• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡ : ಹಾಲಿನ ಪ್ಯಾಕೆಟ್ ಮೂಲಕ ಮತದಾನದ ಜಾಗೃತಿ

|

ಧಾರವಾಡ, ಮಾರ್ಚ್ 18 : ಧಾರವಾಡ ಜಿಲ್ಲಾಡಳಿತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನವಾಗಬೇಕು ಎಂದು ಪಣತೊಟ್ಟಿದೆ. ಏಪ್ರಿಲ್ 23ರಂದು ಮತದಾನ ಮಾಡುವಂತೆ ಹಾಲಿನ ಪ್ಯಾಕೆಟ್‌ಗಳ ಮೂಲಕ ಜನರಿಗೆ ಸಂದೇಶ ರವಾನಿಸಲಾಗುತ್ತಿದೆ.

ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಹಾಲು ಒಕ್ಕೂಟದ ಹಾಲು, ಮೊಸರು, ಮಜ್ಜಿಗೆ ಸೇರಿದಂತೆ ಇತರ ಉತ್ಪನ್ನಗಳ ಪ್ಯಾಕೇಟ್‌ ಮೂಲಕವು ಮತದಾರರನ್ನು ಜಾಗೃತಿ ಮಾಡುವ ಕಾರ್ಯವನ್ನು ಜಿಲ್ಲಾ ಸ್ವಿಪ್ ಸಮಿತಿ ಕೈಗೊಂಡಿದೆ.

ಧಾರವಾಡಲ್ಲಿ 16,88,067 ಮತದಾರರು, ಏ.23ರಂದು ಮತದಾನ

ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಲು 1950 ಉಚಿತ ಸಹಾಯವಾಣಿಗೆ ಕರೆ ಮಾಡಿ ಎಂಬ ಸಂದೇಶವನ್ನು ಮುದ್ರಿಸಿ ವಿತರಣೆ ಮಾಡಲಾಗುತ್ತಿದೆ. ಏಪ್ರಿಲ್ 23ರಂದು ಧಾರವಾಡ ಜಿಲ್ಲೆಯಲ್ಲಿ ಮತದಾನ ನಡೆಯುತ್ತಿದೆ.

ಧಾರವಾಡ ಲೋಕಸಭಾ ಕ್ಷೇತ್ರದ ಪರಿಚಯ

ಧಾರವಾಡದ ಕೆಎಂಎಫ್ ಘಟಕ ಪ್ರತಿ ದಿನ ಸುಮಾರು 90 ಸಾವಿರ ಲೀಟರ್ ಹಾಲು, 10 ಸಾವಿರ ಲೀಟರ್ ಮೊಸರು, 3 ಸಾವಿರ ಲೀಟರ್ ಮಜ್ಜಿಗೆ ಹಾಗೂ 20 ಸಾವಿರ ಲೀಟರ್ ಲಸ್ಸಿಯನ್ನು ಉತ್ಪಾದಿಸುತ್ತಿದೆ.

ಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ 2 ಹಂತದ ಮತದಾನ

ಈ ಎಲ್ಲಾ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಮತದಾನ ಮಾಡಿ ಎಂಬ ಮಾಹಿತಿ ಮುದ್ರಿಸಲಾಗಿದೆ. ಕಳೆದ ಒಂದು ವಾರದಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ಮತದಾನದ ದಿನದವರೆಗೂ ಇದು ಮುಂದುವರೆಯಲಿದೆ ಎಂದು ಧಾರವಾಡ ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಹೆಗಡೆ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dharwad district administration sending message of compulsory voting through milk packets with the help of Dharwad Co-operative milk producers Union Ltd. (DAMUL). Lok sabha elections 2019 voting will he held on April 23.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more