ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ ಲಾಕ್ ಡೌನ್: ಹುಬ್ಬಳ್ಳಿ ಯಥಾಸ್ಥಿತಿ, ಈ ಭಾಗದಲ್ಲಿ ಮಾತ್ರ ಅಂಗಡಿ ಓಪನ್ ಗೆ ಅನುಮತಿ

|
Google Oneindia Kannada News

ಧಾರವಾಡ, ಏಪ್ರಿಲ್ 29: ಕೆಲವೊಂದು ಜಿಲ್ಲೆಗಳಲ್ಲಿ, ಲಾಕ್ ಡೌನ್ ವೇಳೆ ಯಾವ ಯಾವ ಚಟುವಟಿಕೆಗಳಿಗೆ ಅನುಮತಿ ನೀಡಬೇಕೆನ್ನುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿಗಳಿಗೆ ಬಿಡಲಾಗಿದೆ.

ಈ ಸಂಬಂಧ, ಧಾರವಾಡ ಜಿಲ್ಲಾಡಳಿತದ ಜೊತೆ ಸಭೆ ನಡೆಸಿದ ಉಸ್ತುವಾರಿ ಜಗದೀಶ್ ಶೆಟ್ಟರ್, ಮಾಧ್ಯಮವಗಳಿಗೆ ಸಭೆಯ ವಿವರವನ್ನು ನೀಡಿದ್ದಾರೆ. ಅದು ಹೀಗಿದೆ.

What Is Available In Dharwad District? Incharge Jagadish Shettar Briefs Media

ಮದ್ಯ ಮಾರಾಟಕ್ಕೆ ಖಾಯಂ ನಿಷೇಧ ಹೇರಿ ಎಂದ ಬಿಜೆಪಿ ಶಾಸಕ!ಮದ್ಯ ಮಾರಾಟಕ್ಕೆ ಖಾಯಂ ನಿಷೇಧ ಹೇರಿ ಎಂದ ಬಿಜೆಪಿ ಶಾಸಕ!

> ಜಿಲ್ಲೆ ಆರೆಂಜ್ ಝೋನ್ ನಲ್ಲಿದೆ. ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಆರಂಭಕ್ಕೆ ಅವಕಾಶ ನೀಡಲಾಗಿದೆ. ಮಹಾನಗರಪಾಲಿಕೆ ವ್ಯಾಪ್ತಿ‌ ಹಾಗೂ ಕಂಟೇನ್ಮೆಂಟ್ ಏರಿಯಾ ಹೊರಗಿರುವ ಪ್ರದೇಶದಲ್ಲಿ ಕೈಗಾರಿಕೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

> ಗ್ರಾಮೀಣ ಭಾಗದಲ್ಲಿ ನೋಂದಾಯಿತ ಅಂಗಡಿಗಳ ಆರಂಭಕ್ಕೆ ಅನುವು.

> ನವಲಗುಂದ, ಅಣ್ಣಿಗೇರಿ, ಕಲಘಟಗಿ, ಅಳ್ನಾವರ, ಕುಂದಗೋಳ, ಧಾರವಾಡ ಗ್ರಾಮೀಣ ಭಾಗದಲ್ಲಿ ಅಂಗಡಿ ಒಪನ್ ಮಾಡಲು ಅನುಮತಿ.

> ಹುಬ್ಬಳ್ಳಿಯಲ್ಲಿ ಕಂಟೇನ್ಮೆಂಟ್ ವಲಯ ಇನ್ನೂ ಇದೆ. ಹಾಗಾಗಿ, ಹುಬ್ಬಳ್ಳಿ ನಗರದಲ್ಲಿ ಯಾವುದಕ್ಕೂ ವಿನಾಯತಿ ಇಲ್ಲ.

> ಧಾರವಾಡದ ಕಂಟೇನ್ಮೆಂಟ್ ವಲಯ ತೆರವು ಆಗಿದೆ. ಧಾರವಾಡ ನಗರದಲ್ಲಿ ಯಾವ ಅಂಗಡಿ ಓಪನ್ ಮಾಡಬಹುದು ಎನ್ನುವುದನ್ನು ಜಿಲ್ಲಾಧಿಕಾರಿಗಳು ತಿಳಿಸುತ್ತಾರೆ.

> ಸೋಮವಾರ, ಮಂಗಳವಾರ, ಬುಧವಾರ ಗುರುವಾರ ಮಾತ್ರ, ಬೆಳಗ್ಗೆ 10ರಿಂದ ಸಂಜೆ 6ರವರೆಗೆ, ಧಾರವಾಡದಲ್ಲಿ ಅಂಗಡಿ ತೆರೆಯಲು ಅವಕಾಶ.

ಲಾಕ್‌ಡೌನ್‌ನಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳು ತವರಿಗೆ ಹೋಗಲು ಕೇಂದ್ರ ಸಮ್ಮತಿಲಾಕ್‌ಡೌನ್‌ನಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳು ತವರಿಗೆ ಹೋಗಲು ಕೇಂದ್ರ ಸಮ್ಮತಿ

> ಗ್ರಾಮೀಣ ಭಾಗದಲ್ಲಿ ನರೇಗಾ, ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭ. ಕಾಮಗಾರಿ ಸ್ಥಳದಲ್ಲೇ ಕ್ಯಾಂಪ್ ಮಾಡಿ ಕಾರ್ಮಿಕರನ್ನು ಇಟ್ಟುಕೊಳ್ಳಬೇಕು.

> ಲಾಕ್‌ಡೌನ್ ಸಡಿಲಿಕೆ ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು. ವಿನಾಕಾರಣ ಓಡಾಡಬಾರದು. ಜನ ಶಿಸ್ತು ಪಾಲಿಸಬೇಕು.

English summary
What Is Available In Dharwad District? Incharge Jagadish Shettar Briefs Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X