ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಉಪಚುನಾವಣೆ ಬಳಿಕ ನಾವೇ ಕಿಂಗ್ ಮೇಕರ್"; ಕೋನರೆಡ್ಡಿ ಭವಿಷ್ಯ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಡಿಸೆಂಬರ್ 3: "ಉಪಚುನಾವಣೆ ಬಳಿಕ ನಾವೇ ಕಿಂಗ್ ಮೇಕರ್" ಎಂದು ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, "ಈ ಉಪಚುನಾವಣೆಯಲ್ಲಿ ಯಾವುದೇ ಪಕ್ಷಗಳಿಗೂ ಹೆಚ್ಚು ಸೀಟ್ ಗಳು ಬರುವುದಿಲ್ಲ. ಹೀಗಾಗಿ ಮತ್ತೊಮ್ಮೆ ಜೆಡಿಎಸ್ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗಲಿದೆ" ಎಂದು ಸರ್ಕಾರ ರಚನೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.

15 ಜನ ಅನರ್ಹರಿಗೆ ಮತದಾರರೇ ತಕ್ಕ ಪಾಠ ಕಲಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷಾಂತರವನ್ನು ತಡೆಗಟ್ಟಬೇಕಾದರೆ ಅನರ್ಹರನ್ನು ಸೋಲಿಸಬೇಕು. ಈ ಉಪಚುನಾವಣೆಯಲ್ಲಿ ಯಾವುದೇ ಪಕ್ಷಗಳಿಗೂ ಹೆಚ್ಚು ಸೀಟ್ ಗಳು ಬರುವುದಿಲ್ಲ.‌ 9ನೇ ತಾರೀಖು ಒಳ್ಳೆಯ ದಿನ, ಅವತ್ತು ಜೆಡಿಎಸ್ ಪಕ್ಷ ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತೆ. ಮೈತ್ರಿ ಸರ್ಕಾರ ರಚನೆ ವಿಚಾರದ ಬಗ್ಗೆ 9ನೇ ತಾರೀಖಿನ ನಂತರ ವಿಚಾರ ಮಾಡುತ್ತೇವೆ. ಈ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಹೇಳಿದ್ದಾರೆ" ಎಂದರು.

15 ಕ್ಷೇತ್ರದ ಉಪ ಚುನಾವಣೆ; ಸ್ಪಷ್ಟನೆ ನೀಡಿದ ಜೆಡಿಎಸ್15 ಕ್ಷೇತ್ರದ ಉಪ ಚುನಾವಣೆ; ಸ್ಪಷ್ಟನೆ ನೀಡಿದ ಜೆಡಿಎಸ್

We Are Kingmakers After By Elections Said Konareddy

ಇದೇ ವೇಳೆಯಲ್ಲಿ ಬಸವರಾಜ ಪಾಟೀಲ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಕೋನರೆಡ್ಡಿ, "ಮೊದಲು ನಿಮ್ಮ ಪರಿಸ್ಥಿತಿಗಳನ್ನು ನೋಡಿ, ವೈಯಕ್ತಿಕ ಟೀಕೆ ಮಾಡುವುದು ಶೋಭೆ ಅಲ್ಲ. ‌ಈಶ್ವರಪ್ಪನವರು ಮಾತನಾಡುತ್ತಾರೆ, ಅದು ಯಾವ ಮಟ್ಟಕ್ಕೆ ಎನ್ನುವುದು ಇವತ್ತಿಗೂ ಗೊತ್ತಾಗಿಲ್ಲ.‌ ಏನೇ ಆದರೂ ನೂರಕ್ಕೆ ನೂರರಷ್ಟು ನಾವೇ ಕಿಂಗ್ ಮೇಕರ್ ಆಗ್ತಿವಿ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ್ರೆ ಸಿಎಂ ಸ್ಥಾನ ಯಾರಿಗೆ ಕೊಡಬೇಕು ಎನ್ನುವುದನ್ನು ಹೈಕಮಾಂಡ್ ತಿರ್ಮಾನ ಮಾಡುತ್ತೆ. ಆದರೆ ನಾನು ಯಾರಿಗೆ ಕೊಟ್ಟರೂ ಬೇಡ ಎನ್ನಲ್ಲ. ನಮ್ಮ ಪಕ್ಷಕ್ಕೆ ಸಿಎಂ ಸ್ಥಾನ ನೀಡಿದ್ರೆ ಒಳ್ಳೆದು ಎನ್ನುವುದು ನನ್ನ ಅಭಿಪ್ರಾಯ" ಎಂದರು.

English summary
"After the by-election, we are the King Makers," said former JDS legislator NH Konareddy in dharwad,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X