ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಗೀಶ್ ಗೌಡ ಹತ್ಯೆ; ವಿನಯ್ ಕುಲಕರ್ಣಿ ಸಹೋದರನ ವಿಚಾರಣೆ

|
Google Oneindia Kannada News

ಧಾರವಾಡ, ಸೆಪ್ಟೆಂಬರ್ 14 : ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿ ನಾಯಕ ಯೋಗೀಶ್ ಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. 8 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಸಿಬಿಐ ತನಿಖೆ ಮುಂದುವರೆಸಿದೆ.

ಸೋಮವಾರ ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಇಂದು ವಿಚಾರಣೆಗೆ ಬರುವಂತೆ ಅವರಿಗೆ ಸಿಬಿಐ ನೋಟಿಸ್ ನೀಡಿತ್ತು.

ಯೋಗೀಶ್ ಕೊಲೆ ಪ್ರಕರಣ: ಆರು ಮಂದಿ ಬಂಧಿಸಿದ ಸಿಬಿಐಯೋಗೀಶ್ ಕೊಲೆ ಪ್ರಕರಣ: ಆರು ಮಂದಿ ಬಂಧಿಸಿದ ಸಿಬಿಐ

ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ಆರೋಪಿಗಳ ವಿಚಾರಣೆ ನಡೆಸಿದಾಗ ವಿಜಯ್ ಕುಲಕರ್ಣಿ ಬಗ್ಗೆ ಮಾಹಿತಿ ನೀಡಿದ್ದರು. ಆದ್ದರಿಂದ, ಬೆಂಗಳೂರಿಗೆ ಬಂದು ವಿಚಾರಣೆಗೆ ಹಾಜರಾಗಬೇಕು ಎಂದು ಸಿಬಿಐ ನೋಟಿಸ್ ಕೊಟ್ಟಿತ್ತು.

ಯೋಗೀಶ್ ಗೌಡ ಹತ್ಯೆ: ಸಚಿವ ವಿನಯ್ ಕುಲಕರ್ಣಿ ವಿರುದ್ಧ ದೂರುಯೋಗೀಶ್ ಗೌಡ ಹತ್ಯೆ: ಸಚಿವ ವಿನಯ್ ಕುಲಕರ್ಣಿ ವಿರುದ್ಧ ದೂರು

Yogesh Gowda Murder Case Probe CBI Questions Vijay Kulkarni

ಸಿಬಿಐ ಎಸ್‌ಪಿ ಥಾಮ್ಸನ್ ಜೋಸ್ ನೇತೃತ್ವದ ತಂಡ ವಿಜಯ್ ಕುಲಕರ್ಣಿ ವಿಚಾರಣೆಯನ್ನು ನಡೆಸುತ್ತಿದೆ. 2016ರ ಜೂನ್ 15ರಂದು ಧಾರವಾಡದ ಜಿಮ್ ಬಳಿ ಯೋಗೀಶ್ ಗೌಡರನ್ನು ಹತ್ಯೆ ಮಾಡಲಾಗಿತ್ತು. ಸುಪಾರಿ ಪಡೆದು ಈ ಹತ್ಯೆ ಮಾಡಲಾಗಿದೆ ಎಂಬ ಶಂಕೆ ಇದೆ.

ಕಾಂಗ್ರೆಸ್ ಸೇರಿದ ಯೋಗೀಶ್ ಗೌಡ ಪತ್ನಿ ಮಲ್ಲಮ್ಮಕಾಂಗ್ರೆಸ್ ಸೇರಿದ ಯೋಗೀಶ್ ಗೌಡ ಪತ್ನಿ ಮಲ್ಲಮ್ಮ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಯೋಗೀಶ್ ಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಎಫ್‌ಐಆರ್ ದಾಖಲು ಮಾಡಿದ್ದನ್ನು ಪ್ರಶ್ನಿಸಿ ಬಸವರಾಜ್ ಮುತ್ತಗಿ ಧಾರವಾಡ ಹೈಕೋರ್ಟ್‌ ಪೀಠಕ್ಕೆ ಅರ್ಜಿ ಹಾಕಿದ್ದರು. ಕೋರ್ಟ್ ತನಿಖೆಗೆ ತಡೆ ನೀಡಿತ್ತು.

Recommended Video

Sandalwood ಡ್ರಗ್ ಮಾಫಿಯಾ ಮತ್ತು ತಾರೆಯರ ಬಗ್ಗೆ ಮಾತನಾಡಿದ ಮಾಜಿ DGP | Oneindia Kannada

ಸಿಬಿಐ ಅಧಿಕಾರಿಗಳು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ತನಿಖೆಗೆ ಇದ್ದ ತಡೆಯನ್ನು ತೆರವು ಮಾಡಿತ್ತು. ಬಳಿಕ ತನಿಖೆಯನ್ನು ಸಿಬಿಐ ಮುಂದುವರೆಸಿದೆ.

English summary
The Central Bureau of Investigation (CBI) which is probing Dharwad BJP leader Yogesh Gowda murder case questioned former minister Vinay Kulkarnibrother Vijay Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X