ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ಜೊತೆ ಕೊರೊನಾ: ಎರಡನ್ನೂ ಗೆದ್ದ 4 ವರ್ಷದ ಬಾಲಕಿ

|
Google Oneindia Kannada News

ದುಬೈ, ಏಪ್ರಿಲ್ 27: ಕೆಲವರು ಕೊರೊನಾವನ್ನು ಧೈರ್ಯವಾಗಿ ಎದುರಿಸಿ ಅದರಿಂದ ಹೊರ ಬರುತ್ತಿದ್ದಾರೆ. ಆದರೆ, ದುಬೈನ ಒಬ್ಬ ಬಾಲಕಿ ಕೊರೊನಾ ಮಾತ್ರವಲ್ಲದೆ ಕ್ಯಾನ್ಸರ್‌ ಅನ್ನು ಕೂಡ ಗೆದ್ದಿದ್ದಾರೆ.

Recommended Video

ತಬ್ಲಿಘಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದೇನು? | Oneindia Kannada

ಶಿವಾನಿ ಎಂಬ ಭಾರತೀಯ ಮೂಲದ 4 ವರ್ಷದ ಹುಡುಗಿ ದುಬೈನಲ್ಲಿ ವಾಸ ಮಾಡುತ್ತಿದ್ದಾರೆ. ಈ ಬಾಲಕಿ ಕಿಡ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕ್ಯಾನ್ಸರ್‌ ರೋಗದ ವಿರುದ್ಧ ಹೋರಾಟ ಮಾಡುತ್ತಿದ್ದ ಈ ಬಾಲಕಿ, ಬಹುತೇಕ ಗುಣಮುಖರಾಗಿದ್ದರು. ಇನ್ನೇನೂ, ಬಾಲಕಿ ಹೊಸ ಜೀವನ ಶುರು ಮಾಡುತ್ತಾಳೆ ಎನ್ನುವ ಖುಷಿ ಇತ್ತು. ಆದರೆ, ಅಷ್ಟರಲ್ಲಿ ಕೊರೊನಾ ಸೋಂಕು ತಗುಲಿತು.

ತನ್ನೂರಿನ ಜನರಿಗೆ ಕೊರೊನಾ ಬರಬಾರದು: ಬಾಲಕಿಯ ದೊಡ್ಡತನತನ್ನೂರಿನ ಜನರಿಗೆ ಕೊರೊನಾ ಬರಬಾರದು: ಬಾಲಕಿಯ ದೊಡ್ಡತನ

ಒಂದು ಕಡೆ ಕೊರೊನಾ ವೈರಸ್‌, ಮತ್ತೊಂದು ಕಡೆ ಕ್ಯಾನ್ಸರ್‌ ಈ ಎರಡು ಮಹಾಮಾರಿ ಪುಟ್ಟ ಬಾಲಕಿ ಎದುರಿಗೆ ಬಂತು. ಆದರೆ, ಈ ಬಾಲಕಿ ಆ ಎರಡು ರೋಗದ ವಿರುದ್ಧ ಹೋರಾಟ ಮಾಡಿ ಗೆದ್ದಿದ್ದಾರೆ.

ತಾಯಿಯಿಂದ ಮಗಳಿಗೆ ಕೊರೊನಾ

ತಾಯಿಯಿಂದ ಮಗಳಿಗೆ ಕೊರೊನಾ

ಶಿವಾನಿ ತಾಯಿ ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ರೋಗಿಗಳ ಸುತ್ತ ಮುತ್ತ ಓಡಾಟ ಮಾಡುತ್ತಿದ್ದ ಇವರಿಗೆ ಅಲ್ಲಿಂದ ಕೊರೊನಾ ವೈರಸ್‌ ತಗುಲಿದೆ. ಹೀಗಾಗಿ, ಅವರ ಪತಿ ಹಾಗೂ ಮಗಳು ಶಿವಾನಿಯನ್ನು ಪರೀಕ್ಷೆ ಮಾಡಲಾಗಿತು. ಇವರಿಗೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದೆ ಇದ್ದರೂ, ಕೊರೊನಾ ಪಾಸಿಟಿವ್ ಎಂದು ವರದಿ ಬಂತು.

ಹೋಮ್‌ ಕ್ವಾರಂಟೈನ್‌ನಲ್ಲಿ ಶಿವಾನಿ

ಹೋಮ್‌ ಕ್ವಾರಂಟೈನ್‌ನಲ್ಲಿ ಶಿವಾನಿ

ಕೊರೊನಾ ಪಾಸಿಟಿವ್ ಬಂದ ಬಾಲಕಿ ಶಿವಾನಿಗೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಯ ನಂತರ, ಎರಡು ಬಾರಿ ಪರೀಕ್ಷೆ ಮಾಡಿದ ಮೇಲೆ ನೆಗೆಟಿವ್ ಎನ್ನುವುದು ಖಚಿತವಾಯಿತು. ನೆಗೆಟಿವ್ ಆಗಿದ್ದರೂ, 20 ದಿನಗಳ ಕಾಲ ಚಿಕಿತ್ಸೆ ನೀಡಿ, 14 ದಿನ ಹೋಮ್‌ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಏಪ್ರಿಲ್ 20 ರಂದು ಶಿವಾನಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಯಿತು.

ಆಂಬುಲೆನ್ಸ್‌ನಲ್ಲಿ ಹೆರಿಗೆ: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿಆಂಬುಲೆನ್ಸ್‌ನಲ್ಲಿ ಹೆರಿಗೆ: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಹೆಚ್ಚಿನ ಜಾಗರುಕತೆ

ಹೆಚ್ಚಿನ ಜಾಗರುಕತೆ

ಶಿವಾನಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇತ್ತು. ಉಸಿರಾಟದ ಸಮಸ್ಯೆಯೂ ಇತ್ತು. ಅಲ್ಲದೆ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವಾನಿಗೆ ಹೆಚ್ಚಿನ ಜಾಗರುಕತೆ ವಹಿಸಿ ಚಿಕಿತ್ಸೆ ನೀಡಲಾಯಿತು. ಸೋಂಕಿನಿಂದ ಆಕೆಗೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಲಾಯಿತು ಎಂದು ವೈದ್ಯ ಡಾ. ಥೋಲ್ಫ್ಕರ್ ಅಲ್ ಬಾಜ್ ಬಾಲಕಿಯ ಆರೋಗ್ಯ ಸ್ಥಿತಿಯ ಬಗ್ಗೆ ವಿವರ ನೀಡಿದ್ದಾರೆ.

ಮಹಾಮಾರಿಯ ವಿರುದ್ಧ ಗೆದ್ದ ಬಾಲಕಿಯ

ಮಹಾಮಾರಿಯ ವಿರುದ್ಧ ಗೆದ್ದ ಬಾಲಕಿಯ

ಕ್ಯಾನ್ಸರ್, ಕೊರೊನಾ ಎರಡು ಮಹಾಮಾರಿಗಳು. ಈ ಎರಡು ರೋಗಗಳು ಎಷ್ಟೋ ಜನರ ಜೀವನವನ್ನು ಬಲಿ ಪಡೆದಿವೆ. ಅದರಲ್ಲಿಯೂ ಕೊರೊನಾ ಈಗ ಇಡೀ ವಿಶ್ವಕ್ಕೆ ಶಾಪವಾಗಿದೆ. ಇಂತಹ ಸಂದರ್ಭದಲ್ಲಿ ನಾಲ್ಕು ವರ್ಷದ ಈ ಬಾಲಕಿ ಎರಡು ದೊಡ್ಡ ರೋಗವನ್ನು ಎದುರಿಸಿದ್ದಾಳೆ. ಬಾಲಕಿಯ ಧೈರ್ಯ, ಆತ್ಮ ವಿಶ್ವಾಸ ನಿಜಕ್ಕೂ ಸ್ಪೂರ್ತಿ ನೀಡುವಂತದ್ದು.

English summary
Shivani, 4 years old girl cancer patient fight against coronavirus in Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X