• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಟ್ಟರಾಜ ಸೇವಾ ಸಮಿತಿಗೆ ವಿಶ್ವನಾಥ್ ನೇಮಕ

|

ಧಾರವಾಡ, ಜೂನ್ 11 : ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಧಾರವಾಡ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಪೂಜ್ಯರ ಅಭಿಯಾನಿಯಾದ ವಿಶ್ವನಾಥ ಸುಳ್ಳಳ್ಳಿ ಅವರನ್ನು ನೇಮಕಮಾಡಲಾಗಿದೆ. ಇವರ ಅಧಿಕಾರಾವಧಿ ಮೂರು ವರ್ಷಗಳಾಗಿರುತ್ತದೆ ಎಂದು ಪುಟ್ಟರಾಜ ಸೇವಾ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಪದ್ಮ ಭೂಷಣ ಡಾ.ಪಂ.ಪುಟ್ಟರಾಜರ ಜೀವನ ಸಾಧನೆ ಸಂದೇಶವನ್ನು ಪ್ರಸಾರ ಮಾಡುವ ಉದ್ದೇಶದಿಂದ ಡಾ.ಪಂ. ಪುಟ್ಟರಾಜ ಸೇವಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಸೇವಾ ಸಮಿತಿಯ ಧಾರವಾಡ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಸೃಸ್ಥಿ ಗ್ರೂಪ್ ಆಫ್ ಕಂಪನಿಯ ಮ್ಯಾನೆಜಿಂಗ್ ಡೈರಕ್ಟರ್, ವಿಶ್ವನಾಥ ಸುಳ್ಳಳ್ಳಿ ಅವರನ್ನು ನೇಮಕ ಮಾಡಲಾಗಿದೆ.

ಇತ್ತಿಚೆಗೆ ನಡೆದ ಸೇವಾ ಸಮಿತಿಯ ಕೇಂದ್ರ ಕಾರ್ಯಕಾರಣಿ ಸಮಿತಿಯ ಒಪ್ಪಿಗೆಯಂತೆ ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥ ಸುಳ್ಳಳ್ಳಿ ಮತ್ತು ರಾಜ್ಯ ಸಂಚಾಲಕರಾಗ ಪಂ.ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಅವರನ್ನು ನೇಮಕ ಮಾಡಲಾಗಿದೆ. ಈ ಜೂನ್ 11 ಬುಧವಾರದಿಂದ ಜಾರಿಯಲ್ಲಿರುತ್ತದೆ. [ಧಾರವಾಡದಲ್ಲಿ ಅಧಿಕಾರ ಸ್ವೀಕರಿಸಿದ ರವೀಂದ್ರನಾಥ್]

ನೂತನವಾಗಿ ಆಯ್ಕೆ ಆದವರ ಅಧಿಕಾರಾವಧಿ ಮೂರು ವರ್ಷ ಅಥವಾ ಕಾರ್ಯಕಾರಿಣಿ ಸಮಿತಿಯು ಒಪ್ಪುವವರೆಗೆ ಇರುತ್ತದೆ ಹಾಗೂ ಪೂರ್ಣ ಪ್ರಮಾಣದ ಜಿಲ್ಲಾ ಘಟಕವನ್ನು ರಚಿಸಲು ಮತ್ತು ಎಲ್ಲ ತಾಲೂಕುಗಳಲ್ಲಿ ಪೂಜ್ಯ ಗುರು ಪುಟ್ಟರಾಜರ ಕಟ್ಟಾಭಿಮಾನಿ ಭಕ್ತರನ್ನು ಗುರುತಿಸಿ ಆಸಕ್ತ ಅಭಿಮಾನಿ ಭಕ್ತರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲು ಅಧಿಕಾರ ನೀಡಲಾಗಿರುತ್ತದೆ.

ಈ ಸಮಿತಿಯ ಸದಸ್ಯರಾಗಲು ಜಿಲ್ಲೆಯ ಪೂಜ್ಯರ ಅಭಿಮಾನಿ ಭಕ್ತರು ಇನ್ನು ಮುಂದೆ ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಧಾರವಾಡ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಸುಳ್ಳಳ್ಳಿ ಅವರನ್ನು 8494946375 ನಂಬರ್ ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದು ಸೇವಾ ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ವಸಂತ ಪಡಗದ ನೇಮಕ : ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ, ಗದಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಮಾಜ ಸೇವಕ, ಪೂಜ್ಯರ ಅಭಿಮಾನಿ ಭಕ್ತರಾದ ಶ್ರೀ ವಸಂತ ಪಡಗದ ನೇಮಕವಾಗಿದ್ದರೆ ಎಂದು ಜಿಲ್ಲಾ ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

English summary
Vishwanath Sullalli appointed as organizing secretary for Pandit Puttaraj seva samiti Dharwad and Vasantha Padagada appointed as president of Gadag seva samiti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X