ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕರ್ನಾಟಕಕ್ಕೆ ಸಿಹಿಸುದ್ದಿ ಕೊಟ್ಟ ಭಾರತೀಯ ರೈಲ್ವೆ

|
Google Oneindia Kannada News

ಧಾರವಾಡ, ಜನವರಿ 12: ಭಾರತೀಯ ರೈಲ್ವೆ ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಯಶವಂತಪುರ-ಹಜರತ್ ನಿಜಾಮುದ್ದೀನ್ ರೈಲು ಇನ್ನು ಮುಂದೆ ವಾರದಲ್ಲಿ 5 ದಿನ ಸಂಚಾರ ನಡೆಸಲಿದೆ.

ಯಶವಂತಪುರ-ಹಜರನ್ ನಿಜಾಮುದ್ದೀನ್-ಯಶವಂತಪುರ ನಡುವೆ ಸಂಚಾರ ನಡೆಸುವ ಸಂಪರ್ಕ ಕ್ರಾಂತಿ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರದಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಸಹಾಯಕವಾಗಲಿದೆ.

ಯಶವಂತಪುರ ರೈಲು ನಿಲ್ದಾಣಕ್ಕೆ, ವಿಮಾನ ನಿಲ್ದಾಣ ಮಾದರಿಯ ಲುಕ್ ಯಶವಂತಪುರ ರೈಲು ನಿಲ್ದಾಣಕ್ಕೆ, ವಿಮಾನ ನಿಲ್ದಾಣ ಮಾದರಿಯ ಲುಕ್

ಗದಗ, ಕೊಪ್ಪಳ, ಬಳ್ಳಾರಿ, ಧಾರವಾಡ ಭಾಗದ ಜನರಿಗೆ ಈ ರೈಲು ಸಂಚಾರದಿಂದ ಅನುಕೂಲವಾಗಲಿದೆ. ಈ ಮೊದಲು ಧರ್ಮಾವರಂ, ರಾಯಚೂರು, ಪೆಂಡೆಕಲ್ಲು ಮಾರ್ಗದ ಮೂಲಕ ರೈಲು ಸಂಚಾರ ನಡೆಸುತ್ತಿತ್ತು.

ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಬೇಡಿಕೆಗಳು ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಬೇಡಿಕೆಗಳು

Yesvantpur Hazrat Nizamuddin Express Train To Run 5 Days In Week

ಈಗ ರೈಲು ಹುಬ್ಬಳ್ಳಿ, ಬಳ್ಳಾರಿ, ಪೆಡೆಕಲ್ಲು ಮೂಲಕ ಸಂಚಾರ ನಡೆಸಲಿದೆ. ಇದರಿಂದಾಗಿ ಬೆಂಗಳೂರಿನಿಂದ ಉತ್ತರ ಕರ್ನಾಟಕದ ಕಡೆ ಸಂಚಾರ ನಡೆಸುವ ಜನರಿಗೆ ಉಪಯೋಗವಾಗಲಿದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು, ವೇಳಾಪಟ್ಟಿ ಬದಲಾವಣೆ ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು, ವೇಳಾಪಟ್ಟಿ ಬದಲಾವಣೆ

ಜನವರಿ 11ರಿಂದ 31ರ ತನಕ ಪ್ರತಿ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ರೈಲು ಸಂಚಾರ ನಡೆಸಲಿದೆ. ಯಶವಂತಪುರದಿಂದ ಮಧ್ಯಾಹ್ನ 12.45ಕ್ಕೆ ರೈಲು ಹೊರಡಲಿದೆ. ಸಂಚಾರ ಆರಂಭಿಸಿದ 2ನೇ ದಿನ ಬೆಳಗ್ಗೆ 8.11ಕ್ಕೆ ಹಜರತ್ ನಿಜಾಮುದ್ದೀನ್ ತಲುಪಲಿದೆ.

ಜನವರಿ 14 ರಿಂದ ಫೆಬ್ರವರಿ 3ರ ತನಕ ಹಜರತ್ ನಿಜಾಮುದ್ದೀನ್‌ನಿಂದ ಪ್ರತಿ ಭಾನುವಾರ, ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರದಂದು ರೈಲು ಸಂಚಾರ ನಡೆಸಲಿದೆ. ಹಜರತ್ ನಿಜಾಮುದ್ದೀನ್‌ನಿಂದ ಬೆಳಗ್ಗೆ 8.20ಕ್ಕೆ ಹೊರಡುವ ರೈಲು ಸಂಚಾರ ಆರಂಭಿಸಿದ 2ನೇ ದಿನ ಬೆಳಗಿನ ಜಾವ 5.40ಕ್ಕೆ ಯಶವಂತಪುರಕ್ಕೆ ಬಂದು ತಲುಪಲಿದೆ.

English summary
Good news for north Karnataka people. Yesvantpur-Hazrat Nizamuddin sampark kranti express special train will run 5 days in week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X