• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಸಿಸಿಟಿವಿ ಕಣ್ಗಾವಲು

By Mahesh
|

ಹುಬ್ಬಳ್ಳಿ, ಸೆ.12 : ಪ್ರಯಾಣಿಕರ ಸುರಕ್ಷರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೊದಲ ಆದ್ಯತೆ, ಈ ದೃಷ್ಟಿಯಿಂದ ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳಾ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಕೆಮೆರಾ ಅಳವಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬೆಂಗಳೂರು ನಗರದ ಪ್ರಮುಖ ನಿಲ್ದಾಣಗಳಲ್ಲಿ ಈಗಾಗಲೇ ಸಿಸಿಟಿವಿ ಕೆಮೆರಾ ಅಳವಡಿಕೆ ಆರಂಭಗೊಂಡಿದೆ. ಬಸ್ ನಿಲ್ದಾಣಗಳಲ್ಲಿ ಅನೈತಿಕ ಚಟುವಟಿಕೆಗಳ ಕಡಿವಾಣ, ಕಳ್ಳಕಾಕರ ಮೇಲೆ ನಿಗಾ ಇರಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಇಂಟರ್ ಸಿಟಿ ಬಸ್ ಗೆ ಬೇಡಿಕೆ: ಬಳ್ಳಾರಿ-ತುಮಕೂರು ಸೇರಿದಂತೆ ಇಂಟರ್ ಸಿಟಿ ಬಸ್ ಸೇವೆ ಕಲ್ಪಿಸುವಂತೆ ಬೇಡಿಕೆ ಹೆಚ್ಚುತ್ತಿದೆ. ಕೆಲವು ನಗರಗಳ ಮಧ್ಯೆ ಇಂಟರ್ ಸಿಟಿ ಬಸ್ ಓಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳ ದುಃಸ್ಥಿತಿ ಬಗ್ಗೆ ಸ್ಥಳೀಯರು ಸಚಿವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ರಾಮಲಿಂಗಾ ರೆಡ್ಡಿ, 'ಇನ್ಮುಂದೆ ಯಾವುದೇ ಕಾರಣಕ್ಕೂ ಹಳೆ ಬಸ್ ಗಳನ್ನು ಈ ಭಾಗಕ್ಕೆ ಕೊಡುವುದಿಲ್ಲ. ಮುಂದಿನ ಏಪ್ರಿಲ್ ತಿಂಗಳೊಳಗೆ 750 ಕ್ಕೂ ಅಧಿಕ ಹೊಸ ಬಸ್ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಪ್ರತಿಯೊಂದು ಬಿಟಿಎಸ್ ಬಸ್ಸಿನಲ್ಲೂ ಎರಡೆರಡು CCTV ಕ್ಯಾಮರಾಗಳನ್ನು ಅಳವಡಿಸಲು ಅಂದಿನ ಸಾರಿಗೆ ಸಚಿವ ಆರ್ ಅಶೋಕ್ ಮುಂದಾಗಿದ್ದರು. ನಂತರ ರಾಜ್ಯಾದ್ಯಂತ ಕೆಎಸ್ಆರ್ ಟಿಸಿ ಬಸ್ಸುಗಳಲ್ಲೂ ಅಳವಡಿಸಲು ಇಲಾಖೆಗೆ ಸೂಚಿಸಿದ್ದರು. ಆದರೆ, ಇದು ಇನ್ನೂ ಕಾರ್ಯಗತವಾಗಬೇಕಿದೆ.

ಪ್ರಯಾಣಿಕರತ ಸುರಕ್ಷತೆ, ಸುಖಕರ ಪ್ರಯಾಣಕ್ಕೆ ಅನುವು ಮಾಡಿಕೊಡಲು BMTC ತನ್ನ ಸಿಬ್ಬಂದಿಗೆ ಒಂದಷ್ಟು ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿತ್ತು. ಮಾರ್ಗಸೂಚಿಗಳನ್ನು ಇಲ್ಲಿ ಓದಿ. ಈ ಮಾರ್ಗ ಸೂಚಿಗಳ ನಕಲನ್ನು ಇಂಟರ್ ಸಿಟಿ ಬಸ್ ಗಳಿಗೂ ಅಳವಡಿಸುವ ಚಿಂತನೆ ಇಲಾಖೆಗೆ ಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Transport minister Ramalinga Redddy in Hubli said main bus stands in the state will be fitted with CCTV to monitor illegal activities, KSRTC is prime importance to security of public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more