಲಾಗಿದೆ.

ಶನಿವಾರ ಭಾರತದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಗಿದೆ. ಕೊರೊನಾ ಭೀತಿಯ ನಡುವೆಯ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದ ತುಂಬಾ ಆಚರಣೆ ಮಾಡಲಾಗಿದೆ.

ಗದ್ದೆಯಲ್ಲಿ ಟಿಲ್ಲರ್ ಮೇಲೆ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿದ ರೈತಗದ್ದೆಯಲ್ಲಿ ಟಿಲ್ಲರ್ ಮೇಲೆ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿದ ರೈತ

ಸ್ವಾತಂತ್ರ್ಯ ದಿನಾಚರಣೆಯಂದು ದುಬೈನ ಬುರ್ಜ್ ಖಲೀಫಾದಲ್ಲಿ ವಿದ್ಯುತ್ ದೀಪಗಳಿಂದ ಭಾರತದ ತ್ರಿವರ್ಣ ಧ್ವಜವನ್ನು ಮೂಡಿಸಲಾಗಿದೆ. ರಾತ್ರಿ 8.45ಕ್ಕೆ ತ್ರಿವರ್ಣ ಧ್ವಜ ಮೂಡಿಸುವ ಮೂಲಕ ಭಾರತೀಯರಿಗೆ ಗೌರವ ಸಲ್ಲಿಸಲಾಗಿದೆ.

ರಾಜ್ಯದೆಲ್ಲೆಡೆ 74ನೇ ಸ್ವಾತಂತ್ರ್ಯ ಭಾರತದ ಸಂಭ್ರಮ...ರಾಜ್ಯದೆಲ್ಲೆಡೆ 74ನೇ ಸ್ವಾತಂತ್ರ್ಯ ಭಾರತದ ಸಂಭ್ರಮ...

Burj Khalifa

ಬುರ್ಜ್ ಖಲೀಫಾ ಜಗತ್ತಿನ ಅತಿ ಎತ್ತರದ ಕಟ್ಟಡ. ದುಬೈನಲ್ಲಿರುವ ಗಗನಚುಂಬಿ ಕಟ್ಟಡದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮೂಡಿಸುವ ಮೂಲಕ ಎರಡೂ ದೇಶಗಳ ಸ್ನೇಹವನ್ನು ಜಗತ್ತಿಗೆ ಸಾರಲಾಗಿದೆ.

ವೈರಲ್ ವಿಡಿಯೋ: ಬುರ್ಜ್ ಖಲಿಫಾ ಮೇಲೆ ಮಹಾತ್ಮಾ ಗಾಂಧಿ ಪ್ರತ್ಯಕ್ಷ!ವೈರಲ್ ವಿಡಿಯೋ: ಬುರ್ಜ್ ಖಲಿಫಾ ಮೇಲೆ ಮಹಾತ್ಮಾ ಗಾಂಧಿ ಪ್ರತ್ಯಕ್ಷ!

2018ರಲ್ಲಿ ಭಾರತದಲ್ಲಿ ಮಹಾತ್ಮಾ ಗಾಂಧೀಜಿ 150ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಆಗ ಬುರ್ಜ್ ಖಲೀಫಾ ಮೇಲೆ ಗಾಂಧೀಜಿ ಅವರ ಚಿತ್ರ, ಜೀವನ ಸಂದೇಶವನ್ನು ಪ್ರಕಟಿಸಲಾಗಿತ್ತು.

ಹಲವು ವರ್ಷಗಳಿಂದ ಭಾರತದಲ್ಲಿನ ಸ್ವಾತಂತ್ರ್ಯ ದಿನಾಚರಣೆಯಂದು ದುಬೈನ ಬುರ್ಜ್ ಖಲೀಫಾದಲ್ಲಿ ವಿದ್ಯುತ್ ದೀಪಗಳಿಂದ ಭಾರತದ ತ್ರಿವರ್ಣ ಧ್ವಜವನ್ನು ಮೂಡಿಸಲಾಗುತ್ತಿದೆ.

ವಿಡಿಯೋ

English summary
Indian flag displayed in world's tallest building Dubai's Burj Khalifa on August 15, 2020. Tower lit up with the colours of the Indian flag on 74th Independence Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X