• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡ: ಬಿಜೆಪಿ ಸೇರ್ಪಡೆ ಕುರಿತು ಸ್ವತಃ ಸ್ಪಷ್ಟನೆ ಕೊಟ್ಟ ವಿನಯ್ ಕುಲಕರ್ಣಿ

By ಧಾರವಾಡ ಪ್ರತಿನಿಧಿ
|

ಧಾರವಾಡ, ಅಕ್ಟೋಬರ್ 8: ಉತ್ತರ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರು ಕಾಂಗ್ರೆಸ್ ಗೆ ಬೈ ಹೇಳುತ್ತಿದ್ದಾರೆ ಎಂಬ ಮಹತ್ವದ ಸುದ್ದಿ ಹರಿದಾಡುತ್ತಿತ್ತು. ಆ ಪ್ರಭಾವಿ ನಾಯಕ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾಗಿತ್ತು.

ಆದರೆ ಬಿಜೆಪಿ ಪಕ್ಷ ಸೇರ್ಪಡೆ ಸುದ್ದಿಗೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರು ಇಂದು ಸ್ಪಷ್ಟನೆ ಕೊಟ್ಟಿದ್ದು, ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ, ನಾನು ಯಾವ ಕೇಂದ್ರ ಬಿಜೆಪಿ ನಾಯಕರನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ದಿನದಲ್ಲಿ ಉಪ ಚುನಾವಣಾ ಕಲಿಗಳು ಅಂತಿಮ: ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿ ಸೇರುವ ಯಾವುದೇ ಪ್ರಸ್ತಾಪವೂ ನನ್ನ ಮುಂದೆ ಬಂದಿಲ್ಲ. ಎಲ್ಲವೂ ಮಾಧ್ಯಮಗಳ ಊಹಾಪೋಹ. ನಾನು ಬೆಳೆದ ಬಂದ ದಾರಿಯೇ ಬೇರೆ ಎಂದು ಹೇಳಿದರು.

ಮೊದಲ ಬಾರಿಗೆ ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದು, ಹೀಗಾಗಿ ಕಾರ್ಯಕರ್ತರು ಮತ್ತು ಎಲ್ಲ ಸಮಾಜದ ಜನರು ನನ್ನ ಜೊತೆಯಲ್ಲಿದ್ದಾರೆ. ಕಾರ್ಯಕರ್ತರನ್ನು ಕೇಳದೇ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲವೆಂದರು.

ಬಿಜೆಪಿ ಎಂಎಲ್ಸಿ ಸಿ.ಪಿ ಯೋಗೇಶ್ವರ್ ಕುದುರೆ ಖರೀದಿಗೆ ನನ್ನ ಹಾಲಿನ ಡೈರಿಗೆ ಬಂದಿದ್ದರು. ನನ್ನಿಂದ ಆರು ಕುದುರೆ ತೆಗೆದುಕೊಂಡು ಹೋಗಿದ್ದಾರೆ. ಅದು ಖಾಸಗಿ ಭೇಟಿಯಾಗಿದ್ದು, ರಾಜಕೀಯ ಬಗ್ಗೆ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.

   Kusuma : ರಾಜಕೀಯ ವ್ಯಾಪಾರ ಅಲ್ಲ ,ಪ್ರತಿ ಸ್ಪರ್ಧಿ ಬಗ್ಗೆ NO TENSION | Oneindia Kannada

   ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಅಂತಾ ಸುದ್ದಿ ಆಗುತ್ತಿದೆ. ಬಿಜೆಪಿ ಸೇರಿದರೂ ಈ ಕೇಸ್ ಗಳು ಇದ್ದೆ ಇರುತ್ತವೆ. ನನ್ನ ಪರವಾಗಿ ಯಾವುದೇ ಸ್ವಾಮೀಜಿಗಳು ಭಾರತೀಯ ಜನತಾ ಪಕ್ಷದ ಜೊತೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

   English summary
   Former minister and Congress leader Vinay Kulkarni today made it clear that I have not met any of the central BJP leaders.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X