ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಈ ಹುಡುಗಿಗೆ ಪ್ರವೇಶ ನೀಡಲು ಅಮೆರಿಕ ವಿವಿಯಲ್ಲಿ ಪೈಪೋಟಿ!

|
Google Oneindia Kannada News

ದುಬೈ, ಏಪ್ರಿಲ್ 29: ದುಬೈಯಲ್ಲಿ ವಾಸವಿರುವ ಭಾರತೀಯ ಮೂಲಕ ಸಿಮೋನ್ ನೂರಾಲಿ ಇದೀಗ ಅಮೆರಿಕದ ಟಾಪ್ ಏಳು ವಿಶ್ವವಿದ್ಯಾಲಯಗಳ ಪಾಲಿಗೆ ಸೆಲೆಬ್ರಿಟಿ ಆಗಿದ್ದಾರೆ!

ದಾಂತೇವಾಡದ ನಮ್ರತಾ ಜೈನ್ ಸಿವಿಲ್ ಪರೀಕ್ಷೆ ಸಾಧನೆ ಸಾಮಾನ್ಯದ್ದಲ್ಲ ದಾಂತೇವಾಡದ ನಮ್ರತಾ ಜೈನ್ ಸಿವಿಲ್ ಪರೀಕ್ಷೆ ಸಾಧನೆ ಸಾಮಾನ್ಯದ್ದಲ್ಲ

ಅವರಿಗೆ ಪ್ರವೇಶ ನೀಡಲು ಕ್ಯಾಲಿಫೋರ್ನಿಯಾ ವಿವಿ, ಜಾರ್ಜ್ ವಾಶಿಂಗ್ಟನ್ ವಿವಿ, ಜಾನ್ ಹಾಪ್ಕಿನ್ಸ್ ವಿವಿ ಸೇರಿದಂತೆ ಅಮೆರಿಕದ ಏಳು ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳು ತುದಿಗಾಲಿನಲ್ಲಿವೆ.

ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ಅಭ್ಯರ್ಥಿ ಲಕ್ಷ್ಮಿ ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ಅಭ್ಯರ್ಥಿ ಲಕ್ಷ್ಮಿ

17 ವರ್ಷ ವಯಸ್ಸಿನ ಸಿಮೋನ್ ಸಿಮೋನ್ ಅಂತಾರಾಷ್ಟ್ರೀಯ ಸಂಬಂಧ ಮತ್ತು ಅರ್ಥಶಾಸ್ತ್ರ ಎಂಬ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಸಲುವಾಗಿ ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳಿಗೆ ಅರ್ಜಿ ಹಾಕಿದ್ದರು. ಪ್ರತಿಷ್ಠಿತ ಐವಿ ಲೀಗ್ ಸ್ಕೂಲ್, ಪೆನ್ಸಿಲ್ವಿನಿಯಾ ವಿವಿ ಸೇರಿದಂತೆ ಹಲವು ವಿವಿಗಳು ಅವರಿಗೆ ಹೆಚ್ಚಿನ ಶಿಕ್ಷಣಕ್ಕೆ ಆಗಮಿಸುವಂತೆ ಆಮಂತ್ರಣ ನೀಡಿವೆ.

ಭಾರತದಲ್ಲಿ ಮಾನವ ಕಳ್ಳಸಾಗಣೆ ಕುರಿತಂತೆ ಆಕೆ 'ದಿ ಗರ್ಲ್ ಇನ್ ದಿ ಪಿಂಕ್ ರೂಮ್' ಎಂಬ ಪುಸ್ತಕವನ್ನೂ ಬರೆದಿದ್ದು, ಈ ಪುಸ್ತಕವನ್ನು ಹಲವು ಶಿಕ್ಷಕರು ಸಂಶೋಧನೆಗಾಗಿ ಬಳಸುತ್ತಿದ್ದಾರೆ.

7 prestigious US based universities offer Dubai based Indian girl

"ಏಳು ವಿವಿಗಳು ನನ್ನನ್ನು ಆಮಂತ್ರಿಸಿದ್ದರಲ್ಲಿ ನನ್ನ ಹೆಚ್ಚುಗಾರಿಕೆ ಏನೂ ಇಲ್ಲ. ಪ್ರತಿಯೊಬ್ಬರೂ ತಮಗೆ ಏನು ಇಷ್ಟವೋ ಅದನ್ನು ಮಾಡಬೇಕು. ಯಾವುದನ್ನೂ ಒತ್ತಾಯ ಪೂರ್ವಕವಾಗಿ ಮಾಡಬಾರದು" ಎಂಬುದು ಸಿಮೋನ್ ಅಭಿಪ್ರಾಯ.

English summary
Simone Noorali, Dubai based Indian girl hase been offered acceptance letters by 7 prestigious US based universities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X