• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ-ಧಾರವಾಡ ಮಂದಿಗೆ ರೈಲ್ವೆಯಿಂದ ಸಿಹಿ ಸುದ್ದಿ

|

ಧಾರವಾಡ, ಅಕ್ಟೋಬರ್ 15: ಉಣಕಲ್- ಧಾರವಾಡ ನಡುವಿನ ಜೋಡಿ ಹಳಿ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಪರಿಶೀಲನೆ ನಡೆಸಿದರು. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ ಹುಬ್ಬಳ್ಳಿ-ಧಾರವಾಡ ನಡುವಿನ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ.

ಗುರುವಾರ ಉಣಕಲ್ ಮತ್ತು ಧಾರವಾಡದ ನಡುವಿನ ಜೋಡಿ ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆ ನಡೆಸಿದರು. ಆಯುಕ್ತರು ಒಪ್ಪಿಗೆ ನೀಡಿದ ಬಳಿಕ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ.

ಹುಬ್ಬಳ್ಳಿ-ಧಾರವಾಡ ನಡುವೆ 30 ನಿಮಿಷದಲ್ಲಿ ಪ್ರಯಾಣಿಸಿ

ಉಣಕಲ್-ಧಾರವಾಡ ಮತ್ತು ಹುಬ್ಬಳ್ಳಿ-ಉಣಕಲ್ ನಡುವಿನ ಜೋಡಿ ಹಳಿ ಮಾರ್ಗದ ಕಾಮಗಾರಿ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗಬೇಕು. ಆಗ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ರೈಲಿನಲ್ಲಿ 20 ರಿಂದ 30 ನಿಮಿಷದಲ್ಲಿ ಸಂಚಾರ ನಡೆಸಬಹುದಾಗಿದೆ.

ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯಕ್ಕೆ ಬಂದ 'ಕಾಮನ್ ಮ್ಯಾನ್'

ಹೊಸಪೇಟೆ ಮತ್ತು ಗೋವಾ ವಾಸ್ಕೋ ನಡುವಿನ ಜೋಡಿ ಹಳಿ ಕಾಮಗಾರಿಯ ಭಾಗವಾಗಿ ಈ ಮಾರ್ಗವನ್ನು ಜೋಡಿಹಳಿಯಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಮತ್ತೊಂದು ರೈಲು ಬಂದಾಗ ಕ್ರಾಸಿಂಗ್‌ಗಾಗಿ ಕಾಯುವುದು ತಪ್ಪಲಿದೆ. ಆದ್ದರಿಂದ, ಪ್ರಯಾಣದ ಅವಧಿ ಕಡಿಮೆಯಾಗಲಿದೆ.

ಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ

16 ಕಿ. ಮೀ. ರೈಲು ಮಾರ್ಗ

16 ಕಿ. ಮೀ. ರೈಲು ಮಾರ್ಗ

ರೈಲ್ವೆ ಇಲಾಖೆ ಧಾರವಾಡ-ಉಣಕಲ್ ನಡುವಿನ 16 ಕಿ. ಮೀ. ಜೋಡಿ ಹಳಿ ನಿರ್ಮಾಣ ಕಾಮಗಾರಿಯನ್ನು 62.17 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿತ್ತು. ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಬೇರೆ ರೈಲುಗಳ ಕ್ರಾಸಿಂಗ್‌ಗಾಗಿ ಧಾರವಾಡ ಅಥವ ಉಣಕಲ್‌ನಲ್ಲಿ ಕಾಯವುದು ಬೇಕಿಲ್ಲ. ಇದರಿಂದಾಗಿ ಪ್ರಯಾಣದ ಅವಧಿ ಕಡಿತವಾಗಲಿದೆ.

ಸುರಕ್ಷತಾ ಆಯುಕ್ತರ ಪರಿಶೀಲನೆ

ಸುರಕ್ಷತಾ ಆಯುಕ್ತರ ಪರಿಶೀಲನೆ

ಗುರುವಾರ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಧಾರವಾಡ-ಉಣಕಲ್ ನಡುವಿನ ಮಾರ್ಗದ ಕಾಮಗಾರಿಯನ್ನು ಪರಿಶೀಲನೆ ನಡೆಸಿತು. ಆಯುಕ್ತರು ಒಪ್ಪಿಗೆ ನೀಡಿದ ಬಳಿಕ ಈ ನೂತನ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ.

ಜೋಡಿಹಳಿ ನಿರ್ಮಾಣ ಕಾರ್ಯ

ಜೋಡಿಹಳಿ ನಿರ್ಮಾಣ ಕಾರ್ಯ

ಧಾರವಾಡ-ಉಣಕಲ್ ನಡುವಿನ ಜೋಡಿ ಹಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಆದರೆ, ಹುಬ್ಬಳ್ಳಿ-ಉಣಕಲ್ ನಡುವಿನ 3 ಕಿ. ಮೀ. ಮಾರ್ಗದ ಕಾಮಗಾರಿ 2021ರ ಜನವರಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಮಾರ್ಗವೂ ಪೂರ್ಣಗೊಂಡರೆ ಅವಳಿ ನಗರದ ನಡುವಿನ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ.

  BJP ಅವ್ರು ಕೈ ಗೆ ಬಳೆ ಹಾಕೊಬೇಕು | DK Shivkumar | RR Nagar By Election | Oneindia Kannada
  ಗೋವಾ-ಕರ್ನಾಟಕ ಮಾರ್ಗ

  ಗೋವಾ-ಕರ್ನಾಟಕ ಮಾರ್ಗ

  ಕರ್ನಾಟಕ ಮತ್ತು ಗೋವಾದ ವಾಸ್ಕೋ ನಡುವಿನ ರೈಲು ಸಂಚಾರದ ಅವಧಿ ಕಡಿಮೆ ಮಾಡಲು ಹೊಸಪೇಟೆ-ವಾಸ್ಕೋ ನಡುವಿನ ಜೋಡಿ ಹಳಿ ನಿರ್ಮಾಣ ಯೋಜನೆಯನ್ನು 2010-11ರಲ್ಲಿ ಆರಂಭಿಸಲಾಯಿತು. ಸುಮಾರು 1,200 ಕೋಟಿ ರೂ.ಗಳು ವೆಚ್ಚದ ಕಾಮಗಾರಿ 2015ರಲ್ಲಿ ವೇಗ ಪಡೆದುಕೊಂಡಿತು.

  English summary
  Commission of Railway Safety (CRS) inspection held in the Unkal-Dharwad railway new line. Doubling works completed in the route.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X