ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಂಡ ಕಟ್ಟಲು ಹಣವಿಲ್ಲ: ದುಬೈನಲ್ಲೇ ಉಳಿದ ರಾಜಸ್ಥಾನದ ಕಾರ್ಮಿಕರು

|
Google Oneindia Kannada News

ದುಬೈ, ಜುಲೈ 24: ಸೀಮಿತ ವೀಸಾ ಪಡೆದು ದುಬೈಗೆ ಹೋಗಿದ್ದ ರಾಜಸ್ಥಾನದ ಕಾರ್ಮಿಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವೀಸಾದ ಅವಧಿ ಮುಗಿದರೂ ಅಲ್ಲೇ ಉಳಿದಿದ್ದ ಕಾರ್ಮಿಕರ ಮೇಲೆ ದಂಡ ವಿಧಿಸಲಾಗಿದ್ದು, ಹಣ ಪಾವತಿ ಮಾಡಲಾಗದೆ ಅಲ್ಲಿಯೇ ಉಳಿದುಕೊಂಡಿದ್ದಾರೆ.

ಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿ

ವಿಶೇಷ ವಿಮಾನದ ಮೂಲಕ ಜೈಪುರಕ್ಕೆ ಮರಳಲು ಜುಲೈ 17 ರಂದು 40 ಕಾರ್ಮಿಕರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರಲ್ಲಿ ಹತ್ತು ಮಂದಿ ಮಾತ್ರವೇ ದಂಡವನ್ನು ಪಾವತಿಸಿ ದೇಶಕ್ಕೆ ಮರಳಿದ್ದಾರೆ. ಉಳಿದವರ ಬಳಿ ಹಣವಿಲ್ಲದೇ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ.

30 Rajasthani Workers Stuck In UAE Due To Pending Fines

ಕೆಲಸ ಹುಡುಕಿಕೊಂಡು ದುಬೈಗೆ ಹೋಗಿದ್ದ ರಾಜಸ್ಥಾನದ ಕಾರ್ಮಿಕರು ಇದೀಗ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೀಸಾ ಅವಧಿ ಮುಗಿದರೂ ದುಬೈನಲ್ಲಿಯೇ ಉಳಿದುಕೊಂಡಿರುವ ಇವರು ಇದೀಗ ಭಾರತಕ್ಕೆ ಬರಲಾಗದೆ ವಿಲವಿಲ ಒದ್ದಾಡುವಂತಾಗಿದೆ.

'ನಮಗೆ ದಂಡ ಪಾವತಿ ಮಾಡಬೇಕೆಂಬ ಮಾಹಿತಿ ಇರಲಿಲ್ಲ. 2 ಲಕ್ಷದವರೆಗೂ ದಂಡ ವಿಧಿಸಲಾಗಿದೆ. ಇಷ್ಟು ದೊಡ್ಡ ಮೊತ್ತ ನಮ್ಮ ಬಳಿ ಇಲ್ಲ' ಎಂದು ಕಾರ್ಮಿಕರೊಬ್ಬರು ತಿಳಿಸಿದರು.

ಈ ಕಾರ್ಮಿಕರಿಗೆ ಜುಲೈ 27 ರಂದು ಭಾರತಕ್ಕೆ ಮರಳಲು ಮತ್ತೊಂದು ವಿಶೇಷ ವಿಮಾನದಲ್ಲಿ ಟಿಕೆಟ್‌ ಕಾಯ್ದಿರಿಸಲಾಗಿದ್ದು, ಅಲ್ಲಿಯವರೆಗೆ ಪರಿಸ್ಥಿತಿ ಏನಾಗುವುದೋ ಎಂದು ಕಾದುನೋಡಬೇಕಿದೆ.

ನಾಲ್ಕು ದಿನಗಳಿಂದ ಕಾರ್ಮಿಕರು ವಿಮಾನ ನಿಲ್ದಾಣದಲ್ಲಿಯೇ ನೆಲೆಸಿದ್ದ ಕಾರ್ಮಿಕರ ನೆರವಿಗೆ ಸದ್ಯ ದುಬೈನಲ್ಲಿನ ಭಾರತೀಯ ರಾಯಭಾರಿ ಕಚೇರಿ ಬಂದಿದೆ.

English summary
Thirty Indian workers are stranded here in the UAE as they were stopped from boarding a repatriation flight after they failed to pay the fine for staying in the country with expired visas, according to a media report on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X