ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕುಣಿದಾಡುತ್ತಿದ್ದ ಕಂದಮ್ಮನ ಕಾಲುಗಳಲ್ಲಿ ನಡೆದಾಡುವ ತ್ರಾಣ ಕೂಡ ಇಲ್ಲ"

Google Oneindia Kannada News

"ನನ್ನ ಪುಟ್ಟ ದೃಷ್ಟಿ ನೃತ್ಯ ಪ್ರತಿಭೆಯಲ್ಲಿ ಅರಳುತ್ತಿದ್ದಳು ಮತ್ತು ಸಂಗೀತ ಅವಳ ಕಿವಿಗೆ ಬಿದ್ದರೆ ನೃತ್ಯ ಮಾಡದೆ ಇರುವುದಕ್ಕೆ ಅವಳಿಂದ ಸಾಧ್ಯವೇ ಇರುತ್ತಿರಲಿಲ್ಲ. ಆದರೆ ಅವಳಿಗೆ ಐದು ವರ್ಷ ಇದ್ದಾಗ ಎಲ್ಲವೂ ಬದಲಾಯಿತು. ಏನೂ ತೊಂದರೆಯಿಲ್ಲ ಅಂದುಕೊಂಡಿದ್ದ ತಲೆನೋವು ಆ ನಂತರ ಮಾರಣಾಂತಿಕವಾದ ಬ್ರೇನ್ ಟ್ಯೂಮರ್ ಆಯಿತು!"

"ಅವಳಿಗೆ ನಾವು ದೃಷ್ಟಿ ಅಂತ ಹೆಸರಿಟ್ಟೆವು. ಆ ಪದದ ಅರ್ಥ ನಿಮಗೆ ಗೊತ್ತೇ ಇರುತ್ತದೆ. ಆದರೆ ಈಗ ಅವಳು ವಾಸ್ತವದಲ್ಲಿ ದೃಷ್ಟಿ ಇಲ್ಲದಂತಾಗುತ್ತಿದ್ದಾಳೆ; ಆ ಟ್ಯೂಮರ್ ನ ಕಾರಣಕ್ಕೆ. ನಮ್ಮ ಒಬ್ಬಳೇ ಮಗಳು ದೃಷ್ಟಿ. ಆಸ್ಪತ್ರೆಯ ಮಂಚದ ಮೇಲೆ ಮಲಗಿ, ಇಷ್ಟಿಷ್ಟೇ ದೃಷ್ಟಿ ಕಳೆದುಕೊಳ್ಳುತ್ತಾ ಇರುವ ಅವಳನ್ನು ನೋಡುತ್ತಿದ್ದರೆ ಹೃದಯ ಹಿಂಡಿದಂತಾಗುತ್ತದೆ" ಎನ್ನುತ್ತಾರೆ ದೃಷ್ಟಿಯ ತಾಯಿ ರೀತು ಮಲ್ಹೋತ್ರಾ.

2019ರ ಮಾರ್ಚ್ ನಲ್ಲಿ ಮಲ್ಹೋತ್ರಾರ ಅದೃಷ್ಟವನ್ನು ಆ ದೇವರು ಪರೀಕ್ಷೆಗೆ ಒಡ್ಡಿದ. ಅವರ 5 ವರ್ಷದ ಮಗಳು ದೃಷ್ಟಿ ತನಗೆ ತಲೆ ನೋವು, ಎಲ್ಲವೂ ಮಬ್ಬಾಗಿ ಕಾಣಿಸುತ್ತದೆ ಎಂದು ಹೇಳಿಕೊಂಡಿದ್ದಳು. ದೃಷ್ಟಿಯನ್ನು ಒಬ್ಬರು ಕಣ್ಣಿನ ತಜ್ಞರ ಬಳಿ ಕರೆದೊಯ್ಯಲಾಯಿತು. ಆಕೆಗೆ ಏನಾಗಿದೆ ಅಂತ ತಿಳಿದುಕೊಳ್ಳಬೇಕು ಅಂದರೆ ಎಂಆರ್ ಐ ಸ್ಕ್ಯಾನ್ ಮಾಡಿಸಿ ಎಂದು ಅವರು ಸಲಹೆ ನೀಡಿದರು.

ಸ್ಕ್ಯಾನ್ ನಲ್ಲಿ ಗೊತ್ತಾಗಿದ್ದೇನೆಂದರೆ, ದೃಷ್ಟಿಯ ಮೆದುಳಲ್ಲಿ 45 ಮಿ.ಮೀ. ಟ್ಯೂಮರ್ ಇದೆ. ಆ ವೈದ್ಯಕೀಯ ಪರೀಕ್ಷೆ ಮಾಡುವ ಹೊತ್ತಿಗೆ ಆಕೆ ಬಹುತೇಕ ದೃಷ್ಟಿ ಕಳೆದುಕೊಂಡಿದ್ದಳು.

"ನನ್ನ ಮಗಳು ಇಷ್ಟೆಲ್ಲ ಸಮಸ್ಯೆ ಅನುಭವಿಸುತ್ತಿದ್ದಾಳೆ ಎಂದು ಊಹೆ ಕೂಡ ಮಾಡಿರಲಿಲ್ಲ. ಆ ನೋವಿನ ಮಧ್ಯೆಯೂ ಆರಾಮವಾಗಿ ಇದ್ದಳು. ಅವಳ ಜೀವನೋತ್ಸಾಹ ಹಾಗೇ ಉಳಿಯುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ಅಚ್ಚರಿಯಾಯಿತು. ಅವಳು ಅದ್ಭುತವಾದ ಡ್ಯಾನರ್, ಅವಳಿಗೆ ಸಾಹಿತ್ಯದಲ್ಲೂ ಆಸಕ್ತಿಯಿತ್ತು! ಆದರೆ ಈಗ ನೋಡಿ... ತೀರಾ ಕಷ್ಟಪಟ್ಟು ನಡೆಯುತ್ತಾಳೆ! ಪ್ರತಿ ರಾತ್ರಿ ನಿದ್ದೆ ಮಾಡುವ ಮುಂಚೆ ನಾನು ಕಣ್ಣೀರು ಹಾಕದ ದಿನವೇ ಇಲ್ಲ" ಎನ್ನುತ್ತಾರೆ ರೀತು ಮಲ್ಹೋತ್ರಾ.

ದೃಷ್ಟಿ ತನ್ನ ಮೊದಲ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು ಈ ವರ್ಷದ ಮೇ ತಿಂಗಳ 9ನೇ ತಾರೀಕಿನಂದು, ಗುರ್ ಗಾಂವ್ ನಲ್ಲಿರುವ ಅರ್ಟೆಮೀಸ್ ಆಸ್ಪತ್ರೆಯಲ್ಲಿ. ಆಪರೇಷನ್ ನಂತರ ತಿಂಗಳ ಕಾಲ ನಿಗಾ ಮಾಡಲಾಯಿತು. ಶಸ್ತ್ರಚಿಕಿತ್ಸೆಯಿಂದ ಸಮಸ್ಯೆ ಆಯಿತು. ಟ್ಯೂಮರ್ ಸಂಪೂರ್ಣವಾಗಿ ತೆಗೆದು ಹಾಕಿರಲಿಲ್ಲ. ಅ ನಂತರ ಆಗಸ್ಟ್ 1ನೇ ತಾರೀಕು ಅದೇ ಆಸ್ಪತ್ರೆಯಲ್ಲಿ ದೃಷ್ಟಿಗೆ ಮತ್ತೊಂದು ಆಪರೇಷನ್ ಮಾಡಲಾಯಿತು. ಅಕೆ ಸಂಪೂರ್ಣ ಗುಣವಾಗಬೇಕು ಅಂದರೆ ರೇಡಿಯೋ ಥೆರಪಿ ಆಗಬೇಕು ಎಂದು ವೈದ್ಯರು ಹೇಳಿದ್ದಾರೆ.ನಾವೇಗೆ ಸಹಾಯ ಮಾಡಬಹುದು?

ರಿತು ಮತ್ತು ಕಮಲ್ ದಂಪತಿ ತಮ್ಮ ಮಗಳಿಗೆ ದೃಷ್ಟಿ ಎಂದು ಹೆಸರಿಡುವ ಸಮಯದಲ್ಲಿ ಇಂತಹದೊಂದು ದಿನವನ್ನು ಅವರು ಕನಸುಮನಸಿನಲ್ಲೂ ಎಣಿಸಿರಲಿಲ್ಲ. ಈಗ ಚೈತನ್ಯಹೀನ ಸ್ಥಿತಿಯಲ್ಲಿ ಮಲಗಿರುವ ಮಗುವನ್ನು ನೋಡುವ ಸಮಯದಲ್ಲಿ ಅವರು ಅಸಾಧ್ಯ ದುಃಖವನ್ನು ಭರಿಸುತ್ತಿದ್ದಾರೆ. ನಿಮ್ಮ ಪುಟ್ಟ ಸಹಾಯ ದೃಷ್ಟಿಯನ್ನು ಉಳಿಸಲು ಸಹಾಯ ಮಾಡಲಿದೆ. ದೃಷ್ಟಿಯ ವೈದ್ಯಕೀಯ ಸ್ಥಿತಿಯ ಕುರಿತು ಇನ್ನಷ್ಟು ತಿಳಿದುಕೊಂಡು ನೀವು ImpactGuru.com ಮೂಲಕ ಧನ ಸಹಾಯ ಮಾಡಬಹುದು. ಇದರ ಜತೆಗೆ ನಿಮ್ಮ ಕಡೆಯಿಂದ ಫೇಸ್‌ಬುಕ್ ಹಾಗೂ ವಾಟ್ಸಾಪ್‌ ಶೇರ್‌ಗಳು ಕೂಡ ಧನ ಸಹಾಯ ನೀಡಿದಷ್ಟೆ ದಂಪತಿಯ ನೆರವಿಗೆ ಬರುತ್ತವೆ.

"ನಾವು ಆಕೆ ಮತ್ತೆ ನೃತ್ಯ ಮಾಡುವುದನ್ನು, ಇಷ್ಟದ ಸಂಗೀತಕ್ಕೆ ಹೆಜ್ಜೆ ಹಾಕುವುದನ್ನು ನೋಡಬೇಕು. ಬಾಲ್ಯದ ತುಂಟತನಗಳನ್ನು ಹೊಂದಿದ್ದ ಆರೋಗ್ಯಪೂರ್ಣ ದೃಷ್ಟಿ ಮತ್ತೆ ವಾಪಾಸ್ ಬೇಕು. ಆಕೆ ಟ್ಯೂಮರ್‌ನಿಂದ ಸಂಪೂರ್ಣವಾಗಿ ಗುಣಮುಖಿಯಾಗಬೇಕು. ಇದೊಂದು ಬಯಕೆಯನ್ನು ನೆರವೇರಿಸಿಕೊಡಿ, ಮುಂದಿನ ಎಲ್ಲಾ ನಮ್ಮ ಸಮಯವನ್ನು ಆಕೆಯ ಭವಿಷ್ಯಕ್ಕೆ ಮೀಸಲಿಡುತ್ತೇವೆ. ನಮ್ಮನ್ನು ಕೈಬಿಡಬೇಡಿ,'' ಎಂದು ದೃಷ್ಟಿಯ ತಾಯಿ ರಿತು ಮನವಿ ಮಾಡಿಕೊಳ್ಳುತ್ತಾರೆ.

ನೀವು ಸಹಾಯ ನೀಡುವುದಾದರೆ ಈ ಕೆಳಗಿನ ಮಾಹಿತಿ ಮೂಲಕ NEFT/RTGS/IMPS ವರ್ಗಾವಣೆ ಮಾಡಬಹುದು.

- Account number : 700701707061020

- Account name : Drishti Malhotra

- IFSC code : YESB0CMSNOC

(The digit after B is Zero and the letter after N is O for Orange)

OR

For UPI Transaction: supportdrishti6@yesbankltd

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X