ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಅಭಿಯಾನ; ಮಾಸ್ಕ್ ಧರಿಸಿ, ಇಲ್ಲಾ ದಂಡ ಕಟ್ಟಿ!

|
Google Oneindia Kannada News

ಧಾರವಾಡ, ನವೆಂಬರ್ 25 : ಕೋವಿಡ್ ಇಳಿಮುಖವಾಗಿದೆ ಎಂದು ಭಾವಿಸಿ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದೇ ಸಂಚಾರ ನಡೆಸುತ್ತಿದ್ದಾರೆ. ಆದ್ದರಿಂದ, ಧಾರವಾಡ ಜಿಲ್ಲಾಡಳಿತ ಹೊಸ ಅಭಿಯಾನವನ್ನು ಆರಂಭಿಸಿದೆ.

ಧಾರವಾಡ ಜಿಲ್ಲಾಧಿಕಾರಿ ನಿತೀಶ ಪಾಟೀಲ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. "ಜಿಲ್ಲೆಯಲ್ಲಿ ಮಾಸ್ಕ್ ಅಭಿಯಾನವನ್ನು ಚುರುಕುಗೊಳಿಸಿ, ಪ್ರತಿದಿನ ತಪ್ಪದೇ ಕಾರ್ಯಾಚರಣೆ ಕೈಗೊಳ್ಳಬೇಕು" ಎಂದು ಸೂಚನೆಯನ್ನು ನೀಡಿದ್ದಾರೆ.

ಧಾರವಾಡ: ಸೈಕಲ್ ಕವಿ ಎಂದೇ ಖ್ಯಾತರಾಗಿದ್ದ ಐರಸಂಗ ನಿಧನ ಧಾರವಾಡ: ಸೈಕಲ್ ಕವಿ ಎಂದೇ ಖ್ಯಾತರಾಗಿದ್ದ ಐರಸಂಗ ನಿಧನ

"ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲನೆ ಮಾಡದೆ ಗುಂಪು ಗೂಡುವುದು, ಸಂಚರಿಸುವುದು ಸಾಮಾನ್ಯವಾಗುತ್ತಿದೆ. ಈ ರೀತಿಯ ವರ್ತನೆಗಳಿಂದ ನಾವು ಕೊರೊನಾದ ಎರಡನೇ ಅಲೆಗೆ ತುತ್ತಾಗುವ ಸಾಧ್ಯತೆ ಇದೆ" ಎಂದು ಹೇಳಿದರು.

ಕೋವಿಡ್ ಏರಿಕೆ: ಮೂರು ರಾಜ್ಯಗಳಿಗೆ ಕೇಂದ್ರದ ಉನ್ನತ ತಂಡಕೋವಿಡ್ ಏರಿಕೆ: ಮೂರು ರಾಜ್ಯಗಳಿಗೆ ಕೇಂದ್ರದ ಉನ್ನತ ತಂಡ

Wear Mask Or Pay Fine Campaign

"ಜಾಗೃತಿ, ತಿಳುವಳಿಕೆ ನೀಡಿದರೂ ಕೆಲವು ಜನರು ಉದಾಸೀನತೆ ತೋರುತ್ತಿದ್ದಾರೆ. ಆದ್ದರಿಂದ ಕೊರೊನಾ ಜಾಗೃತಿ ಹಾಗೂ ಮಾಸ್ಕ್ ಅಭಿಯಾನಕ್ಕಾಗಿ ರಚಿಸಿರುವ ಅಧಿಕಾರಿಗಳ ತಂಡ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಪರಿಣಾಮಕಾರಿಯಾಗಿ ಅಭಿಯಾನ ಜಾರಿಗೊಳಿಸಬೇಕು" ಎಂದು ತಿಳಿಸಿದರು.

ನಿರ್ದಿಷ್ಟ ದರ ಮಾದರಿ ಇಲ್ಲದಿರುವುದೇ ಕೋವಿಡ್ ಸಾವಿನ ಹೆಚ್ಚಳಕ್ಕೆ ಕಾರಣ: ಸಮಿತಿ ಕಿಡಿನಿರ್ದಿಷ್ಟ ದರ ಮಾದರಿ ಇಲ್ಲದಿರುವುದೇ ಕೋವಿಡ್ ಸಾವಿನ ಹೆಚ್ಚಳಕ್ಕೆ ಕಾರಣ: ಸಮಿತಿ ಕಿಡಿ

250 ರೂ. ದಂಡ; ಮಾಸ್ಕ್ ಧರಿಸದೆ ಸಂಚರಿಸುವವರಿಗೆ ಸ್ಥಳದಲ್ಲಿಯೇ 250 ರೂ. ದಂಡ ವಿಧಿಸಬೇಕು. ದಂಡ ಕಟ್ಟಿದ ವ್ಯಕ್ತಿ ಮಾಸ್ಕ್ ಧರಿಸದೇ ತಪ್ಪನ್ನು ಪುನರಾವರ್ತಿಸಿದರೆ ಮತ್ತೇ ಅದೇ ರೀತಿ ದಂಡ ವಿಧಿಸಬೇಕು. ಜನರಿಗೆ ಮಾಸ್ಕ್ ಧರಿಸಿ, ಇಲ್ಲಾ ದಂಡ ಕಟ್ಟಿ ಎಂಬ ಕಠಿಣ ಸಂದೇಶವನ್ನು ತಲುಪಿಸಬೇಕೆಂದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಉಪ ಪೊಲೀಸ್ ಆಯುಕ್ತ ರಾಮರಾಜನ್ ಕೆ. ಮಾತನಾಡಿ, "ಅವಳಿ ನಗರದಲ್ಲಿ ಮಾಸ್ಕ್ ಧರಿಸದೇ ಸಂಚರಿಸುವವರಿಗೆ ತಕ್ಷಣ ದಂಡ ವಿಧಿಸಲಾಗುವುದು. ಪ್ರಮುಖ ವೃತ್ತ, ಬಸ್‍ ನಿಲ್ದಾಣ, ಸರ್ಕಾರಿ ಕಚೇರಿ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ನಿರಂತರವಾಗಿ ಮಾಸ್ಕ್ ಧರಿಸದವರ ವಿರುದ್ಧ ಕಾರ್ಯಾಚರಣೆ ಮಾಡಲಾಗುವುದು" ಎಂದರು.

ನವೆಂಬರ್ 24ರಂದು ಧಾರವಾಡ ಜಿಲ್ಲೆಯಲ್ಲಿ 15 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 21,290. ಸಕ್ರಿಯ ಪ್ರಕರಣಗಳ ಸಂಖ್ಯೆ 118.

Recommended Video

ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲವಾಗಲಿದೆ ಎಂದ ಕೋಡಿ ಮಠದ ಶ್ರೀಗಳು | Oneindia Kannada

English summary
Dharwad district administration will continue the wear mask or pay fine campaign to control COVID 19 in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X